ಮದ್ದೂರು ತಾಲ್ಲೂಕಿನ ಭಾರತೀನಗರಸಮೀಪದ ಮುಟ್ಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ನೂತನ ಅಧ್ಯಕ್ಷರಾಗಿ ಮಧುಕುಮಾರ್, ಉಪಾಧ್ಯಕ್ಷರಾಗಿ ಲಕ್ಷ್ಮಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಧುಕುಮಾರ್ ಅವರು ಮಾತನಾಡಿ, ಸಂಘವನ್ನು ಅಭಿವೃದ್ದಿಗೊಳಿಸಲು ಸಂಘದ ಸದಸ್ಯರು ಮತ್ತು ಗ್ರಾಮದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು. ಸಂಘದಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ರೈತರಿಗೆ ಸಿಗುವಂತಹ ಸೌಲಭ್ಯಗಳನ್ನು ನೀಡುವ ಮೂಲಕ ಗುಣಮಟ್ಟದಲ್ಲಿ ಕೆಲಸ ಮಾಡುವುದಾಗಿ ವಿವರಿಸಿದರು.
ಇದೇ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖಂಡರಾದ ಎಂ.ಸಿ.ವೀರಯ್ಯ, ಎಂ.ಸಿ.ಪುಟ್ಟೇಗೌಡ, ಯು.ಡಿ.ಚಂದ್ರಶೇಖರ್, ಗ್ರಾ.ಪಂ ಸದಸ್ಯರಾದ ಯತೀಶ್, ಚಂದ್ರಶೇಖರ್, ಕಾಳೇಗೌಡ, ಎಂ.ಟಿ.ಹರೀಶ್, ಸುರೇಶ್, ಡೇರಿ ಮಾಜಿ ಅಧ್ಯಕ್ಷ ಶೇಖರ್, ಎಂ.ಸಿ.ಸಂತೋಷ್, ನಿರ್ದೇಶಕರಾದ ಎಂ.ಸಿ.ಶಿವಲಿಂಗೇಗೌಡ, ಎಂ.ಟಿ.ಶಿವಕುಮಾರ್, ಎಂ.ಟಿ.ವೆಂಕಟೇಶ್, ಎಂ.ಟಿ.ಯೋಗೇಶ್, ಲಕ್ಷ್ಮಿವೆಂಕಟೇಶ್, ಚಿಕ್ಕತಾಯಮ್ಮ, ರಮೇಶ್, ಮಹೇಶ್, ಎಂ.ಎಸ್.ಪುರುಷೋತ್ತಮ್, ಅರ್ಕೇಶಚಾರಿ ಸೇರಿದಂತೆ ಹಲವರು ಅಭಿನಂದಿಸಿ ಗೌರವಿಸಿದರು.




