ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ಅಲ್ಲಮಪ್ರಭು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲೂ ಶಾಸಕ ಬಸವರಾಜ್ ಯತ್ನಾಳ್ ವಕ್ಫ್ ಆಸ್ತಿ ಬಗ್ಗೆ ತಕರಾರು ತೆಗೆದು ಭಾಷಣ ಮಾಡುವ ವೇಳೆ ಸ್ಥಳೀಯರು ಮತ್ತು ಭಕ್ತರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ. ಈಗ ಈ ವಿಡಿಯೋ ಕೂಡ ವೈರಲ್ ಆಗಿದೆ.
ನಮ್ಮ ಹಿಂದೂಗಳ ಭೂವಿಯನ್ನು ಯಾರ ಹೆಸರಲ್ಲಿ ಇದೆ ಎಂದು ತೆಗೆದರೆ ಅದರಲ್ಲಿ ಕೆಲವರದ್ದು ವಕ್ಫ್ ಆಸ್ತಿ ಎಂದು ಬರುತ್ತಿದೆ ಎಂದು ಯತ್ನಾಳ್ ಹೇಳಿದ ತಕ್ಷಣ, ಸ್ಥಳೀಯರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ರಾಜಕೀಯ ಮಾಡಬೇಡಿ. ಇದು ಯಾವ ಕಾರ್ಯಕ್ರಮ ನೀವು ಏನು ಮಾತಾಡ್ತೀರಿ? ದೇವಸ್ಥಾನ ನಿರ್ಮಾಣಕ್ಕೆ ಎಲ್ಲಾ ಸಮುದಾಯ ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು 6 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
#Karnataka: @BJP4Karnataka‘s Bijapur City MLA Basanagouda Patil Yatnal compelled to walk out of a religious event in Terdal after people objected against @BasanagoudaBJP dragging Waqf land row.
BJP MLA Yatnal was one of the chief guests during the inaugural ceremony of Allama… pic.twitter.com/PlWVB9GWRP
— South First (@TheSouthfirst) November 11, 2024
“>
ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನೀವೇನು ರಾಜಕೀಯದವರ ಯಾಕ್ ಈತರ ಮಾತಾಡ್ತಿದ್ದೀರಿ ಎಂದು ಕೇಳಿದಾಗ. ನಾವ್ ರಾಜಕೀಯದವರು ಅಲ್ಲ ರೀ ನೀವ್ ಇಲ್ಲಿ ರಾಜಕೀಯ ಮಾತು ಆಡಬೇಡಿ ಎಂದು ಹೇಳಿದ ಬಳಿಕ ಯತ್ನಾಳ್ ಭಾಷಣ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದು ಹೋದರು.




