Saturday, May 25, 2024

ಪ್ರಾಯೋಗಿಕ ಆವೃತ್ತಿ

ಸಂಭ್ರಮದಿಂದ ನಡೆದ ಬಿಸಿಲು ಮಾರಮ್ಮ ಹಬ್ಬ

ಮಂಡ್ಯದ ಗಾಂಧಿನಗರದಲ್ಲಿಂದು ಶ್ರೀ ಬಿಸಿಲು ಮಾರಮ್ಮ ದೇವಿಯ ಹಬ್ಬ ಸಹಸ್ರಾರು ಭಕ್ತಾದಿಗಳ ಉದ್ಘೋಷದ ನಡುವೆ ಸಂಭ್ರಮದಿಂದ ನಡೆಯಿತು. ಇಂದು ಬೆಳಿಗ್ಗೆಯಿಂದಲೇ ಗಾಂಧಿನಗರದಲ್ಲಿ ಸಂಭ್ರಮದ ಕಳೆ ತುಂಬಿ ತುಳುಕುತ್ತಿತ್ತು.

ಜನರು ತಮ್ಮ ತಮ್ಮ ಮನೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಹೊಸ ಉಡುಗೆ-ತೊಡುಗೆ ಧರಿಸಿದ ಜನರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ಹೆಣ್ಣು ಮಕ್ಕಳು ತಂಬಿಟ್ಟಿನ ಆರತಿಯೊಂದಿಗೆ ದೇವಾಲಯಕ್ಕೆ ಬಂದು ಮಾರಮ್ಮದೇವಿಗೆ ತಂಪು ಮಾಡಿದರು.

ನಂತರ ನಗರದ ನೂರಡಿ ರಸ್ತೆಯಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ತಂಬಿಟ್ಟಿನ ಆರತಿಯೊಂದಿಗೆ ಮೆರವಣಿಗೆಯಲ್ಲಿ ಬಂದ ಸಹಸ್ರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.

ಹಲವು ಭಕ್ತರು ಕೋಳಿ,ಕುರಿಗಳನ್ನು ಬಲಿ ನೀಡಿದರು. ಮನೆಗಳಲ್ಲಿ ಬಾಡೂಟದ ಘಮಲು ಪಸರಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!