Friday, September 20, 2024

ಪ್ರಾಯೋಗಿಕ ಆವೃತ್ತಿ

ಸಹಾಯ ಮಾಡುವುದರಿಂದ ನೆಮ್ಮದಿ ನೆಲೆಸುತ್ತದೆ- ಶ್ರೀನಂಜಾತವಧೂತ ಸ್ವಾಮೀಜಿ

ಬೇರೆಯವರಿಗೆ ಸಹಾಯ ಮಾಡುವುದರಿಂದ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲಸುತ್ತದೆ ಎಂದು ಶ್ರಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾತವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮದ್ದೂರು ತಾಲೂಕಿನ ಆಲೂರು ಗ್ರಾಮದಲ್ಲಿ ಬುಧವಾರ ನೂತನವಾಗಿ ನಿರ್ಮಿಸಿರುವ ಶ್ರೀ ಆಲೂರಮ್ಮ ಮತ್ತು ಮಸಣಕಮ್ಮ ದೇವಸ್ಥಾನದ ವಿಗ್ರಹ ಪ್ರತಿಷ್ಟಾಪನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ದೇವರನ್ನು ಪೂಜಿಸುವ ಜತೆಗೆ ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಂಡು ನೊಂದವರ ಬಾಳಿಗೆ ಆಸರೆಯಾದರೆ ಮುಕ್ತಿ ಸಿಗುತ್ತದೆ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ, ಈ ಸಂದರ್ಭದಲ್ಲಿ ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ಪದೇ ಪದೇ ನೀರು ಹರಿಸಿ ಎಂದು ಕಾವೇರಿ ನದಿ ನೀರಿನ ಪ್ರಾಧಿಕಾರ ಆದೇಶ ಮಾಡುವುದು ಸರಿಯಲ್ಲ. ಇಲ್ಲಿಗೆ ನಮಗೆ ನೀರಿಲ್ಲ. ಅವರಿಗೆ ನಿರಂತರವಾಗಿ ನೀರು ಹರಿಸಿ ಎನ್ನುವುದು ಯಾವ ಧರ್ಮ ಸತ್ಯಾಸತ್ಯತೆಯನ್ನು ತಿಳಿಯದೆ ಆದೇಶ ಮಾಡುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ರಾಜ್ಯದ ನೈಜ ಸ್ಥಿತಿಯನ್ನು ಕಾವೇರಿ ನದಿ ನೀರಿ ಪ್ರಾಧಿಕಾರಕ್ಕೆ ತಿಳಿಸುವ ಕೆಲಸ ಮಾಡಿ ರಾಜ್ಯದ ರೈತರಿಗೆ ಹಾಗೂ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಆಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಆಲೂರಮ್ಮ ಮತ್ತು ಮಸಣಕಮ್ಮ ದೇವಸ್ಥಾನ ಅತ್ಯಂತ ಸುಂದರವಾಗಿ ಮೂಡಿದೆ ಬಂದಿದೆ. ದೇವರು ಉತ್ತಮ ಮಳೆ, ಬೆಳೆಯಾಗುವಂತೆ ಮಾಡಿ, ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಎಂ.ಉದಯ್, ತಾಪಂ ಮಾಜಿ ಸದಸ್ಯ ಚಲುವರಾಜು, ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಎಲ್.ರಾಮಚಂದ್ರು, ಉಪಾಧ್ಯಕ್ಷ ಎಲ್.ಶಿವಲಿಂಗಯ್ಯ, ಕಾರ್ಯದರ್ಶಿ ಸಣ್ಣಯ್ಯ, ಕಾರ್ಯಾಧ್ಯಕ್ಷ ಎ.ಎಲ್.ಶಿವರಾಮು, ಖಜಾಂಚಿ ಆರ್.ರಾಮಲಿಂಗಯ್ಯ, ನಿರ್ದೇಶಕರಾದ ಎ.ದಿನೇಶ್, ಎ.ಆರ್.ನಾಗೇಂದ್ರ, ಕೆ.ಸುಪ್ರೀತ್, ಸಿ.ಶೇಖರ್, ಕೋಟಿ ಲಿಂಗಯ್ಯ, ಎ.ಟಿ.ರಘು, ಬಿ.ಸಿದ್ದರಾಮು, ಕೆ.ಪ್ರಶಾಂತ, ಎ.ಎಲ್.ರಾಜಕುಮಾರ್, ಜಗದೀಶ್ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!