Thursday, November 19, 2026

ಪ್ರಾಯೋಗಿಕ ಆವೃತ್ತಿ

ಭೂ ಸುಧಾರಣೆ ಕಾಯ್ದೆ ತಂದವರು ಅರಸು- ಬಸವಲಿಂಗಪ್ಪ: ಮಹೇಶ್

ವರದಿ: ಪ್ರಭು ವಿ ಎಸ್

ಭೂ ಸುಧಾರಣೆ ಕಾಯ್ದೆ ಮಾಡಿ ಜಮೀನು ಉಳಿಸಿದರು ಇಂದಿರಾ ಗಾಂಧಿ ಎಂದು ತಿಳಿದುಕೊಂಡಿದ್ದೀರಿ ಅಲ್ಲ, ಕಾಯ್ದೆಯನ್ನು ಜಾರಿಗೆ ತಂದವರು ಬಸವಲಿಂಗಪ್ಪ ಹಾಗೂ ದೇವರಾಜ ಅರಸು ಅವರು ಎಂದು ಬಿಜೆಪಿ ಮುಖಂಡ ಎನ್.ಮಹೇಶ್ ಹೇಳಿದರು.

ಮದ್ದೂರು ಪಟ್ಟಣದ ಬಿಜೆಪಿ ಪಟ್ಟಣದ ಆವರಣದಲ್ಲಿ ನಡೆದ ಜಿಲ್ಲಾ ಭೀಮ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಅಂಬೇಡ್ಕರ್ ಅವರ ಸೋಲಿಗೆ ಕಾರಣಕರ್ತರಾದವರು, ಕಾಂಗ್ರೆಸ್ ಪಕ್ಷದವರು 121 ಸಲ ಸಂವಿಧಾನ ತಿದ್ದುಪಡಿ ಮಾಡಿದವರು ಕಾಂಗ್ರೆಸ್ ಪಕ್ಷದವರು ಎಂದು ಟೀಕಿಸಿದರು.

30 ವರ್ಷಗಳ ಕಾಲ ದಲಿತರ ಅಭಿವೃದ್ಧಿಗೆ ಚಿಂತನೆ ಮಾಡದೆ ಇದ್ದವರು ಕಾಂಗ್ರೆಸ್ ಪಕ್ಷದವರು, ಅಭಿವೃದ್ಧಿಗೆ  ನಾಂದಿ ಹಾಡಿದವರು ಮೋದಿಯವರು, ಅವರು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ ಎಂದು ತಿಳಿಯುತ್ತದೆ.

ವೇದಿಕೆಯಲ್ಲಿ ರಾಜ್ಯ ಎಸ್ ಸಿ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಸಿಮೆಂಟ್ ಮಂಜು, ಜಿಲ್ಲಾ ಅಧ್ಯಕ್ಷ ಇಂದ್ರೇಶ್ , ಬಿಜೆಪಿ ಮುಖಂಡ ಮನ್ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ, ಅಶೋಕ್ ಜಯರಾಮ್, ಸಿದ್ದರಾಮಯ್ಯ, ಮುನಿರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಸಿ ಕೆ ಸತೀಶ್ ,ಕಾರ್ಯದರ್ಶಿ ಎಂ ಸಿ.ಸಿದ್ದು, ಕೆಂಪಬೋರಯ್ಯ, ದ್ಯಾವಯ್ಯ, ಯಮಂದೂರು ಸಿದ್ದರಾಜು, ಬೋರಯ್ಯ, ಬಿಜೆಪಿ ಮಹಿಳಾ ಅಧ್ಯಕ್ಷೆ ಶ್ವೇತಾ, ರಶ್ಮಿ ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ