Wednesday, April 17, 2024

ಪ್ರಾಯೋಗಿಕ ಆವೃತ್ತಿ

ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವಕ್ಕೆ ಅದ್ದೂರಿ ಚಾಲನೆ

ಮಂಡ್ಯದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ 513 ನೇ ಜಯಂತಿಗೆ ಅದ್ದೂರಿಯ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಂಪೇಗೌಡರ ಭಾವಚಿತ್ರವಿದ್ದ ರಥಕ್ಕೆ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಅಶ್ವತಿ ಚಾಲನೆ ನೀಡುವ ಮೂಲಕ ಮೆರವಣಿಗೆ ಪ್ರಾರಂಭವಾಯಿತು.

ಪೂಜಾಕುಣಿತ,ನಗಾರಿ ಮೊದಲಾದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ತಂದವು.ನಂತರ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಮೆರವಣಿಗೆಯು ವಿವಿ ರಸ್ತೆಯ ಮೂಲಕ ಕಲಾಮಂದಿರಕ್ಕೆ ಆಗಮಿಸಿತು.

ಎತ್ತಿನಗಾಡಿ ಹಾಗೂ ಆಟೋಗಳಲ್ಲಿ ಇದ್ದ ಒಕ್ಕಲಿಗ ಬಂಧುಗಳು ನಾಡ ಪ್ರಭು ಕೆಂಪೇಗೌಡರಿಗೆ ಜೈಕಾರ ಹಾಕಿದರು. ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದರು.ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿದ್ದರು.

ನಗಾರಿ ಹಾಗೂ ತಮಟೆಯ ಸದ್ದಿಗೆ ಒಕ್ಕಲಿಗ ಮುಖಂಡರು ಹಾಗೂ ವಿದ್ಯಾರ್ಥಿಗಳು ಮಹಾವೀರ ವೃತ್ತದಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಕೆಂಪೇಗೌಡರ ಪಾತ್ರಧಾರಿ ಕುದುರೆಯ ಮೇಲೆ ಕತ್ತಿ ಗುರಾಣಿ ಹಿಡಿದು ರಾಜಗಾಂಭೀರ್ಯದಿಂದ ಸಾಗಿದ್ದು ಜನರ ಗಮನ ಸೆಳೆಯಿತು.

ಜಿಲ್ಲಾ ಪಂಚಾಯತ್ ಸಿಇಓ ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ, ಉಪ ವಿಭಾಗಾಧಿಕಾರಿ ಐಶ್ವರ್ಯ, ಮಾಜಿ ಸಚಿವ ಎಂ.ಎಸ್ ಆತ್ಮಾನಂದ, ನಗರ ಸಭಾ ಅಧ್ಯಕ್ಷ ಹೆಚ್. ಎಸ್ ಮಂಜು, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮುಖಂಡರುಗಳಾದ ಬಾಣಸವಾಡಿ ನಾಗಣ್ಣ, ಎಲ್. ಕೃಷ್ಣ,ಹೊಸಹಳ್ಳಿ ನಾಗೇಶ್,ನಾರಾಯಣ್,ವಿಶಾಲ್ ರಘು,ಕೆ.ಸಿ.ರವೀಂದ್ರ,ಸುಜಾತ ಕೃಷ್ಣ, ಕೆ.ಸಿ.ನಾಗಮ್ಮ,ಮಂಗಲ ಲಂಕೇಶ್,ಯೋಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!