Tuesday, April 30, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ ಹೇಳಿಕೆಯಿಂದ ಮಹಿಳಾ ಸಮುದಾಯಕ್ಕೆ ಅಪಮಾನ| ಅತ್ಯಾಚಾರ ವಿರೋಧಿ ಆಂದೋಲನ ಸಮಿತಿ ಖಂಡನೆ

ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂಧರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಪ್ರತಿತಿಂಗಳು ಸಿಗುವ 2000 ಸಾವಿರ ರೂ.ಗಳಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಮತ್ತು ಅವರ ಮನೆಯ ಗಂಡಸರ ಪರಿಸ್ಥಿತಿ ಸ್ವಲ್ಪ ಯೋಚಿಸಬೇಕಾಗಿದೆ ಎಂದು ಹೇಳಿಕೆ ನೀಡಿರುವುದು ಇಡೀ ಮಹಿಳಾ ಸಮುದಾಯಕ್ಕೆ ಅಪಮಾನವಾಗಿದೆ ಎಂದು ಅತ್ಯಾಚಾರ ವಿರೋಧಿ ಆಂದೋಲನ ಸಮಿತಿ ಖಂಡಿಸಿದೆ.

ಈ ಕುರಿತು ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡರಾದ ಪೂರ್ಣಿಮ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹೆಣ್ಣುಮಕ್ಕಳ ಘನತೆಗೆ ಕುಂದುಂಟು ಮಾಡುವ ಮಾತನಾಡುತ್ತಿರುವುದು ಖಂಡನೀಯ ಎಂದರು.

ಇವತ್ತಿನ ದಿನದಲ್ಲಿ ಜನ ಸಾಮಾನ್ಯರು ಕೊಂಡು ತಿನ್ನುವ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಸಿಲಿಂಡರ್, ಪೆಟ್ರೋಲ್ ಡೀಸೆಲ್, ಬೇಳೆಕಾಳುಗಳು ಅಷ್ಟೇ ಯಾಕೆ ಹೆಣ್ಣು ಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡ್ ನ ಬೆಲೆ ಎಷ್ಟು ಎಂದು ಕುಮಾರಸ್ವಾಮಿ ರವರ ಕನಿಷ್ಠ ಜ್ಞಾನಕ್ಕೆ ಅರಿವಿಗೆ ಬಂದಿದೆಯಾ…? ಕಾಂಗ್ರೆಸ್ ಯೋಜನೆಗಳಿಂದ ಅದೆಷ್ಟೋ ಬಡಕುಟುಂಬಗಳ ಜೀವನ ಮಟ್ಟ ಸ್ವಲ್ಪವಾದರೂ ಸುಧಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.ಇಂತಹ ಸಂಧರ್ಭದಲ್ಲಿ ಇವರ ನೀಚ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಹೆಣ್ಣು ಮಕ್ಕಳ ಬಗ್ಗೆ, 2000 ಹಣದಿಂದ ದಿಕ್ಕು ತಪ್ಪುತ್ತಿದ್ದಾರೆ ಎಂಬ ಅಹಂಕಾರದ ಮಾತುಗಳು ರಾಜ್ಯದ ಹೆಣ್ಣು ಮಕ್ಕಳ ಘನತೆಗೆ ಅವಮಾನವಾಗಿದೆ. ಇಂತಹವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಪದೇ ಹೆಣ್ಣು ಮಕ್ಕಳಿಗೆ ಅಪಮಾನ 

ನೀಚ ರಾಜಕಾರಣದಲ್ಲಿ ಬೇಳೆ ಬೇಯಿಸಿಕೊಳ್ಳಲೂ ಹಣ್ಣುಗಳನ್ನು ಅಡ್ಡವಾಗಿ ಪದೇ ಪದೇ ಹೆಣ್ಣು ಮಕ್ಕಳಿಗೆ ಅಪಮಾನ ಡುವ ಕೆಲಸವಾಗುತ್ತಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ತಕ್ಷಣ ಮತಿಭ್ರಮಣೆಗೆ ಒಳಗಾದಂತೆ ಕೀಳು ಮಟ್ಟದ ರಾಜಕಾರಣ ಮಾಡಲು ಹೊರಟಿರುವ ಕುಮಾರ ಸ್ವಾಮಿರವರು ತಮ್ಮ ರಾಜಕೀಯದಲ್ಲಿ ದಿಕ್ಕು ತಪ್ಪಿದ್ದಾರೆ ಎಂಬುದಕ್ಕೆ ಸ್ಪಷ್ಟವಾಗಿದೆ. ಈ ಹಿಂದೆಯೂ ಸಂಸದರಾಗಿದ್ದ ಚಿತ್ರನಟಿ ರಮ್ಯಾ ಖಾಸಗಿ ಜೀವನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಲ್ಲದೆ, ಬೆಳಗಾವಿಯ ಒಂದು ಕಾರ್ಯ ಕ್ರಮದಲ್ಲಿ ರೈತ ಮಹಿಳೆ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಇಷ್ಟು ದಿನ ಎಲ್ಲಿ ಮಲಗಿದ್ದೆ ಎಂದು ಅವಿವೇಕದ ಮಾತುಗಳನ್ನಾಡಿದ್ದರು ಇದು ಖಂಡನೀಯ.

ಕಳೆದ ಬಾರಿ ಸಂಸದರಾದ ಸುಮಲತಾ ಅಂಬರೀಶ್ ರವರು ಚುನಾವಣೆಗೆ ನಿಕಲ್ ಕುಮಾರ ಸ್ವಾಮಿಯ ವಿರುದ್ಧ ನಿಂತಾಗ, ಗಂಡ ಸತ್ತ ಮುಂಡೆಗೆ 3 ತಿಂಗಳಿಗೆ ರಾಜಕೀಯ ಬೇಕಾ ? ನಿಂದನೆಗೆ ಒಳಪಡಿಸಿದ್ದು ಇದೆ ಮತ್ತವರ ಹಿಂಬಾಲಕರು, ಗಣಿಗಾರಿಕೆಯ ವಿರುದ್ಧ ಮಾತನಾಡುತ್ತಾ ಕೆಆರ್ ಎಸ್ ಡ್ಯಾಮ್ ನ ನೀರು ಸೊರಿಕೆಯ ವಿಚಾರವಾಗಿ ಧ್ವನಿ ಎತ್ತಿದ್ದಕ್ಕೆ ಸುಮಲತಾಳನ್ನು ಡ್ಯಾಮ್ ಗೆ ಅಡ್ಡ ಮಲಗಿಸಿ ಎಂಬ ದುರಂಕಾರದ ಮಾತುಗಳನ್ನಾಡಿದ ಕುಮಾರಸ್ವಾಮಿ ಎಂಬುವರು ಇವತ್ತಿನ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದೇ ಸುಮಲತಾರ ಮನೆಯ ಬಾಗಿಲಿಗೆ ಹೋಗಿ ಸಮಾನರು, ಸಹೋದರಿ ಎಂದೆಲ್ಲಾ ನಾಟಕವಾಡುತ್ತಿದ್ದಾರೆ. .

ಗೋಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಸಿ. ಕುಮಾರಿ, ಮಹಿಳಾ ಮುನ್ನಡೆಯ ಶಿಲ್ಪ ಬಿ.ಎಸ್., ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಧಮಣಿ, ಅರುಣೋದಯ ಕಲಾತಂಡದ ಮಂಜುಳ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಂಜಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!