Friday, September 20, 2024

ಪ್ರಾಯೋಗಿಕ ಆವೃತ್ತಿ

ಭೀಕರ ಬರಗಾಲದಲ್ಲೂ ಪರಿಹಾರ ನೀಡದ ಮೋದಿ ಸರ್ಕಾರ: ಭರತ್ ರಾಜ್ ಕಿಡಿ

ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ಬರ ನಿರ್ವಹಣೆಯಲ್ಲಿ ಎಡವಿರುವ ಕೇಂದ್ರ ಸರ್ಕಾರದ ಮೋದಿ ಸರ್ಕಾರ, ರಾಜ್ಯಕ್ಕೆ ನಯಾಪೈಸೆ ಪರಿಹಾರವನ್ನು ನೀಡದೇ, ನಿರ್ಲಕ್ಷ್ಯ ಧೋರಣೆ, ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್. ಎಲ್. ಭರತ್ ರಾಜ್ ಕಿಡಿಕಾರಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ನಾಗರಿಕರಿಗೆ ಕುಡಿಯುವ ನೀರಿಗೂ ಬಹಳ ಅಭಾವ ಉಂಟಾಗಿದೆ. ಜಾನುವಾರುಗಳಿಗೆ ನೀರು, ಮೇವು ಇಲ್ಲದೆ ತತ್ತರಿಸುತ್ತಿವೆ. ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿದೆ, ರೈತ ದಿಕ್ಕು ತೋಚದಂತಾಗಿ ಕಂಗಾಲಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಅನುಗುಣವಾಗಿ ಸೂಕ್ತ ಪರಿಹಾರ ನೀಡಿ ಜನತೆಯ ಹಿತ ಕಾಪಾಡಬೇಕಾಗಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ 150 ದಿನ ಕೆಲಸ ಕೊಡಬೇಕು ಕಳೆದ ಮೂರ್ನಾಲ್ಕು ತಿಂಗಳಿಂದ ಕೆಲಸ ಮಾಡಿದರೂ ವೇತನ ಕೊಡಲಿಲ್ಲ ತಕ್ಷಣ ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಪ್ರಮೀಳಾ, ಗುರುಸ್ವಾಮಿ, ಮಹಾದೇವು, ಹಿಪ್ಜುಲ್ಲಾ, ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಸತೀಶ್, ಮೂರ್ತಿ, ಮಹೇಶ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!