Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆ

ಅಖಿಲ ಭಾರತೀಯ ರಾಷ್ಟೀಯ ಕಾಂಗ್ರೆಸ್ ಪಕ್ಷ (ಎಐಸಿಸಿ)ದ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಚುನಾಯಿತರಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಶಶಿ ತರೂರು ಪರಾಭವಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆದು ಜಯಗಳಿಸಿದ್ದು, ಶಶಿ ತರೂರ್ 1,072 ಮತಗಳನ್ನು ಸೋಲುಂಡಿದ್ದಾರೆ. ಖರ್ಗೆ ಅವರು ಶೇ.90 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. 1996-1998ರ ಅವಧಿಯಲ್ಲಿ ಸೀತಾರಾಮ್ ಕೇಸರಿ ಅವರು ಪಕ್ಷದ ಕೊನೆಯ ಗಾಂಧಿಯೇತರ ಮನೆತನದ ಎಐಸಿಸಿ ಅಧ್ಯಕ್ಷರಾಗಿದ್ದರು. ಅವರ ನಂತರ ಖರ್ಗೆ ಚುನಾಯಿತರಾಗಿದ್ದಾರೆ.

ಸುಮಾರು 9,000 ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿ (PCC) ಪ್ರತಿನಿಧಿಗಳು ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಗಾಂಧಿ ಮನೆತನದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಖರ್ಗೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಲೆಕ್ಕಾಚಾರದಲ್ಲಿದ್ದರು.

ಶಶಿತರೂರ್ ದೂರು 

ಫಲಿತಾಂಶಕ್ಕೂ ಮುನ್ನ ಪ್ರತಿಸ್ಪರ್ಧಿ ಶಶಿತರೂರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಆಗ ಪ್ರತಿಕ್ರಿಯಿಸಿದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, “ಯುಪಿಯಲ್ಲಿ 6 ಮತಪೆಟ್ಟಿಗೆಗಳಿವೆ, ಅವುಗಳಲ್ಲಿ 4 ಯಾವುದೇ ಸಮಸ್ಯೆಗಳಿಲ್ಲ. ನಾವು ಎಲ್ಲಾ ಮತ ಪೆಟ್ಟಿಗೆಗಳ ಸೀಲ್‌ಗಳನ್ನು ಪರಿಶೀಲಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಖರ್ಗೆ ಬೆಂಬಲಿಗರಿಂದ ಸಂಭ್ರಮಾಚರಣೆ

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ ಎಐಸಿಸಿ ಕೇಂದ್ರ ಕಚೇರಿಯ ಹೊರಗೆ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

ಖರ್ಗೆಗೆ  ಅಭಿನಂದನೆ 

ಮಲ್ಲಿಕಾರ್ಜುನ ಖರ್ಗೆ ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದು ಪ್ರಜಾಪ್ರಭುತ್ವದ ಗೆಲುವು ಎಂದು ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದು, ಖರ್ಗೆ ಅವರನ್ನು ಅಭಿನಂದಿಸಿದರು.

ಅವರ ಅನುಭವವು ಪಕ್ಷಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ, ಶೇ.90 ರಷ್ಟು ಮತದಾರರು  ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ, ಇದನ್ನು ಯಾವುದೇ ಪಕ್ಷವು ಹಿಂದೆಂದೂ ಮಾಡಿಲ್ಲ.

ಮಧುಸೂದನ್ ಮಿಸ್ತ್ರಿ ಘೋಷಣೆ

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, ಒಟ್ಟು ಎಣಿಕೆಯಾದ ಮತಗಳು 9,385 ಆಗಿದ್ದು, ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತ್ತು ಡಾ.ಶಶಿ ತರೂರ್ 1,072 ಮತಗಳನ್ನು ಪಡೆದರು. ಅಮಾನ್ಯವಾದ ಮತಗಳು 416. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ನ ಚುನಾಯಿತ ಅಧ್ಯಕ್ಷರನ್ನಾಗಿ ಈ ಮೂಲಕ ಘೋಷಿಸುತ್ತೇನೆ ಎಂದು ಹೇಳಿದರು.

ತರೂರ್-ಖರ್ಗೆ ಭೇಟಿ

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲೇ ಶಶಿ ತರೂರ್ ಭೇಟಿ ಮಾಡಿದರು. ‘ಖರ್ಗೆಯವರಿಗೆ ಯಶಸ್ಸು ಸಿಗಲಿ’ ಎಂದು ತರೂರ್ ಟ್ವಿಟ್ ಮಾಡಿದ್ಧಾರೆ.
ಸೋಲನ್ನು ಒಪ್ಪಿಕೊಳ್ಳುವ ಹೇಳಿಕೆಯಲ್ಲಿ, ಶಶಿ ತರೂರ್ ಅವರು ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ “ಹೃದಯಪೂರ್ವಕ ಅಭಿನಂದನೆಗಳು”. “ತಮ್ಮ ಕಾರ್ಯಕರ್ತರಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಅವಕಾಶ ನೀಡುವ ಪಕ್ಷದ ಸದಸ್ಯನಾಗಿರುವುದು ಒಂದು ವಿಶೇಷವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಒಂದು ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ ಮತ್ತು ಆ ಕಾರ್ಯದಲ್ಲಿ ಖರ್ಗೆ ಜಿ ಅವರಿಗೆ ಎಲ್ಲಾ ಯಶಸ್ಸು ಸಿಗಲಿ ಎಂದು ನಾನು ಬಯಸುತ್ತೇನೆ. ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು ಮತ್ತು ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊಂದಲು ಇದು ಒಂದು ಸೌಭಾಗ್ಯ ಅವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಸ್ವಾಗತ 

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೇಲೆ ನಂಬಿಕೆ ಇರಿಸಿದೆ. ಪಕ್ಷದಲ್ಲಿ ಕಾಂಗ್ರೆಸ್ ಅಧ್ಯಕ್ಷರೇ ಸರ್ವೋಚ್ಚ ಅಧಿಕಾರ ಹೊಂದಿದ್ದಾರೆ. ಪ್ರತಿಯೊಬ್ಬ ಸದಸ್ಯರು ಆ ವ್ಯಕ್ತಿಗೆ ವರದಿ ಮಾಡುತ್ತಾರೆ ಎಂದು ಅವರು ಹೇಳಿದರು.

ಐತಿಹಾಸಿಕ ಕ್ಷಣ

ಇದೊಂದು ‘ಐತಿಹಾಸಿಕ ಕ್ಷಣ’ ಎಂದು  ಖರ್ಗೆ ಅವರ ಚುನಾವಣಾ ಏಜೆಂಟ್ ಗೌರವ್ ಗೊಗೊಯ್ ನುಡಿದರು.

“ಇದೊಂದು ಐತಿಹಾಸಿಕ ಕ್ಷಣ. ನಾವು ಇಷ್ಟು ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆಸಿದ್ದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಕಷ್ಟದ ಸಮಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿದ ಸೋನಿಯಾ ಗಾಂಧಿಯವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಗೊಳ್ಳಲಿದೆ.” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!