Friday, November 20, 2026

ಪ್ರಾಯೋಗಿಕ ಆವೃತ್ತಿ

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರುಕುಳ ನೀಡಿದರೆ ಕಾನೂನು ಕ್ರಮ : ಡಾ. ಕುಮಾರ

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅದನ್ನು ಮೀರಿ ಸಾಲಗಾರರಿಗೆ ತೊಂದರೆ ನೀಡುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಖಿಲಾ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಗಳ ವಿವಿಧ ಬೇಡಿಕೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

2 ಲಕ್ಷದವರೆಗೆ ಜಾಮೀನು ರಹಿತ ಸಾಲವನ್ನು ನೀಡಲು ಅವಕಾಶವಿದ್ದು, 2 ಲಕ್ಷ ಸಾಲ ನೀಡಲು ಜಾಮೀನು ದಾಖಲೆಗಳನ್ನು ಕೇಳುವುದು ಕಂಡು ಬಂದಲ್ಲಿ ಸಂಸ್ಥೆಗಳಿಗೆ ನೋಟಿಸ್ ವಿತರಿಸಲಾಗುವುದು ಎಂದರು.

ಪಡಿತರ ಚೀಟಿದಾರರಲ್ಲಿ ಆದಾಯ ತೆರಿಗೆದರಾರರ ಪಡಿತರ ಚೀಟಿಯನ್ನು ರದ್ದು ಪಡಿಸಲು ಆದೇಶ ಹೊರಡಿಸಿರುವ ಅನ್ವಯ ಪಡಿತರ ಚೀಟಿಯನ್ನು ರದ್ದು ಪಡಿಸಲಾಗುತ್ತಿದ್ದು, ಕುಟುಂಬದಲ್ಲಿ ಯಾರೇ ಆದಾಯ ತೆರಿಗೆದಾರರಾಗಿದ್ದರು ಚೀಟಿ ರದ್ದಾಗುವ ಸಾಧ್ಯತೆಯಿರುತ್ತದೆ. ಈ ಬಗ್ಗೆ ಕುಟುಂಬಸ್ಥರು ಗಮನ ವಹಿಸಿ ಆದಾಯ ತೆರಿಗೆ ನೀಡದ ಪಡಿತರ ಚೀಟಿದಾರರ ಚೀಟಿ ರದ್ದಾಗಿದ್ದಲ್ಲಿ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವೃದ್ಧಾಪ್ಯವೇತನ ಮತ್ತು ವಿಧವಾ ವೇತನ ಸೌಲಭ್ಯ ಒದಗಿಸುವಲ್ಲಿ ಸಮಸ್ಯೆಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿರುವುದು ದೂರಿನಲ್ಲಿ ಕಂಡು ಬರುತ್ತಿದ್ದು, ವೃದ್ಧಾಪ್ಯವೇತನ ಹಾಗೂ ವಿಧವಾ ವೇತನ ಸೌಲಭ್ಯ ಒದಗಿಸುವಲ್ಲಿ ಅರ್ಹ ಫಲಾನುಭವಿಗಳನ್ನು ಅಲೆದಾಡಿಸುವುದು, ನಿರ್ಲಕ್ಷ್ಯತನ ತೋರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಅಕ್ಕಿ ವಿತರಿಸುವಲ್ಲಿ ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅನೇಕ ದೂರುಗಳು ಕಂಡು ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಎಂದು ಹೇಳಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಪ್ರತೀಕ್ ಹೆಗ್ಡೆ, ಮುಖಂಡರುಗಳಾದ ಭರತ್ ರಾಜ್, ಸುನೀತಾ, ಶೋಭಾ ಸೇರಿದಂತೆ ಇನ್ನಿತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ