Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಈಡೇರದ ರೆಸಿಡೆಂಟ್ ವೈದ್ಯರ ಬೇಡಿಕೆ ; 5 ದಿನಗಳಿಂದ ಮಿಮ್ಸ್ ಒಪಡಿ ಬಂದ್

ಮಂಡ್ಯ ನಗರದ ಮಿಮ್ಸ್ ಆವರಣದಲ್ಲಿ ಸತತ ಐದನೇ ದಿನವೂ ಒಪಿಡಿ ಬಂದ್ ಮಾಡಿ ಸ್ಟೇಫಂಡ್ ಹೆಚ್ಚಿಸುವಂತೆ ಹಾಗೂ ಕೊಲ್ಕತ್ತಾದ ಆರ್. ಜಿ ಕಾರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರನು ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಮುಂದುವರೆದ ಸ್ಥಾನೀಯ ವೈದ್ಯರ ಮೌನ ಪ್ರತಿಭಟನೆ ಮುಂದುವರೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ರವಿಕಿರಣ್, ನಮಗೆ ನ್ಯಾಯ ಸಿಗೋವರೆಗೂ ಪ್ರತಿಭಟನೆ ಮುಂದುವರೆಯಲಿದ್ದು, ಐದನೇ ದಿನವಾದರೂ ಸರ್ಕಾರ ಯಾವುದೇ ರೀತಿ ಸ್ಪಂದಿಸುತ್ತಿಲ್ಲ, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಎಮರ್ಜೆನ್ಸಿ ಸರ್ವಿಸ್ ಕೂಡ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ವೈದ್ಯಕೀಯ ವಿದ್ಯಾರ್ಥಿನಿ ಖುಷಿ ಮಾತನಾಡಿ, ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಾಮಾನ್ಯ ವಿಚಾರವಲ್ಲ, ನಾವೆಲ್ಲರೂ ಸೇರಿ ಈ ವಿಷಯಕ್ಕೆ ನ್ಯಾಯ ಸಿಗುವವರೆಗೂ ಹೋರಾಡಬೇಕು ಎಂದರು.

ಆಸ್ಪತ್ರೆಗಳಾಗಲಿ ಯಾವುದೇ ತರಹದ ವರ್ಕ್ ಪ್ಲೇಸ್ ಗಳಾಗಲಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗದೆ ಇರುವಂತಹ ವಾತಾವರಣವನ್ನು ಮೇಲಾಧಿಕಾರಿಗಳು ಕಲ್ಪಿಸಬೇಕು, ಗಂಡು ಮಕ್ಕಳು ಸಹ ಸ್ವಲ್ಪ ಎಚ್ಚರಿಕೆ ವಹಿಸಿ ಮಾನವೀಯತೆಯಿಂದ ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೈದ್ಯರಾದ ಮೇರಿನ್ ಜೋಸೆಫ್ ಸೇರಿದಂತೆ ವೈದ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ