Thursday, September 19, 2024

ಪ್ರಾಯೋಗಿಕ ಆವೃತ್ತಿ

ತಾಯಿಯ ಸಾವಿನ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಗ 


  • ಮಂಡ್ಯನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದ ಘಟನೆ

  • ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಶವ : ರೈಲಿಗೆ ಸಿಲುಕಿ ಮಗ ಆತ್ಮಹತ್ಯೆ

ತಾಯಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾದ ಬೆನ್ನಲ್ಲೇ ಮಗನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಡ್ಯದಲ್ಲಿ ನಡೆದಿದೆ.

ಸುಭಾಷ್ ನಗರದ ಕ್ರಿಶ್ಚಿಯನ್ ಕಾಲೋನಿಯ ನಿವೃತ್ತ ಶಿಕ್ಷಕಿ ವೀಣಾ ಜೋ ದಿನಿ ಮತ್ತು ಇವರ ಮಗ ನಿತಿನ್ ಸಾವನ್ನಪ್ಪಿದವರಾಗಿದ್ದು. ಇವರ ಸಾವಿನ ಸುತ್ತ ಹಲವು ಅನುಮಾನ ಸೃಷ್ಟಿಸಿದೆ.

ಕ್ರಿಶ್ಚಿಯನ್ ಕಾಲೋನಿ ಎರಡನೇ ಕ್ರಾಸ್ ನ ಮನೆಯಲ್ಲಿ ಶಿಕ್ಷಕಿ ವೀಣಾ ಜೋದಿನಿ ರ ಮೃತದೇಹ ಹೊಸ ವರ್ಷದ ಮೊದಲ ದಿನವಾದ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರ ಮಗ ನಿತಿನ್ ಶವ ಮಂಡ್ಯ ನಗರದ ಹೊರವಲಯ ವಿ.ಸಿ ಫಾರಂ ಗೇಟ್ ನ ಬಳಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಘಟನೆಯ ವಿವರ

ಅಭಿನವ ಭಾರತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ವೀಣಾ, ಮಗನ ಜೊತೆಯಲ್ಲಿ ನಿವೃತ್ತ ಜೀವನ ಮಾಡುತ್ತಿದ್ದರು. ಆರ್‌.ಪಿ ರಸ್ತೆಯಲ್ಲಿದ್ದ ತಮಗೆ ಸೇರಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ಮಾರಾಟ ಮಾಡಿದ್ದರು, ಆಸ್ತಿ ಮಾರಾಟದ ಹಣವನ್ನು ಮಗ ನಿತಿನ್ ದುಂದು ವೆಚ್ಚ ಮಾಡಿ ಬೇಕಾಬಿಟ್ಟಿ ಕಳೆದಿದ್ದನು, ಅಷ್ಟೇ ಅಲ್ಲದೆ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದನು. ಅಲ್ಲದೇ ಹಣಕ್ಕಾಗಿ ತಾಯಿ ಯನ್ನು ಪೀಡಿಸುತ್ತಿದ್ದನು ಎನ್ನಲಾಗಿದೆ.

ಕ್ರಿಸ್ಮಸ್ ಹಬ್ಬವನ್ನು ತಾಯಿ -ಮಗ ಇಬ್ಬರೂ ಆಚರಿಸಿದ್ದರು. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಬೇಕಾಗಿತ್ತು. ಅಷ್ಟರಲ್ಲೆ ಹೊಸ ವರ್ಷದ ಮೊದಲ ದಿನ ತನ್ನ ಮನೆಯಲ್ಲಿ ನಿವೃತ್ತ ಶಿಕ್ಷಕಿ ವೀಣಾ ಜೋದಿನಿ ಮೃತದೇಹ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ನಿವೃತ್ತ ಶಿಕ್ಷಕಿ ಎತ್ತರವಾಗಿದ್ದು, ಆದರೆ ಅಷ್ಟು ಎತ್ತರ ಇರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸೃಷ್ಟಿಯಾಗಿದೆ. ಮಗನೇ ತಾಯಿಯನ್ನು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಮಂಡ್ಯನಗರದ ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್ ಗೆ ರವಾನಿಸಿದ್ದರು, ತಾಯಿಯ ಸಾವಿನ ಬಗ್ಗೆ ನಿತಿನ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.

ತಾಯಿಯ ಶವ ಶವಗಾರದಲ್ಲಿ ಇರುವ ಸಮಯದಲ್ಲಿ ಮಗನ ಶವ ಕೂಡ ಸೋಮವಾರ ಬೆಳಗ್ಗೆ ವಿ ಸಿ ಫಾರಂ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಒಟ್ಟಾರೆಯಾಗಿ ತಾಯಿಯ ಸಂಶಯಾಸ್ಪದ ಸಾವು, ಮಗನ ಆತ್ಮಹತ್ಯೆಯೂ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಿವೃತ್ತ ಶಿಕ್ಷಕಿಯ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಬೇಕಾಗಿದ್ದು, ಮಗನ ಆತ್ಮಹತ್ಯೆ ಕಾರಣವನ್ನು ಪತ್ತೆ ಹಚ್ಚಬೇಕಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!