Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ

ಶ್ರೀರಂಗಪಟ್ಟಣದ ತಾಲ್ಲೂಕಿನಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ನೂರಾರು ಭಕ್ತರ ಜೊತೆ ತೆರಳುತ್ತಿದ್ದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರು ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಅಭಿನಂದಿಸಿ ಸ್ವಾಗತ ಕೋರಿದರು.

ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ಕಳೆದ ಭಾರಿ ನೂರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನಿಂದ ಆರಂಭಗೊಂಡ ಪಾದಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಂದಿನ ವರ್ಷ ನನ್ನ ಕೈಲಾದಷ್ಟು ನಡೆದು ಮಾದಪ್ಪನ ಸೇವೆ ಮಾಡುತ್ತೇನೆಂದು ಅಂದುಕೊಂಡಿದ್ದೇ,ಅದರಂತೆ ನಮ್ಮ ಪ್ರೀತಿಯ ದೇವರು ಮಾದಪ್ಪನ ದರ್ಶನಕ್ಕೆ ಪಾದಯಾತ್ರೆಯನ್ನು ಕೈಗೊಂಡಿದ್ದೇನೆ, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ, ದೇವರು ಎಲ್ಲರಿಗೂ ಆರೋಗ್ಯ, ನೆಮ್ಮದಿಯ ಜೊತೆಗೆ ಸಮೃದ್ದಿ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆಂದು ಹೇಳಿದರು.

ಪ್ರತಿಯೊಂದು ಊರಿನಲ್ಲಿ ಎಲ್ಲಾ ಸಮುದಾಯದವರು ರಾಮಮಂದಿರವನ್ನು ಕಟ್ಟಿಕೊಂಡು ಪೂಜೆ ಮಾಡಿಕೊಂಡು ಬರುತ್ತಿದ್ದೇವೆ, ಧನುರ್ಮಾಸದ ವೇಳೆ ಗರುಡಕಂಬವನ್ನು ತೆಗೆದುಕೊಂಡು ರಾಮ ಭಜನೆಯ ಮೂಲಕ ಊರೇಲ್ಲಾ ಮೆರವಣಿಗೆ ಮಾಡುತ್ತಿದ್ದೇವು, ಶ್ರೀರಾಮ ಪ್ರತಿಷ್ಠಾಪನೆಯಲ್ಲಿ ಜಾತಿ ಒಲೈಕೆ ಮಾಡಲಾಗುತ್ತಿದ್ದು, ತಾನುಕೂಡ ರಾಮನ ಭಕ್ತನಾಗಿರುವುದರಿಂದ ವಿರುದ್ದ ಹೇಳಿಕೆ ನೀಡುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ,ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ನಿರ್ದೇಶಕ ಮೊಳೇದೊಡ್ಡಿ ಲಿಂಗರಾಜು, ಎಸ್‌ಎಲ್‌ಎನ್ ಸೊಸೈಟಿ ನಿರ್ದೇಶಕ ಎಂಎಲ್ ಚೌಡಪ್ಪ, ಯೂತ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ಶಿವಮಾದೇಗೌಡ, ಗಂಗೇರಾಜೇಆರಸ್, ಶಿವಕುಮಾರ್, ರವಿ, ಸತೀಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!