ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮದ್ದೂರು ವಿಭಾಗ ವ್ಯಾಪ್ತಿಯಲ್ಲಿ PMSG-MBY ಮಾದರಿ ಸೋಲಾರ್ ಗ್ರಾಮ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸರ್ಕಾರದ ಆದೇಶದನ್ವಯ ಮಾದರಿ ಸೋಲಾರ್ ಗ್ರಾಮ ಯೋಜನೆಯಡಿಯಲ್ಲಿ ಭಾರತ ಸರ್ಕಾರ ‘ಸೌರ ವಿದ್ಯುತ್’ ಉತ್ಪಾದನೆಯ ಪಾಲನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಮದ್ದೂರು ತಾಲ್ಲೂಕಿನ 2 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ
ಎಂ ಎನ್ ಆರ್ ಐ ಮಾದರಿ ಸೂಚಿಯಂತೆ ಪ್ರತಿ ಜಿಲ್ಲೆಯಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಾಲಿ ವಿದ್ಯುತ್ ಜಾಲದಿಂದ ಸಂಪರ್ಕ ಹೊಂದಿರುವ ಕಂದಾಯ ಗ್ರಾಮಗಳು ಸ್ಪರ್ಧಿಸುವ ಅವಕಾಶ ಇರುವುದರಿಂದ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಮತ್ತು ಕೆಸ್ತೂರು ಗ್ರಾಮಗಳನ್ನು ‘ಪೊಟೆನ್ಸ್ಯಯಲ್ ಕ್ಯಾಂಡಿಡೇಟ್’ ಗ್ರಾಮಗಳಾಗಿ ಗುರುತಿಸಲಾಗಿದೆ.
‘ಪೊಟೆನ್ಸ್ಯಯಲ್ ಕ್ಯಾಂಡಿಡೇಟ್’ ಗ್ರಾಮಗಳಾಗಿ ಆಯ್ಕೆಯಾಗಿರುವ ಗ್ರಾಮಗಳಿಗೆ 2025 ರ ಜುಲೈ 01 ರಿಂದ 6 ತಿಂಗಳ ಅವಧಿ (31-12-2025) ನೀಡಲಾಗಿದ್ದು, ಈ ಅವಧಿಯಲ್ಲಿ ವಿವಿಧ ಯೋಜನೆಗಳನ್ನು ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸಿ ಹೆಚ್ಚಿನ ನವೀಕರಿಸಬಹುದಾದ ಸೌರವಿದ್ಯುತ್ ಉತ್ಪಾದನೆಯ ಗುರಿಯನ್ನು ಸಾಧಿಸುವ ಗ್ರಾಮವನ್ನು ಮಾದರಿ ಸೌರಗ್ರಾಮ ಎಂದು ಆಯ್ಕೆ ಮಾಡಲಾಗುವುದು.
ಆಯ್ಕೆ ಆಗುವ ಮಾದರಿ ಸೌರ ಗ್ರಾಮಕ್ಕೆ ರೂ.1 ಕೋಟಿ ಕೇಂದ್ರಿಯ ಹಣಕಾಸಿನ ಸಹಾಯ (ಸಿಎಫ್‌ಎ) ಅನುದಾನ ನೀಡಲಾಗುವುದು. ಈ ಚಟುವಟಿಕೆಗಳನ್ನು ಆಯಾಯ ಪಂಚಾಯತ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದ ಟಾಸ್ಟ್ ಫೋರ್ಸ್ ಸಮಿತಿ ರಚಿಸಲಾಗುವುದು.
ನಿರೀಕ್ಷಿತ ಫಲಾನುಭವಿಗಳ ಮನೆಬಾಗಿಲಿಗೆ ಹೋಗಿ ಪ್ರಚಾರ ಮಾಡುವುದು, ಜನಸಾಮಾನ್ಯರಲ್ಲಿ ಸೌರ ವಿದ್ಯುತ್ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು. ಸರ್ಕಾರದ ಪಿ.ಎಂ.ಸೂರ್ಯ ಫರ್-ಮುಪ್ತ್ ಬಿಜಲಿ ಯೋಜನೆ. ಕೆಯುಎಸ್‌ಯುಎಂ-ಬಿ, ಕೆಯುಎಸ್‌ಯುಎಂ-ಸಿ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಲು ಉತ್ತೇಜಿಸುವುದು.
ಪಂಚಾಯತ್‌ಗಳು ನಿರೀಕ್ಷಿತ ಫಲಾನುಭವಿಗಳು, ಬ್ಯಾಂಕ್‌ಗಳು, ಅನುಮೋದನೆ ಹೊಂದಿರುವ ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸುವುದು ಆಗಿದೆ ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿಯಂತೆ ಸಮಿತಿಯನ್ನು ರಚಿಸಲಾಗಿದೆ.
, ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ಗ್ರಾಮ ಪಂಚಾಯಿತಿ ಸದಸ್ಯರಗಳೊಂದಿಗೆ ಸಮನ್ವಯ ಸಾಧಿಸಿ ಆಯ್ಕೆಯಾಗಿರುವ ಗ್ರಾಮಗಳ ಜನರನ್ನು ಮನ ಒಲಿಸಿ, ಹೆಚ್ಚು Renewable/Solar ಶಕ್ತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮಗಳ ನಡುವೆ ಸ್ಪರ್ಧೆ ಏಪರ್ಡಿಸುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಪಾಲಿಸಿ ಯೋಜನೆಯನ್ನು ಯಶಸ್ವಿಯಾಗಿಸಬೇಕಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕ್ರಿಯೆಯಲ್ಲಿ ತಿಳಿಸಿದ್ದಾರೆ.




