Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಕುರಿತು : ಪ್ರೊ. ಬಿ. ಜಯಪ್ರಕಾಶ್ ಗೌಡ

ಶ್ರೀಮತಿ ನಾಗರೇವಕ್ಕರಿಗೆ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನದ ಸಂಧರ್ಭದಲ್ಲಿ ಪ್ರೊ.ಬಿ.ಜಯಪ್ರಕಾಶ್ ಗೌಡರವರು, ಕವಿತಾ ಸ್ಮಾರಕ ಪ್ರಶಸ್ತಿಯ ಹಿನ್ನೆಲೆಯನ್ನು ತಿಳಿಸುತ್ತಾ ಮಾತನಾಡಿದರು.

ಡಾ.ರಾಗೌ ರವರು ಈ ನಾಡಿನ ಬಹುದೊಡ್ಡ ವಿದ್ವಾಂಸರಲ್ಲಿ ನಿಜಕ್ಕೂ ದೊಡ್ಡವರು. ಇದು ಉತ್ಪ್ರೇಕ್ಷೆಯ  ಮಾತಲ್ಲ. ಅವರ ಅಧ್ಯಯನ, ಬರವಣಿಗೆ  ಮತ್ತು ಅವರ ವ್ಯಕ್ತಿತ್ವವು ಬಹಳ ದೊಡ್ಡದ್ದು ಎಂದರು.

ವಿದ್ವಾಂಸರಿಗೆ ಇರಬಹುದಾದಂತಹ, ಸಂಕೋಚ, ಎಲ್ಲಾ ರೀತಿಯ ಮುಜುಗರ, ಎಲ್ಲಾ ರೀತಿಯ ಹಿಂಜರಿಕೆ ಇದು ರಾಗೌರಲ್ಲಿ ಕೂಡಾ ಇದೆ. ಏಕೆಂದರೆ ವಿದ್ವತ್ ಆ ರೀತಿಯಲ್ಲಿ ಮನುಷ್ಯರನ್ನು ಬೆಳೆಸುತ್ತದೆ, ಬೆಳೆಯಬೇಕಾಗಿರುವ ರೀತಿಯು ಕೂಡ ಹೌದು ಎಂದರು. ಏನಗಿಂತ ಕಿರಿಯರಿಲ್ಲ ಎನ್ನುವಂತಹ ಬಸವಣ್ಣನವರ ಮಾತಿಗೆ ಅನುಗುಣವಾಗಿ ನಡೆದುಕೊಳ್ಳುವಂತಹವರು ಡಾ. ರಾಗೌರವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ರಾಗೌರವರ ಮಗಳು ಆಕಾಲಿಕವಾಗಿ ಮರಣಹೊಂದಿದ ಸಲುವಾಗಿ, ಅ ನೋವನ್ನು ಭರಿಸಲೋಸ್ಕರವಾಗಿ  ಯಶೋಧ ರಾಗೌ ಎನ್ನುವ ಟ್ರಸ್ಟನ್ನು ಪ್ರಾರಂಭಿಸಿ, ಸುಮಾರು 20 ವರ್ಷಗಳಿಂದ ನಡೆಸಿದರು. ಅದರ ಉದ್ದೇಶವೆನೆಂದರೆ, ಪ್ರತಿವರ್ಷವು ಕೂಡ ಮಹಿಳೆಗೆ ಸಂಬಂಧಪಟ್ಟ ಹಾಗೆ, ಒಂದು ಉಪನ್ಯಾಸವನ್ನು ಏರ್ಪಡಿಸೋದು, ಆ ಸಂದರ್ಭದಲ್ಲಿ ಉಪನ್ಯಾಸದ ವಿಷಯವನ್ನು ಕುರಿತಾದಂತಹ ಪುಸ್ತಕವನ್ನು ಹೊರತರುವಂತಹದ್ದು ಮತ್ತು 15000 ಸಾವಿರ ಪ್ರಶಸ್ತಿಯನ್ನು ಒಬ್ಬ ಸಾಧಿತ ಮಹಿಳೆಗೆ ನೀಡುವಂತಹದು.

ಇದನ್ನು ನಿರಂತರವಾಗಿ ಬಹಳ ಶ್ರದ್ಧೆಯಿಂದ, ವಿಶ್ವಾಸದಿಂದ, ನಿಷ್ಟೆಯಿಂದ ಮೈಸೂರಿನಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಚಟುವಟಿಕೆಗಳನ್ನು ನೋಡಿ, ನಾನು ಮಂಡ್ಯ ಜಿಲ್ಲೆಗೆ ಸೇರಿದವನು,  ನನ್ನ ಒಂದಷ್ಟು ಋಣ ಸಂದಾಯವಾಗಲಿ. ನನ್ನ ಮಗಳ ಹೆಸರಿನಲ್ಲಿ ಬುದ್ಧ ಪೂರ್ಣಿಮೆಯ ದಿನ ಒಂದು ಉಪನ್ಯಾಸ ಮಾಡಿಸಿ, ಒಂದು ಪುಸ್ತಕವನ್ನು ತೆಗೆದುಕೊಂಡು ಬನ್ನಿ ಎಂದು ರಾಗೌ ತಿಳಿಸಿದರು ಎಂದರು.

ಈ ಪ್ರಕಾರ ನಾವು ಈಗಾಗಲೇ 13 ಉಪನ್ಯಾಸವನ್ನು ಮಾಡಿಸಿದ್ದೇವೆ. ಇದರಲ್ಲಿ 12 ಪುಸ್ತಕಗಳು ಹೊರಬಂದಿದೆ. ಅದರಲ್ಲಿ ಬಹಳಷ್ಟು ಪುಸ್ತಕಗಳು ಮಾರಾಟವಾಗಿವೆ. ಮೈಸೂರಿನಲ್ಲಿ  ಲೋಕಪ್ಪನವರು, ರಾಜೇಂದ್ರ ಪ್ರಿಂಟರ್‍ಸ್ ನಿಂದ 21 ವರ್ಷಗಳ ಪ್ರಶಸ್ತಿಯ ಪುಸ್ತಕಗಳು ಇಲ್ಲಿ ಅಚ್ಚಾಗಿವೆ. ಹತ್ತತ್ತು ವರ್ಷಕ್ಕೆ ಒಂದೊಂದು ವಾಲ್ಯುಂ ತಂದಿದ್ದಾರೆ.  21 ವರ್ಷಗಳಿಗೆ ಎರಡು ವಾಲ್ಯುಂ ಅಗುತ್ತೆ.  ನಮ್ಮ 13 ಉಪನ್ಯಾಸದ ಪಸ್ತಿಕೆಗಳನ್ನು ಸೇರಿಸಿದರೆ ಮಹಿಳೆಗೆ ಸಂಬಂಧಪಟ್ಟಂತೆ 33 ವಿಷಯಗಳನ್ನು ಒಳಗೊಂಡಂತಹ ಪುಸ್ತಕಗಳಿವೆ. ಕರೊನಾ ಕಾರಣದಿಂದ ಒಂದು ವ‍ರ್ಷ ಪುಸ್ತಿಕೆಯನ್ನು ತರಲು ಸಾಧ್ಯವಾಗಿಲ್ಲ ಎಂದರು.

ಕರ್ನಾಟಕದ ಯಾವುದೇ ಒಂದು ವಿಶ್ವವಿದ್ಯಾಲಯದ ಮಹಿಳಾ ವಿಭಾಗವು ಕೂಡ,  ಮಹಿಳೆಯರ ಸಮಸ್ಯೆಯನ್ನು ಕುರಿತಾದಂತಹ, ಚಿಕ್ಕ ಚಿಕ್ಕ ಇಂತಹ ಉಪನ್ಯಾಸವನ್ನು ಏರ್ಪಡಿಸಿ, ಪುಸ್ತಕವನ್ನು ತಂದಿರತಕ್ಕಂತಹ ನಿದರ್ಶನಗಳು ಇಲ್ಲಾ. ಇಂತಹ ಕಾರ್ಯವನ್ನು ಯಶೋಧ ರಾಗೌ ಟ್ರಸ್ಟ್ ಮತ್ತು ಕರ್ನಾಟಕ ಸಂಘ ಮಾಡಿದೆ ಎನ್ನುವಂತಹದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.

ಏಕೆಂದರೆ ಮನುಷ್ಯ ಹುಟ್ಟುತ್ತಾನೆ, ಬದುಕುತ್ತಾನೆ, ಸಾಯುತ್ತಾನೆ, ಆದರೆ ಬದುಕಿದ ಸಂದರ್ಭದಲ್ಲಿ ಯಾವ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋದ ಅನ್ನುವುದು ಪ್ರದಾನವಾಗುತ್ತದೆ.

ರಾಗೌ ಅವರ ಮಗಳು ಸಾಯಬಾರದ ವಯಸ್ಸಿನಲ್ಲಿ  ನಿಧನರಾಗಿದ್ದು ನಮ್ಮೆಲ್ಲರಿಗೂ ನೋವಾಗುತ್ತೆ. ಆದರೆ ಆ ನೋವನ್ನು ಎಲ್ಲಿಯವರಗೆ ಯಾವ ರೀತಿಯಲ್ಲಿ ತೀರಿಸಿಕೊಳ್ಳಬೇಕು, ಯಾವ ರೀತಿಯಲ್ಲಿ ಆಕೆಯನ್ನು ನೆನೆದುಕೊಳ್ಳಬೇಕು ಎನ್ನುವುದಕ್ಕೆ ಇದಕ್ಕಿಂತ ಸಾರ್ಥಕವಾದ ಕೆಲಸ ಬೇರೆ ಯಾವುದು ಅಲ್ಲಾ ಎಂದರು.

ಮಹಿಳೆಗೆ ಸಂಬಂಧಪಟ್ಟ ಉಪನ್ಯಾಸದ  33 ಪುಸ್ತಕಗಳು ಬಂದಿರೋದು ಶಾಶ್ವತವಾಗಿ ಕವಿತ ಹೆಸರನ್ನು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಉಳಿಸುತ್ತದೆ, ಇದಕ್ಕಿಂತ ಮಿಗಿಲಾದ ಪ್ರಶಸ್ತಿಯನ್ನು ನಾವು ಕವಿತಾಗೆ ಕೊಡಲು ಸಾಧ್ಯವಿಲ್ಲ ಎಂದರು.

ಇಂದು ಬುದ್ದ ಪೂರ್ಣಿಮೆ, ಬುದ್ಧನ ಶಾಂತಿ ನಮ್ಮೆಲ್ಲರಿಗೂ ದೊರಕಬೇಕಾಗುತ್ತದೆ. ಗೌತಮ ಬುದ್ಧ ಒಂದೇ ಒಂದು ಮಾತನ್ನು ಹೇಳಿದ್ದು, ಜಗತ್ತನ್ನು ಪ್ರೀತಿಸುವುದನ್ನು ಕಲಿತುಕೊಳ್ಳಿ ಎಂದು ಹೇಳಿದ್ದಾರೆ. ಇದು ಬಹಳ ಸುಲಭವಲ್ಲ, ಇದು ಸಾಧ್ಯನಾ ಎನ್ನುವಂತಹದು ಅನಿಸುತ್ತದೆ. ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಅಂದರೆ, ಅದು ಒಂದು ಪ್ರೀತಿ ಮಾತ್ರ ಎಂದು ತಿಳಿಸಿದರು.

ಪ್ರೀತಿ ಇಲ್ಲದೆ ಮೇಲೆ ಹೂ ಆರಳಿತು ಹೇಗೆ ಎನ್ನುವ ಮಾತನ್ನು ಕವಿ ಶಿವರುದ್ರಪ್ಪನವರು ಹೇಳುತ್ತಾರೆ. ಪ್ರೀತಿ ಒಂದೇ ನಮ್ಮೆಲ್ಲರನ್ನು ಬಂಧಿಸುವಂತಹ, ಜೀವಿಸುವಂತಹ, ಆರೋಗ್ಯಪೂರ್ಣವಾಗಿ ಇರಿಸುವಂತಹ ಶಕ್ತಿ ಇರುವುದು, ಒಂದೇ ಒಂದು ಸಂಜೀವಿನಿ ಇರತಕ್ಕಂತಹದು ಅದು ಪ್ರೀತಿಗೆ ಮಾತ್ರ.

ಆ ಪ್ರೀತಿಯನ್ನು ಹೊರಸೂಸುವುದು ಹೇಗೆ ಅಂದ್ರೆ, ನಾವು ಮಂದಸ್ಮಿತರಾಗಿರಬೇಕು. ಮಂದಹಾಸ ನಮ್ಮ ತುಟಿಯ ಹಂಚಿನಲ್ಲಿ ಯಾವಾಗಲೂ ಇದ್ರೆ, ನಮ್ಮನ್ನು ನೋಡಿದವರೆಲ್ಲಾ ಸಂತೋಷ ಪಡುತ್ತಾರೆ. ಅದರೆ ಅದು ಅಷ್ಟು ಸುಲಭವಲ್ಲ.

ಆದರೆ ಬುದ್ದನ ಒಂದು ನಗು ಸಾವಿರಾರು ಜನರ ಸಂಕಟವನ್ನು ಸಮಸ್ಯೆಯನ್ನು ನಿವಾರಣೆ ಮಾಡಿದೆ. ಜಗತ್ತಿನ ಮಹಾ ಬೋಧಕರಲ್ಲಿ ಬುದ್ಧ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾನೆ. ಇಂತಹ ಬುದ್ದನ ಪೌರ್ಣಿಮೆಯ ದಿನ ಕವಿತಾ ಅವರನ್ನು ನೆನಸಿಕೊಳ್ಳುವ ಅವಕಾಶವನ್ನು ಡಾ.ರಾಗೌ ದಂಪತಿಗಳು ನಮಗೆ ಮಾಡಿಕೊಟ್ಟಿದ್ದಾರೆ.

ಇವತ್ತಿಗೆ 21 ವರ್ಷವಾಗಿದೆ, ಕರ್ನಾಟಕ ಸಂಘದಲ್ಲಿ ಹಲವಾರು ಸಾಹಿತ್ಯ ಚಟುವಟಿಗೆಗಳು ನಡೆಯುತ್ತಿದೆ. ನಿಮ್ಮೆಲ್ಲರಿಗೂ ಹಿನ್ನೆಲೆಯಿದೆ, ಕರ್ನಾಟಕ ಸಂಘ ಒಳ್ಳೆಯ ಕೆಲಸ ಮಾಡುತ್ತಿದೆ, ನನಗೆ ಭರವಸೆಯಿದೆ, ಅದ್ದರಿಂದ ನಮ್ಮ ಟ್ರಸ್ಟ್ ನ ವತಿಯಿಂದ 15000 ರೂ ನೀಡುತ್ತೇವೆ ನೀವು ಈ ಸ್ಮಾರಕ ಪ್ರಶಸ್ತಿಗೆ ವಿನಿಯೋಗಿಸಿಕೊಳ್ಳಿ ಎಂದು ರಾಗೌ ಹೇಳಿದಾಗ, ನಮ್ಮ ಕರ್ನಾಟಕ ಸಂಘದದಿಂದ ನಾವು ಹೇಗಿದ್ದರೂ ಈ ಕಾರ್ಯಕ್ರಮ ಮಾಡುತ್ತೇವೆ, ನೀವು ಕೊಡುವ 15000 ರೂ ಗಳನ್ನು ಯಾವ ಸಾಧಕಿಗೆ ಆಯ್ಕೆ ಮಾಡುತ್ತೇವೆಯೋ, ಆ ಪ್ರಶಸ್ತಿಯ ಹಣವನ್ನು ಅವರಿಗೆ ನೀಡುತ್ತೇವೆ ಎಂದು ಹೇಳಿ ಈ ವ‍ರ್ಷದಿಂದ ನಾವು ಪ್ರಾರಂಭ ಮಾಡಿದ್ದೇವೆ ಎಂದರು.

ಇಂದು ಆ ಪ್ರಶಸ್ತಿಯನ್ನು ಸ್ವೀಕಾರ ಮಾಡುವುದಕ್ಕೆ ನಮ್ಮ ಸಮರ್ಥನ ಸಂಘಟನೆಯ ನಾಗರೇವಕ್ಕನವರು ಒಪ್ಪಿಕೊಂಡಿದ್ದೇ ದೊಡ್ಡದು ಎಂದರು. ನಾಗರೇವಕ್ಕನವರು ನಿಜವಾದ ಹೋರಾಟಗಾರ್ತಿ ಎಂದು ಈ ಕವಿತಾ ಸ್ಮಾರಕ ಪ್ರಶಸ್ತಿಯನ್ನು ಕೊಡಬೇಕು ಎಂದು ತೀರ್ಮಾನ ಮಾಡಿದೆವು. ನಮ್ಮ ಕರ್ನಾಟಕ ಸಂಘದ ಮೂಲಕ    ಕವಿತಾ ಸ್ಮಾರಕ ಪ್ರಶಸ್ತಿಯನ್ನು 22ನೇ ವರ್ಷದಿಂದ ಇಲ್ಲಿ ಪ್ರಾರಂಭ ಮಾಡಿದ್ದೇವೆ ಎಂದರು.

ಇದು ನಿರಾಂತಕ ನಡೆಯುವ ಕೆಲಸ ಮುಂದಿನ ದಿನಗಳಲ್ಲಿ ಅಗುತ್ತದೆ. ಇಂದು ಈ ಅವಕಾಶವನ್ನು ನಮಗೆ ಕೊಟ್ಟಿರತಕ್ಕಂಹ ಅವಕಾಶವನ್ನು ಡಾ.ರಾಗೌ ದಂಪತಿಗಳಿಗೆ ಕರ್ನಾಟಕ ಸಂಘ ತುಂಬಾ ಚಿರುಋಣಿಯಾಗಿರುತ್ತದೆ ಎಂದು ಹೇಳಿದರು.

ಶ್ರೀಮತಿ ಮಂಜುಳ ಮಾನಸರವರು ಮಹಿಳೆ ಮತ್ತು ಕಾನೂನು ಪುಸ್ತಕ ಉದ್ಘಾಟಿಸಿ, ಪುಸ್ತಕದ ಬಗೆಗೆ ಮಾತನಾಡಿದರು.

ಇದನ್ನೂ ಓದಿ : ನಾಗರೇವಕ್ಕರಿಗೆ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ

 

 

 

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!