Tuesday, June 25, 2024

ಪ್ರಾಯೋಗಿಕ ಆವೃತ್ತಿ

ಜನಸಾಗರದ ಮಧ್ಯೆ ಮಾಜಿ ಸಚಿವ ನರೇಂದ್ರಸ್ವಾಮಿ ಜನ್ಮದಿನ ಆಚರಣೆ

ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳ ಮಧ್ಯೆ ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿಯವರು ಬುಧವಾರ ತಮ್ಮ 59ನೇ ಜನ್ಮದಿನ ಆಚರಣೆ ಮಾಡಿಕೊಂಡರು. ಮಳವಳ್ಳಿ ಪಟ್ಟಣದಲ್ಲಿ ಬುಧವಾರ ಹಬ್ಬದ ವಾತಾವರಣ ಮೂಡಿತ್ತು. ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ತಮ್ಮ ನೆಚ್ಚಿನ ನಾಯಕ ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಸೇಬಿನ ಹಾರವನ್ನು ಹಾಕಿ ಪಟ್ಟಣಕ್ಕೆ ಬರಮಾಡಿಕೊಂಡರು.ಅಭಿಮಾನಿಗಳು ಪುಷ್ಪಾರ್ಚನೆ ಮಾಡಿದ್ದಲ್ಲದೆ,ನರೇಂದ್ರ ಸ್ವಾಮಿಯವರಿಗೆ ಜನ್ಮದಿನದ ಶುಭಾಶಯ ಕೋರಿದರು.ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ನರೇಂದ್ರ ಸ್ವಾಮಿಗೆ ಜನ್ಮದಿನದ ಶುಭ ಕೋರಲಾಯಿತು.

ಪಟ್ಟಣದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡ ನರೇಂದ್ರ ಸ್ವಾಮಿ, ದೇವರ ದರ್ಶನದ ಬಳಿಕ ಕೇಕ್ ಕತ್ತರಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತಿನ್ನಿಸಿದರು.

ನರೇಂದ್ರಸ್ವಾಮಿ ಜನ್ಮದಿನದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಪಟ್ಟಣದ ಸೋಡ ಮುದ್ದನಕೇರಿ ಯುವಕರ ಬಳಗದ ವತಿಯಿಂದ ಮಹದೇಶ್ವರ ಸಮುದಾಯ ಭವನದಲ್ಲಿ, ಸಿದ್ದಾರ್ಥನಗರ, ಕೀರ್ತಿನಗರ, ಅನಂತ್‌ರಾಮ್ ವೃತ್ತ, ಕೋಟೆ ಗಂಗಾಧರೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಜನ್ಮದಿನವನ್ನು ಆಯೋಜನೆ ಮಾಡಲಾಗಿತ್ತು.

ಜನಸಾಗರದ ಮಧ್ಯೆ ಜನ್ಮದಿನ ಆಚರಿಸಿಕೊಂಡ ನರೇಂದ್ರ ಸ್ವಾಮಿ ಜನರ ಅಭಿಮಾನಕ್ಕೆ ಧನ್ಯವಾದ ಅರ್ಪಿಸಿ,ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಮುಂದೆಯೂ ನಿಮ್ಮ ಪ್ರೀತಿ ವಿಶ್ವಾಸ ಇದೇ ರೀತಿ ನನ್ನ ಮೇಲಿರಬೇಕೆಂದು ಬಯಸುವುದಾಗಿ ತಿಳಿಸಿದರು.

ನರೇಂದ್ರಸ್ವಾಮಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಕುಟುಂಬ ಸದಸ್ಯರಾದ ತಂದೆ ಮಲ್ಲಯ್ಯ, ಪತ್ನಿ ಶಶಿಕಲಾ ನರೇಂದ್ರಸ್ವಾಮಿ, ಪುತ್ರಿಯರಾದ ಸಂಜನಾ, ಮೇಘನಾ ಹಾಗೂ ಪುತ್ರ ಯುವರಾಜ್ ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಸುಂದರ್ ರಾಜು, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕುಳ್ಳಚನ್ನಂಕಯ್ಯ, ನಿರ್ದೇಶಕರಾದ ಬಸವೇಶ್, ದಾಸೇಗೌಡ, ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಜಿ.ಪಂ. ಮಾಜಿ ಸದಸ್ಯರಾದ ವಿಶ್ವಾಸ, ಸುಷ್ಮರಾಜು, ಸುಜಾತ ಪುಟ್ಟು, ತಾ.ಪಂ. ಮಾಜಿ ಅಧ್ಯಕ್ಷ ನಾಗೇಶ್ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ : ದಲಿತರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ : ಪಿ.ಎಂ.ನರೇಂದ್ರಸ್ವಾಮಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!