Thursday, September 19, 2024

ಪ್ರಾಯೋಗಿಕ ಆವೃತ್ತಿ

ನಂದಿನಿ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆ : ಕನ್ನಡಿಗರ ಆಕ್ರೋಶ

ಕೇಂದ್ರದ ಸಹಕಾರಿ ಸಚಿವ ಅಮಿತ್ ಶಾ ಈ ಹಿಂದೆ ಮಂಡ್ಯಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಕರ್ನಾಟಕದ ನಂದಿನಿಯನ್ನು ಗುಜರಾತ್ ನ ಅಮೂಲ್ ಜೊತೆ ವಿಲೀನ ಮಾಡುವುದಾಗಿ ಹೇಳಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದರು. ಇದಕ್ಕೆ ಕನ್ನಡಿಗರೆಲ್ಲರೂ ಒಕ್ಕೊರಲಿನ ವಿರೋಧ ವ್ಯಕ್ತಪಡಿಸಿದ್ದರು.

“>

ಆದರೆ ಆದಾದ ಕೆಲವೇ ದಿನಗಳ ನಂತರ ಹಿಂದಿ ಭಾ‍ಷೆಯಲ್ಲಿ ನಂದಿನಿ ಉತ್ಪನ್ನಗಳ ಹೆಸರುಗಳನ್ನು ಮುದ್ರಿಸುವ ಮೂಲಕ ಸದ್ದಿಲ್ಲದೇ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಈ ಹಿಂದೆ ನಂದಿನಿ ಉತ್ಪನ್ನಗಳ ಪ್ಯಾಕಿಂಗ್ ನ ಮೇಲೆ ಎಂದೂ ಹಿಂದಿ ಭಾಷೆಯನ್ನು ಬಳಕೆ ಮಾಡಿದ ಉದಾಹರಣೆಗಳಿಲ್ಲ, ಮೊಸರಿನ ಉತ್ಪನ್ನದ ಮೇಲೆ ಇಂಗ್ಲೀಷ್ ನಲ್ಲಿ ಭಾಷೆಯಲ್ಲಿ ‘ದಹಿ’ (DAHI) ಎಂದು ಬರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದು ಗುಲಾಮಗಿರಿಯ ಪರಮಾವಧಿ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರೇ ಗುಲಾಮಗಿರಿ ಮಾಡೋರನ್ನ ಪಕ್ಕಕ್ಕಿಟ್ಟು ನಾವಾದ್ರೂ ಎಚ್ಚರವಾಗಬೇಕಿದೆ. ನಂದಿನಿಯನ್ನು ಹೇಗಾದ್ರು ಮಾಡಿ ಅಮುಲ್ ಜೊತೆ ಸೇರಿಸೋಕೆ ನೋಡಿದ್ರು ಆಗ್ಲಿಲ್ಲ. ಈಗ ಹೇಗಾದ್ರು ಮಾಡಿ ಹಿಂದಿನಾದ್ರು ಸೇರಿಸಿಬಿಡೋಣ ಅಂತ ನಂದಿನಿ ಮೇಲೆ ಎಂದೂ ಇಲ್ಲದ ಹಿಂದಿ ಈಗ ಬಂದಿದೆ. ಇಂದು ಎಚ್ಚೆತ್ತುಕೊಳ್ಳದಿದ್ರೆ ಒಂದಿನ ಕನ್ನಡ ಹೋಗಿ ಅಲ್ಲಿ ಹಿಂದಿ ಇರುತ್ತೆ ಎಂದು ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!