ಶ್ರೀರಂಗಪಟ್ಟಣದ ವಿವಿಧೆಡೆ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಪರ ಅವರ ಪತ್ನಿ ಪೂರ್ಣಿಮಾ ಬಿರುಸಿನ ಪ್ರಚಾರ ನಡೆಸಿದರು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ,ಶ್ರೀನಿಮಿಷಾಂಬ ದೇವಾಲಯ ಮತ್ತು ಕಿರಂಗೂರು ಕೋದಂಡರಾಮ ದೇವಸ್ಥಾನದಲ್ಲಿ ಮೈ.ವಿ.ರವಿಶಂಕರ್ ಪರ ಪೂಜೆ ಸಲ್ಲಿಸಿದರು.
ವೇದ ಬ್ರಹ್ಮ ಭಾನುಪ್ರಕಾಶ್ ರವರ ಮನೆಗೆ ಭೇಟಿ ಅವರ ಆಶೀರ್ವಾದ ಪಡೆದರು. ವಿದ್ಯಾಭಾರತಿ ವಿದ್ಯಾಸಂಸ್ಥೆಯ ರಂಗನಾಥ್, ಡಿಗ್ರಿ ಕಾಲೇಜ್,ಕಾವೇರಿ ಗುರುಕುಲ,ಕಾಂಗ್ರೆಸ್ ಮುಖಂಡರಾದ ಎಂ. ಪುಟ್ಟೇಗೌಡ, ಕಾವೇರಮ್ಮ, ಪುರಸಭೆ ಮಾಜಿ ಸದಸ್ಯರಾದ ನಳಿನಾ ಸತ್ಯಪ್ಪ,ಮಾಜಿ ಪುರಸಭಾ ಸದಸ್ಯರಾದ ವಿದ್ಯಾ ಉಮೇಶ್ ಅವರ ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಹಲವಾರು ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಮೊದಲನೇ ಪ್ರಾಶಸ್ತ್ಯದ ಮತ ನೀಡುವಂತೆ ಮತಯಾಚನೆ ಮಾಡಿದರು.
ಮತದಾರರು ಗೊಂದಲ ಮಾಡಿಕೊಳ್ಳದೆ ತಾಳ್ಮೆಯಿಂದ ಮತದಾನ ಮಾಡಬೇಕು. ತಿರಸ್ಕೃತ ಮತವಾಗದಂತೆ ಎಚ್ಚರಿಕೆ ಯಿಂದ ಮತದಾನ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್,ಜಿಲ್ಲಾ ಉಪಾಧ್ಯಕ್ಷ ಟಿ. ಶ್ರೀಧರ್ ,ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಶ್ರೀ ನಿಮಿಷಾಂಬಾ ದೇವಾಲಯ ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣಪ್ಪ ಸದಸ್ಯರಾದ ವಿದ್ಯಾ ಉಮೇಶ್,ಪುರಸಭಾ ಸದಸ್ಯರಾದ ಪೂರ್ಣಿಮಾ, ಪುಟ್ಟರಾಮು,ಪುರಸಭೆ ಮಾಜಿ ಸದಸ್ಯರಾದ ಜಯಲಕ್ಷ್ಮಿ,
ನಗರ ಅಧ್ಯಕ್ಷ ಹೇಮಂತ್ ಕುಮಾರ್,ಆನಂದ್ ಕುಮಾರ್,ಉಮೇಶ್ ಕುಮಾರ್, ಚೇತನ್, ನಗರ ಪ್ರಧಾನ ಕಾರ್ಯದರ್ಶಿ ಗಂಜಾಂ ಪ್ರಭಾಕರ್,ಕಾರ್ಯದರ್ಶಿ ಕಿರಣ್,ಉಪಾಧ್ಯಕ್ಷ ಪ್ರವೀಣ್ ಮತ್ತಿತರರಿದ್ದರು.