Saturday, July 13, 2024

ಪ್ರಾಯೋಗಿಕ ಆವೃತ್ತಿ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ

‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತಂಗಿದ್ದ ಚಂದ್ರಶೇಖರ್ ಗುರೂಜಿಯನ್ನು ಇಂದು ಮಧ್ಯಾಹ್ನ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಿಸೆಪ್ಶನ್ ಕೌಂಟರ್ನಲ್ಲಿ ಅವರು ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಒಬ್ಬಾತ ಅವರ ಕಾಲಿಗೆ ಬೀಳುತ್ತಿದ್ದಂತೆ ಮತ್ತೊಬ್ಬ ಚಾಕುವಿನಿಂದ ಅವರ ಎದೆಗೆ ಇರಿಯತೊಡಗುತ್ತಾನೆ.

ನಂತರ ಕಾಲಿಗೆ ಬಿದ್ದಾತ ಆತನೂ ಕೂಡ ಸ್ವಾಮೀಜಿಯ ದೇಹಕ್ಕೆ ಸಿಕ್ಕ ಸಿಕ್ಕ ಕಡೆ ಇರಿದು ಪರಾರಿಯಾಗುತ್ತಾರೆ.ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹೋಟೆಲ್‌ ಸಿಬ್ಬಂದಿಗಳು ಗುರೂಜಿಯ ಹತ್ತಿರ ಹೋಗಲು ಯತ್ನಿಸಿದರೂ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚುವುದನ್ನು ಕಂಡು ಹೆದರಿ ಹಿಂದೆ ಸರಿದಿದ್ದಾರೆ. ಗುರೂಜಿ ಅವರಿಗೆ ಪರಿಚಿತರಾದವರೇ ಈ ದುಷ್ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಜುಲೈ ಎರಡರಂದು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತಂಗಿದ್ದ ಚಂದ್ರಶೇಖರ ಗುರೂಜಿ ನಾಳೆ ಹೋಟೆಲ್ ತೆರವುಗೊಳಿಸಬೇಕಿತ್ತು.ಆದರೆ ಇಂದು ಪರಿಚಯಸ್ಥರಿಂದ ಕೊಲೆಯಾಗಿದ್ದಾರೆ.ಹೋಟೆಲ್ ಸಿಬ್ಬಂದಿಗಳ ಪ್ರಕಾರ ಈ ಇಬ್ಬರು ದುಷ್ಕರ್ಮಿಗಳು ಎರಡು ದಿನದ ಹಿಂದೆಯೇ ಗುರೂಜಿ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ.

ಚಂದ್ರಶೇಖರ ಗುರೂಜಿ ಅವರು ಸರಳ ವಾಸ್ತು ಕಾರ್ಯಕ್ರಮದಿಂದ ದೇಶ ವಿದೇಶಗಳಲ್ಲಿ ಬಹಳ ಖ್ಯಾತಿ ಪಡೆದಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!