Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರಾಷ್ಟ್ರೀಯ ಯುವ ದಿನಾಚರಣೆ: ಹಾಸ್ಯ ಕಾರಂಜಿ

ಜನಪರ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ, ವಿವೇಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಡಾ. ಲಕ್ಷ್ಮೀದೇವಿ  ಅವರಿಗೆ ಅಭಿನಂದನಾ ಸಮಾರಂಭ ಫೆ. 11 ರಂದು ಬೆಳಗ್ಗೆ 10-30 ಗಂಟೆಗೆ ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಂ. ಮಹೇಶ್ ಚಿಕ್ಕಲ್ಲೂರು ತಿಳಿಸಿದ್ದಾರೆ.
ಸಮಾರಂಭವನ್ನು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಉದ್ಘಾಟಿಸಲಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಅಧ್ಯಕ್ಷತೆ ವಹಿಸುವರು. ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಪ್ರಭಾವತಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಸಾಹಿತಿ ಡಾ. ಲಿಂಗದಹಳ್ಳಿ ಹಾಲಪ್ಪ, ಅಂತಾರಾಷ್ಟ್ರೀಯ ವಿಜ್ಞಾನಿ ಡಾ. ಬಸಪ್ಪ, ಪರಿಷತ್ತಿನ ಗೌರವಾಧ್ಯಕ್ಷ  ಡಾ.ಡಿ. ರವಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್. ಸುರೇಶ್, ಸಹ ಪ್ರಾಧ್ಯಾಪಕ ಡಾ.ಆರ್. ನಾಗಭೂಷಣ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಜನಪರ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬೆಂಗಳೂರಿನ ಡಾ. ಲಕ್ಷ್ಮೀದೇವಿ ಅವರನ್ನು ಅಭಿನಂದಿಸಲಾಗುವುದು. ಖ್ಯಾತ ಮಿಮಿಕ್ರಿ ಕಲಾವಿದ ಹಾಗೂ ಚಲನಚಿತ್ರ ನಟ ಮಿಮಿಕ್ರಿ ಗೋಪಿ ಅವರಿಂದ ‘ಹಾಸ್ಯ ಕಾರಂಜಿ’ ಕಾರ್ಯಕ್ರಮ ನಡೆಯಲಿದೆ.
 ವಿವಿಧ ಕ್ಷೇತ್ರದ ಸಾಧಕರಾದ ಡಾ.ಎಸ್. ಶಿವರಾಜಪ್ಪ (ಸಾಹಿತ್ಯ), ಅಂಶಿ ಪ್ರಸನ್ನಕುಮಾರ್ (ಮಾಧ್ಯಮ), ಎಂ. ಮಹದೇವಸ್ವಾಮಿ, ಡಾ.ಡಿ.ಕೆ. ರವಿಶಂಕರ್ (ವಿಜ್ಞಾನ), ಡಾ.ಆರ್. ನಾಗಭೂಷಣ್ (ಉನ್ನತ ಶಿಕ್ಷಣ), ಗುರುಬಸಪ್ಪ (ಆರಕ್ಷಕ), ಎನ್. ದೊಡ್ಡಯ್ಯ, ಆರ್. ನಾಗರಾಜು, ಮತ್ತು ಪಿ.ವೈ. ಶಾರದಾ (ಸಂಘಟನೆ), ಎಂ.ಸಿ. ಬೋರೇಗೌಡ, ಇ. ಕಂದವೇಲು ಮತ್ತು ಎ. ದೇವಮ್ಮಣಿ, ಡಿ.ಪಿ. ಚಿಕ್ಕಣ್ಣ (ಸಾಹಿತ್ಯ) ಅವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!