Wednesday, November 18, 2026

ಪ್ರಾಯೋಗಿಕ ಆವೃತ್ತಿ

ಜಮೀರ್ ಅಹಮದ್ ಮಾತನಾಡುವ ಭಾಷೆ ಬದಲಿಸಿಕೊಳ್ಳಬೇಕು; ಎ.ಮಂಜು

ರಾಜ್ಯದ ಮಂತ್ರಿ ಜಮೀರ್ ಅಹಮದ್ ಖಾನ್ ಮಾತನಾಡುವ ಭಾಷೆ ಬದಲಿಸಿಕೊಳ್ಳಬೇಕು. ಒಕ್ಕಲಿಗ ಸಮುದಾಯದ ಬಗ್ಗೆ ಮಾತನಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಅರಕಲಗೂಡು ಶಾಸಕ ಎ.ಮಂಜು ಎಚ್ಚರಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವೇಗೌಡರು ದಲಿತ ನಾರಾಯಣ ಎಂಬ ಕಾರ್ಯಕ್ರಮದ ಮೂಲಕ ಜಮೀರ್‌ಅಹಮದ್ ಅವರನ್ನು ಶಾಸಕರನ್ನಾಗಿ ಮಾಡಿದರು, ಈ ಕೆಲಸ ಆಗದಿದ್ದರೆ, ಅವರು ಇಂದು ಶಾಸಕ, ಸಚಿವರಾಗುವ ಅವಕಾಶ ದೊರೆಯುತ್ತಿರಲಿಲ್ಲ, ಅವರ ಮೂಲ ಕಸುಬಿನಲ್ಲೇ ಉಳಿಯುತ್ತಿದ್ದರು ಎಂದು ಹೇಳಿದರು.

ಅಂದು ಇಬ್ರಾಹಿಂ ಸೇರಿದಂತೆ ಹಲವು ಮುಸಲ್ಮಾನ್ ಮುಖಂಡರಿದ್ದರು, ಆದರೆ ಇಂದು ಅವರನ್ನ ಮೀರಿ ಬೆಳೆಯುವಂತೆ ಮಾಡಿದ್ದು, ದೇವೇಗೌಡರು ಹಾಗೂ ದೇವೇಗೌಡರ ಕುಟುಂಬ ಎನ್ನುವುದನ್ನು ಮರೆಯಬಾರದು, ಆದದ್ದನ್ನು ನೆನಪುಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಗೌಡರ ಬಗ್ಗೆ ಮಾತನಾಡುವ ಚಪಲ ಜಮೀರ್ ಅವರಿಗಿದೆ. ನಮ್ಮ ಸಮುದಾಯದ ಬಗ್ಗೆ ಅಗೌರವವಾಗಿ ಮಾತುಗಳನ್ನಾಡಿರುವುದು ನೋವು ಎಂದಿದೆ ಎಂದರು.

ದೇವೇಗೌಡರ ಕುಟುಂಬವನ್ನು ಖರೀದಿ ಮಾಡುತ್ತೇನೆ. ಸಮುದಾಯದ ನಾಯಕರನ್ನು ಖರೀದಿ ಮಾಡುತ್ತೇನೆ ಎಂದು ಹೇಳುವಂತಹದ್ದು, ಬಾರಿ ನೋವು ತಂದಿದೆ. ಇಂತಹ ಮಾತುಗಳು ಖಂಡನೀಯ, ಭಗವಂತ ಅಪ್ಪಿತಪ್ಪಿ ಅವಕಾಶ ನೀಡಿದ್ದು, ಒಳ್ಳೆಯ ಮಾತನಾಡುವುದನ್ನು ಕಲಿಯಿರಿ, ಓಟಿಗಾಗಿ ಒಂದು ಸಮುದಾಯ ಓಲೈಸಲು ಮಾತನಾಡಿದರೆ, ಅದೇ ಸಮುದಾಯದ ಬಗ್ಗೆ ಕೆಟ್ಟ ಸಂದೇಶ ಹೋಗಲಿದ್ದು, ಇದನ್ನು ನೀಡಬೇಕು ಎಂದು ಗುಡುಗಿದರು.

ಚನ್ನಪಟ್ಟಣದಲ್ಲಿ ಗೆದ್ದವರು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಹೋಗಿದ್ದಾರೆ. ಎರಡೂ ಬಾರಿ ಚುನಾವಣೆ ಎದುರಿಸಿ ನಿಖಿಲ್ ಸೋತಿದ್ದಾರೆ ಮೂರನೇ ಸೋಲು ಆಗಬಾರದು. ಕ್ಷೇತ್ರದ ಮತದಾರರ ಮೇಲೆ ನಂಬಿಕೆ ಇದೆ ನಿಖಿಲ್ ಕೈ ಹಿಡಿಯುತ್ತಾರೆ. ಚನ್ನಪಟ್ಟಣದ ಮತದಾರರು ಸ್ವಾಭಿಮಾನಿ ಮತದಾರರು. ನಿಖಿಲ್ ಗೆಲ್ಲಿಸಿ ಕ್ಷೇತ್ರದ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಚನ್ನಪಟ್ಟಣಲ್ಲಿ ಸಿ.ಪಿ.ಯೊಗೇಶ್ವರ್ ಭಗಿರತ ಎನಿಸಿಕೊಂಡಿದ್ದಾರೆ. ನಾನು ನೋಡಿದ್ದೇನೆ ೧೬ ಕೆರೆಗೆ ನೀರು ತುಂಬಿಸಿದ್ದಾರೆ. ಕುಮಾರಸ್ವಾಮಿ ನೂರಾರು ಕರೆಗಳನ್ನು ತುಂಬಿಸಿದ್ದಾರೆ. ಆದರೆ ಆ ಕೆರೆಗಳನ್ನು ತುಂಬಿಸಲು ಡ್ಯಾಂ ಕಟ್ಟಿದ್ದು ಯಾರು? ಅದನ್ನು ಮಾತ್ರ ಯಾರು ಹೇಳಲ್ಲ ಎಂದ ಅವರು, ಯೋಗೇಶ್ವರ್ ಅವರನ್ನು ಜೆಡಿಎಸ್ ನಿಲ್ಲಲು ಒಪ್ಪಿ ಉಲ್ಟಾ ಹೊಡೆದಿದ್ದಾರೆ ಎಂದು ದೂರಿದರು.

ಗೋಷ್ಠಿಯಲ್ಲಿ ಅರವಿಂದ್, ಮಧುಸೂಧನ್, ನಾಗೇಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ