Saturday, July 13, 2024

ಪ್ರಾಯೋಗಿಕ ಆವೃತ್ತಿ

ಚಲಿಸುವ ಮಕ್ಕಳ ಪರಿಸರ ಶಿಬಿರ

ಚಲಿಸುವ ಮಕ್ಕಳ ಪರಿಸರ ಶಿಬಿರ ಐದು ದಿನದ್ದಾಗಿದ್ದು, ಈ ವರ್ಷದ ಈ ಶಿಬಿರದ ಮುಖ್ಯ ವಸ್ತು “picturised note taking concept” ಮಕ್ಕಳು ಪ್ರತಿದಿನ ಚಿತ್ರಗಳನ್ನು ತಾವೇ ಬಿಡಿಸುದರ ಮೂಲಕ ತಮ್ಮ ದಿನನಿತ್ಯದ ಪರಿಸರದ ಅನುಭಗಳನ್ನು ದಾಖಲಿಸುತ್ತಾರೆ.

ಈ ಶಿಬಿರ ಕ್ಯಾತನಹಳ್ಳಿಯಲ್ಲಿ ಪ್ರಾರಂಭವಾಗಿ, ನಂತರ ಹರವು ಐತಿಹಾಸಿಕ ಸ್ಮಾರಕ, ಮೇಲುಕೋಟೆಯ ಸುತ್ತಲ ನಾರಾಯಣಪುರ್ ಕಾಡು ರಾಯಗೋಪುರ, ನಂತರ ಅಲ್ಲಿಂದ ಕ್ಯಾತನ ಹಳ್ಳಿ ಮರಳಿಬಂದು ಮೂರನೇ ದಿನ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆ ಯ ಸಮೀಪವಿರುವ ಮೂರ್ನಾಡು ಎಂಬ ಹಳ್ಳಿಯ ಸುತ್ತಲ ಪರಿಸರ ದಲ್ಲಿ ಶಿಬಿರದ ವಸತಿಯ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಅಲ್ಲಿಂದಲೇ ಭಾಗಮಂಡಲ ರಾಜಸಿಟ್, ಮಡಿಕೇರಿ ಪರಿಸರ ಅಧ್ಯಯನ ಮತ್ತೇ ಮುರ್ನಾಡು ನಿಂದ ಮರಳಿ ಬರುವರು. 22ನೇ ಏಪ್ರಿಲ್ ಶುಕ್ರವಾರ ಮರಳಿ ಮೈಸೂರು ಮೂಲಕ ತಮ್ಮ ಸ್ವಸ್ಥಾನವನ್ನು ಮಕ್ಕಳು ತಲುಪಲಿದ್ದಾರೆ.

ಈ ಪರಿಸರ ಶಿಬಿರದ ನಿರ್ದೇಶಕರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಹೇಳಲೇಬೇಕು. ಮನು ಕೃಷ್ಣಮೂರ್ತಿ, ಮೈಸೂರು ಆಮೆಚೂರ್ ನ್ಯಾಚುರಲಿಸ್ಟ್ ಸಂಸ್ಥೆಯ ಸ್ಥಾಪಕರು. ‘ಮ್ಯಾನ್ ಮನು’, ‘ಪೆಲಿಕಾನ್ ಮನು’ ಎಂದು ಮೈಸೂರು ಕೇಂದ್ರಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪರಿಸರ ಹೋರಾಟ ಅಥವಾ ಜಾಗೃತಿ ಸಮಿತಿಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಕ್ಕಳಿಗೆ ಪರಿಸರದ ಮೂಲಕ, ಪರಿಸರದ ಮದ್ಯದಲ್ಲಿ ಪರಿಣಾಮಕಾರಿಯಾಗಿ ಬೋಧಿಸಬಲ್ಲ ಅದ್ಬುತ ಪರಿಸರ ವಿಜ್ಞಾನಿ. ಪರಿಸರ ನಮ್ಮ ಇಂದಿನ ತುರ್ತು.ಅದರ ಕಾಳಜಿಯನ್ನು ನಮ್ಮ ಮುಂದಿನ ತಲೆಮಾರಿಗೆ ದಾಟಿಸಬೇಕಾಗಿದೆ. ಅದರ ಜವಾಬ್ದಾರಿ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

ಈ ಶಿಬಿರದ ಬಗೆಗೆ ಇಲ್ಲಿರುವ ಚಿತ್ರಗಳಲೇ ಮಾತನಾಡುತ್ತಿವೆ. ಪರಿಸರದಲ್ಲಿ ಮುಕ್ತವಾಗಿ ಮಕ್ಕಳು ಅಲೋಚಿಸುವುದು, ಯಾವುದೇ ಬಂಧನಗಳಿಲ್ಲದೆ ಸಂತೋಷ ಪಡುವುದು, ತಮಗೆ ಅನಿಸಿದ್ದನು ಹೇಳುವುದು, ತಮ್ಮ ಸಮಕಾಲೀನದವರ ಜೊತೆ ಬೆರೆಯುವುದು, ಸಾಮಾಜೀಕರಣಗೊಳ್ಳುವುದು ಇದನ್ನು ಎಲ್ಲಾ ಆಯಾಮಗಳಲ್ಲೂ ನೊಡಬಹುದು.

ಈ ಅಶಯಗಳನ್ನಿಟ್ಟುಕೊಂಡು ಶ್ರೀರಂಗಪಟ್ಟಣ ಗಾಂಧಿ ಛಾವಡಿಯ ಡಾ. ಸುಜಯ್ ಕುಮಾರ್, ಕವಿ ಶಿವಕುಮಾರ್, ನವೀನ್ ಕುಮಾರ್, ನಾಗರಾಜು,ಹಾಗೆಯೇ ಚಂದ್ರಣ್ಣ ಎನ್.ಎಸ್.ಕ್ಯಾತನಹಳ್ಳಿ.ಇವರ ಪ್ರಾಯೋಜಕತ್ವದ ಮೂಲಕ ಈ ಬಗೆಯ ಪರಿಸರದ ಶಿಬಿರಗಳನ್ನು ವರ್ಷದಲ್ಲಿ 3 ದಿನ ಅಥವಾ 4 ದಿನ ಇಲ್ಲವೇ ಒಂದು 5 ದಿನದ ಶಿಬಿರಗಳನ್ನುಎಂದಿನಂತೆ ಸಂದರ್ಭೋಚಿತವಾಗಿ ಹಮ್ಮಿಕೊಳ್ಳುವಂತೆ ಇಆ ಬಾರಿಯೂ ಹಮ್ಮಿಕೊಳ್ಳಲಾಗಿದೆ.

ಈ ಮಕ್ಕಳ ಪರಿಸರ ಶಿಬಿರಕ್ಕೆ cwcಯ ಅಶ್ವಥನಾರಾಯಣ್ ರವರು ಕೂಡ ಉತ್ತಮವಾದ ಪ್ರೋತ್ಸಾಹವನ್ನು ನೀಡಿದ್ದಾರೆ. ಶಿಬಿರದ ಅಯೋಜಕರು ಈ ಬಗ್ಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಶಿಬಿರದ ಬಗೆಗೆ ಶ್ರೀರಂಗಪಟ್ಟಣದ ಗಾಂಧಿ ಛಾವಡಿಯ ಡಾ. ಸುಜಯ್ ಕುಮಾರ್ ರವರು,

“ಬದುಕಿನಲ್ಲಿ ಮಧುರ ಕನಸುಗಳು ಸಿಗುವುದು ಸತ್ಯದೊಂದಿಗೆ ತದಾತ್ಮಾ ಹೊಂದಿದಾಗ ಮಾತ್ರ. ನಿಸರ್ಗ ನಿತ್ಯ ಸತ್ಯ. ಮಕ್ಕಳು ನಿರ್ಮಲ ಹೃದಯರು, ನಿಮ್ಮ ಶಿಭಿರದಲ್ಲಿ ಅವರ ಮನಸು ಅರಳಿ ಮೂಡುವುದರಲ್ಲಿ ಸಂಶಯವೇ ಇಲ್ಲಾ. ಅವರೆಂದಿಗೂ ಈ ಶಿಬಿರದ ದಿನಗಳನ್ನು ಮರೆಯುವುದಿಲ್ಲ” ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಶಿಬಿರಗಳನ್ನು ಎಲ್ಲಾ ವಯಸ್ಕ ಕಲಿಕಾ ಮನಸ್ಸುಗಳಿಗೂ ನಾವು ವಿಸ್ತರಿಸಬಹುದಾಗಿದೆ.

ಈ ಶಿಬಿರಗಳು ಮಕ್ಕಳಿಗೆ ಮಾತ್ರವಲ್ಲದೆ, ಮಕ್ಕಳ ಪೋಷಕರಿಗೂ ಕೂಡ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳ ಬೌದ್ಧಿಕ ಬೆಳವಣಿಗೆಯನ್ನು ಅರಿತು ಕೊಳ್ಳುವುದು, ಮಕ್ಕಳ ವಿದ್ಯಾಭ್ಯಾಸದ ಕಲಿಕಾ ಹಂತದಲ್ಲಿ ಅವರ ಆಸಕ್ತಿಗಳನ್ನು ಗುರುತಿಸುವುದು, ಆಸಕ್ತಿ ಕ್ಷೇತ್ರಗಳನ್ನು ಗುರುತಿಸುವುದು, ಪೋಷಕರಾಗಿ ಮಕ್ಕಳ ಜೊತೆ ಸಾಮಾಜೀಕರಣದ ಪ್ರಕ್ರಿಯೆಯಲ್ಲಿ ಒಂದಾಗುವುದು ಇವೇ ಮೊದಲಾದ ಸೂಕ್ಷ್ಮ ಸಂಗತಿಗಳನ್ನು ಶಿಬಿರದಲ್ಲಿ ತಿಳಿಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಚಂದ್ರಣ್ಣ ಇವರ ಮೊಬೈಲ್ ಸಂಖ್ಯೆಗೆ 974132077 ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.


Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!