Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಕೃತಿಯಲ್ಲಿ ಮಕ್ಕಳು ಹೆಚ್ಚು ಕಲಿಯುತ್ತಾರೆ : ಮೀರಾ ಶಿವಲಿಂಗಯ್ಯ

ಮಕ್ಕಳು ಶಾಲೆಯ ಜೊತೆಗೆ ಪ್ರಕೃತಿಯಲ್ಲಿ ಹೆಚ್ಚಿನ ವಿಷಯವನ್ನು ಕಲಿಯುತ್ತಾರೆ ಅವರಿಗೆ ಹೆಚ್ಚಿನ ಪ್ರೋತ್ಸಾಹವನ್ನು ಶಿಕ್ಷಕರು ಹಾಗೂ ಪೋಷಕರು ನೀಡಬೇಕು ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಗಳಾದ ಮೀರಾ ಶಿವಲಿಂಗಯ್ಯ ಅವರು ತಿಳಿಸಿದರು.

ಮಂಡ್ಯದ ತಾವರೆಕೆರೆಯ ಎಸ್.ಬಿ ಸಮುದಾಯ ಭವನದಲ್ಲಿ ಎಸ್.ಪಿ.ಎಜುಕೇಷನ್, ಮಾಂಡವ್ಯ ಸಿಂಬಾ ಕಿಡ್ಸ್ ವತಿಯಿಂದ ನಡೆದ ಸರಸ್ವತಿ ಪೂಜಾ ಕಾರ್ಯಕ್ರಮ, ಬಹುಮಾನ ವಿತರಣೆ ಮತ್ತು ಪದವಿ ಪ್ರದಾನ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮನಸ್ಸು ಬಹಳ ಮೃದು ಅವರು ಚಿಕ್ಕ ವಯಸ್ಸಿನಲ್ಲಿ ಆಸಕ್ತಿಯಿಂದ ಕಲಿಯುತ್ತಾರೆ, ಹಾಗಾಗಿ ಮಕ್ಕಳಿಗೆ ಪ್ರತಿದಿನ ಹೊಸ ಹೊಸ ವಿಷಯಗಳನ್ನು ತಿಳಿಸಬೇಕು. ಪ್ರಸ್ತುತದಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ತಿಳಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರತಿದಿನ ನಾವು ಉಪಯೋಗಿಸುವ ಮೊಬೈಲ್ ನಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಒಂದೇ ನಾಣ್ಯದ ಎರಡು ಮುಖಗಳಿದ್ದಾಗಿದೆ, ಆದ್ದರಿಂದ ಮಕ್ಕಳಿಗೆ ತಂತ್ರಜ್ಞಾನದ ಬಗ್ಗೆ ಬಹಳ ಎಚ್ಚರಿಕೆಯಿಂದ ಪರಿಚಯವನ್ನು ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.

ಎಸ್‌.ಪಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಡಾಬಿ ಶಿವಲಿಂಗಯ್ಯ, ಮಕ್ಕಳ ತಜ್ಞ ಡಾ.ಎಸ್. ಹರೀಶ್, ಕೃಷಿಕ ಲಯನ್ಸ್ ಆಡಳಿತಾಧಿಕಾರಿ ಕೆ.ಟಿ ಹನುಮಂತು, ಮಾಂಡವ್ಯ ಕಾಲೇಜಿನ ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್, ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ನ ಹೆಚ್.ಸರೋಜ, ಶೈಕ್ಷಣಿಕ ಪಾಲುದಾರ ಎಂ.ಅವಿನಾಶ್, ಸಂಯೋಜಕಿ ಶಮೀನಾ ಭಾನು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!