Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| 50 ವರ್ಷಗಳ ಸಮಸ್ಯೆಗೆ ಶಾಸಕರ ಶಾಶ್ವತ ಪರಿಹಾರ: ರೈತರ ಹರ್ಷ

ಕೆ.ಆರ್.ಪೇಟೆ ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರಸ್ತೆ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯುವ ಮೂಲಕ ಶಾಸಕ ಹೆಚ್.ಟಿ.ಮಂಜು ರೈತರ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಿಂಭಾಗಕ್ಕೆ ಹೊಂದಿಕೊಂಡಂತೆ ರೈತರ ನೂರಾರು ಎಕರೆ ಕೃಷಿ ಭೂಮಿಯಿದ್ದು ರೈತರು ಬೇಸಾಯ ಚಟುವಟಿಕೆಗಳನ್ನು
ನಡೆಸುವುದು ಸೇರಿದಂತೆ ತಮ್ಮ ಜಮೀನಿಗೆ ಜಾನುವಾರುಗಳು ಮತ್ತು ಎತ್ತಿನ ಬಂಡಿಗಳೊಂದಿಗೆ ಓಡಾಡಲು ಅಗತ್ಯವಾಗಿ ಬೇಕಾಗಿದ್ದ ಮೂಲ ಕಚ್ಚಾ ರಸ್ತೆಯನ್ನು ಮೇಲ್ಕಂಡ ಎರಡೂ ಶಿಕ್ಷಣ ಸಂಸ್ಥೆಗಳು ಕಾಂಪೌಂಡ್ ರ್ಮಿಸಿ ರೈತರು ಓಡಾಡಲು ತೀವ್ರವಾದ ಸಂಕಷ್ಠವನ್ನು ಅನುಭವಿಸುತ್ತಿದ್ದರು.

ಇದನ್ನು ಕಣ್ಣಾರೆ ಕಂಡಿದ್ದ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು, ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಪಾಲಿಟೆಕ್ನಿಕ್ ಕಾಲೇಜಿನ ಮಧ್ಯಭಾಗದಲ್ಲಿ ರೈತರು ಓಡಾಡಲು ಬಳಸುತ್ತಿದ್ದ ಕಚ್ಚಾ ರಸ್ತೆಗೆ ಪರ್ಯಾಯವಾಗಿ ಬಸ್ ಡಿಪೋಗೆ ಹೊಂದಿಕೊಂಡಂತೆ ಕಾಂಪೌಂಡ್ ಪಕ್ಕದಲ್ಲಿ 30 ಅಡಿ ವಿಸ್ತಿರ್ಣದ ತಾತ್ಕಾಲಿಕ
ರಸ್ತೆಯನ್ನು ನಿರ್ಮಿಸಿ ರೈತೆರು ಸೇರಿದಂತೆ ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡುವಂತೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹುಲಿವಾನ ನಾಗರಾಜು ಅವರ ಸಮಕ್ಷಮದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ ಹಾಗೂ
ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ ಅವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ನಿಸರ್ಗಪ್ರಿಯ ಸರ್ಕಾರಿ ಪಾಲಿಟೆಕ್ನಿಕ್‌ಗೆ ಸೇರಿದ ವಿಶಾಲವಾದ ಜಾಗವನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಸೇರಿದಂತೆ ಬಸ್ ಡಿಪೋ ನಿರ್ಮಿಸಲು ಈಗಾಗಲೇ ನೀಡಲಾಗಿದೆ. ಸರ್ಕಾರಿ ಪಾಲಿಟೆಕ್ನಿಕ್ ನಿರ್ಮಾಣಕ್ಕೆ ರೈತರು ನೀಡಿರುವ ಜಮೀನಿಗೆ ಹೊಂದಿಕೊಂಡಂತೆ ಪಾಲಿಟೆಕ್ನಿಕ್ ಕಟ್ಟಡದ ಹಿಂಭಾಗದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಇರುವುದರಿಂದ ಮೂಲ ನಕಾಶೆಯಲ್ಲಿ ರಸ್ತೆಗೆ ಬಿಟ್ಟಿರುವ ಜಾಗವನ್ನು ಮುಚ್ಚಿ ಕಾಂಪೌಂಡ್ ನಿರ್ಮಿಸಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಮಾನವೀಯ ನೆಲೆಗಟ್ಟಿನ ಆಧಾರದಂತೆ ಪರ್ಯಾಯ ರಸ್ತೆಗೆ ಜಾಗಬಿಟ್ಟುಕೊಡುವುದು ಅನಿವಾರ್ಯವಾಗಿದೆ. ಆದ್ದರಿಂದ ಪ್ರಸ್ತುತ ಪಾಲಿಟೆಕ್ನಿಕ್ ಕಟ್ಟಡದ ಪಕ್ಕದಲ್ಲಿ ನಿರ್ಮಿಸಿರುವ ಬಸ್ ಡಿಪೋಗೆ ಹೊಂದಿಕೊಂಡಂತೆ 30 ಅಡಿ ಅಗಲದ ರಸ್ತೆಯ ನಿರ್ಮಾಣಕ್ಕೆ ನಾಲೆಯಿಂದಲೇ ಕ್ರಮ ಕೈಗೊಂಡು ರಸ್ತೆ ನಿರ್ಮಿಸಿರುವ ಜಾಗವನ್ನು ಭೂದಾಖಲೆಯಲ್ಲಿ ನಮೂದಿಸಿಕೊಟ್ಟು ಅನುಕೂಲ ಮಾಡಿಕೊಡುತ್ತೇನೆ ಎಂದು ಶಾಸಕರ ಆದೇಶಕ್ಕೆ ಪೂರಕವಾಗಿ ಉತ್ತರಿಸಿದರು.

ಸಭೆಯಲ್ಲಿ ಹಾಜರಿದ್ದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ನಾಗರಾಜು ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡಗಳ ಪಕ್ಕದಲ್ಲಿ ಒಂದು ಬದಿಗೆ ಹೊಂದಿಕೊ0ಡ0ತೆ ರೈತರು ಅಡ್ಡಾಡಲು ರಸ್ತೆ ನಿರ್ಮಿಸಿಕೊಡಲು ನಮ್ಮದೇನೂ ಅಭ್ಯಂತರವಿಲ್ಲ. ರೈತರು ಓಡಾಡಲು ರಸ್ತೆಯನ್ನು ನಿರ್ಮಿಸಿಕೊಡು ವುದರಿಂದ ರೈತರ ರಸ್ತೆ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿದಂತಾಯಿತಲ್ಲದೇ ನಮ್ಮ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳಿಗೂ ಸಹಾಯವಾಗಲಿದೆ. ಕಾಲೇಜಿನ ಆವರಣದಲ್ಲಿಸಾರ್ವಜನಿಕರು ಹಾಗೂ ವಾಹನಗಳ ಓಡಾಟದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ಪ್ರಸ್ತುತ
ಪರ್ಯಾಯವಾಗಿ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ರೈತರ ಸಮಸ್ಯೆಗೆ ಶಾಶ್ವತವಾದ ಪರಿಹಾರ ದೊರಕುತ್ತಿದೆ ಎಂದರು.

ಶಾಸಕ ಮಂಜು ಮಾತನಾಡಿ, ರೈತರ ಐವತ್ತು ವರ್ಷದ ಹೋರಾಟಕ್ಕೆ ಪ್ರತಿಫಲ ದೊರಕಿದೆ. ಪಾಲಿಟೆಕ್ನಿಕ್ ಕಟ್ಟಡದ ಹಿಂಭಾಗದ ಜಮೀನುಗಳಿಗೆ ರೈತರು ತಮ್ಮ ಬಂಡಿಗಳು ಹಾಗೂ ಜಾನುವಾರುಗಳೊಂದಿಗೆ ಹೋಗಲು ಅನುಕೂಲವಾಗುವಂತೆ ಬಸ್ ಡಿಪೋನ ಕಾಂಪೌಂಡ್‌ಗೆ ಹೊಂದಿ ಕೊಂಡಂತೆ ಪರ್ಯಾಯವಾಗಿ 30 ಅಡಿ ವಿಸ್ತೀರ್ಣದ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಡಲಾಗುತ್ತಿದೆ. ಈ ರಸ್ತೆಯನ್ನೇ ಶಾಶ್ವತವಾಗಿ ಅಭಿವೃದ್ಧಿಪಡಿಸಿ ರೈತರಿಗೆ ಹಾಗೂ ಎರಡೂ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಜವಾಭ್ಧಾರಿ ಯನ್ನು ಸ್ವತಃ ನಾನೇ ಹೊರುತ್ತೇನೆ. ರಸ್ತೆ ನಿರ್ಮಿಸಲು ಬೇಕಾದ ವಿಶೇಷ ಅನುದಾನವನ್ನು
ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಮಾಜಿ ಸದಸ್ಯ ಹೇಮಂತ್‌ ಕುಮಾರ್, ಹಟ್ಟಿಮನೆ ಸಿದ್ಧರಂಗಪ್ಪ, ವಿಠಲಾಪುರ ಜಯರಾಂ, ಕೆ.ಎಸ್.ಮಂಜುನಾಥ್, ಶೀಳನೆರೆ ಭರತ್‌ಕುಮಾರ್, ಸೈಕಲ್‌ಶಾಫ್ ಜವರಪ್ಪ, ದಾವಣಗೆರೆ ಮಂದಿರಮೇಶ್, ಕೆ.ಎಸ್.ಗೋಪಾಲ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!