Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮಿಮ್ಸ್ ಭೂಮಿ ಒತ್ತುವರಿ ತೆರವು ಕುರಿತು ಸಭೆ ಕರೆಯಲು ಮನವಿ

ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೮ ಎಕರೆ ಭೂಮಿ ಒತ್ತುವರಿಯನ್ನು ತೆರವುಗೊಳಿಸುವ ಸಂಬಂದ ಅಗತ್ಯ ಸಭೆಯನ್ನು ಆಯೋಜಿಸುವಂತೆ ಮಂಡ್ಯ ಉಪವಿಭಾಗಾಧಿಕಾರಿಗಳಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ನೀಡಿದ್ದಾರೆ.

ಉಪವಿಭಾಗಾಧಿಕಾರಿ ಶಿವಮೂರ್ತಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ, ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮನವಿ ಪತ್ರ ನೀಡಿದ್ದು, ಕಳೆದ ಜುಲೈ ೧.ರಂದು ಜಿಲ್ಲಾಧಿಕಾರಿಗಳು ಮಂಡ್ಯ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಸಮಿತಿಯನ್ನು ರಚಿಸಿದ್ದು ಮೆಡಿಕಲ್ ಕಾಲೇಜು ಒತ್ತುವರಿ ತೆರವು ಸಂಬಂಧ ಅಗತ್ಯ ಕ್ರಮಕ್ಕೆ ಆದೇಶಿಸಿದ್ದಾರೆ.

ಸಮಿತಿ ರಚನೆಯಾಗಿ ೫೦ ದಿನಗಳು ಕಳೆದಿದ್ದು ಒತ್ತುವರಿ ತೆರವು ಸಂಬಂದ ಆಗಿರುವ ಬೆಳವಣಿಗೆಗಳನ್ನು ಮಂಡ್ಯದ ನಾಗರೀಕರಿಗೆ ತಿಳಿಸಬೇಕಿದೆ. ಈಗಾಗಲೇ ಕಿಷ್ಕಿಂಧವಾಗಿರುವ ಮೆಡಿಕಲ್ ಕಾಲೇಜು ವಿಸ್ತರಣೆ ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಸಮಿತಿ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಸಮಿತಿಯ ಸದಸ್ಯರ ಸಭೆ ಆಯೋಜಿಸುವಂತೆ ಕೋರಲಾಯಿತು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು ಈಗಾಗಲೇ ಗೂಗಲ್ ಸರ್ವೇ ಅರ್ಧದಷ್ಡು ಮುಗಿದಿದ್ದು.೧೯೪೧ ಹಾಗೂ ೧೯೪೮ ರಲ್ಲಿ ಎರಡು ಹಂತದಲ್ಲಿ ಆಸ್ಪತ್ರೆಗೆ ಜಾಗ ಭೂಸ್ವಾಧೀನವಾಗಿದ್ದು ಕಚೇರಿಯ ಲಭ್ಯ ದಾಖಲೆಗಳ ಆಧಾರದಲ್ಲಿ ಸರ್ವೇ ನಡೆದಿದೆ.ಸರ್ವೇ ಕಾರ್ಯ ಮುಗಿದೊಡನೆ ಸಂಪೂರ್ಣ ವರದಿಯೊಂದಿಗೆ ಸಭೆ ಆಯೋಜಿಸುವುದಾಗಿ ತಿಳಿಸಿದ್ದಾರೆ.

ಈ ನಡುವೆ ಸದರಿ ಪ್ರದೇಶದಲ್ಲಿ ಯಾವುದೆ ಖಾತೆ ಬದಲಾವಣೆ ಮಾಡದಂತೆ ನಗರಸಭೆ ಆಯುಕ್ತರಿಗೆ ಮೌಖಿಕವಾಗಿ ಸೂಚನೆ ನೀಡಿರುವುದಾಗಿ ಅವರು ಮುಖಂಡರಿಗೆ ಮಾಹಿತಿ ಒದಗಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ