Friday, September 20, 2024

ಪ್ರಾಯೋಗಿಕ ಆವೃತ್ತಿ

ನೇಗಿಲಯೋಗಿ…

✍️ ದಿವಾಕರ್.ಡಿ.ಮಂಡ್ಯ

(ರಾಷ್ಟ್ರಕವಿ ಕುವೆಂಪುರವರ “ನೇಗಿಲ ಯೋಗಿ” ಕವಿತೆಯನ್ನು ನೆನ್ನೆಯಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯ ಹೋರಾಟಕ್ಕೆ ಮರು ಅವತರಣಿಕೆ ಇದುವೇ)negilayogi

ಮುಳ್ಳಿನ ಹಾದಿಯಲಿ ನೋವನು ಲೆಕ್ಕಿಸದೇ
ಮುನ್ನುಗುತ್ತಿರುವ ಉಳುವ ಯೋಗಿಯ ನೋಡಲ್ಲಿ

ನೆತ್ತರು ಬಸಿದು ಬೆಳೆದ ಫಸಲಿಗೆ
ಫಲವನ್ನು ಬಯಸಿದ ಅನ್ನದಾತನಿಗೆ
ವಿಷವನ್ನಿಕ್ಕುವ ಆಳರಸರಂತೆ ಮೆರೆವ
ರಕ್ಕಸರೇ ಕೇಳೀರೆ ನೀವಿಂದು

ಬಿಸಿಲ ಬೇಗೆಗೆ ಚಳಿಯ ಕೊರೆತಕೆ
ಮಳೆಯ ಆರ್ಭಟಕೆ ಲೆಕ್ಕಿಸದೆ
ನಗುನಗುತ ದುಡಿದವನೇ ಈ ತ್ಯಾಗಿ
ಕೈಯೆಲ್ಲಾ ಮೆತ್ತಿದೆ ಕೆಸರು
ಮನಸೆಲೆಲ್ಲಾ ಒಳಿತಿನದೇ ಮೊಸರು
ಲೋಕದ ಹಸಿವನು ನೀಗಿಸಿದವನೇ ಈ ತ್ಯಾಗಿ

ಸರ್ಕಾರಗಳುದಯಿಸಲಿ ಸರ್ಕಾರಗಳಿಯಲಿ
ಬಿತ್ತುವುದನು ಬಿಡುವುದೇ ಇಲ್ಲ
ಮೂರು ಕಾಸಿಗೆ ಇಳಿಯಲಿ
ಆರು ಕಾಸಿಗೇರಲಿ ಕೈ ದಕ್ಕುವುದೇ ಇಲ್ಲ
ಮುತ್ತಿಗೆ ಹಾಕಲಿ ದೆಹಲಿಯನ್ನೆಲ್ಲಾ
ಸೈನಿಕರಂತೆ ನುಗ್ಗುತ್ತಿರುವೆವು ನಾವಿಂದು
ಆಳರಸರಂತೆ ಕೊಲ್ಲುವ ನಿಮಗೆ ಬುದ್ದಿಯ ಕಲಿಸದೇ ಬಿಡುವುದೇ ಇಲ್ಲ ನಾವೆಂದು

ಕೋಟೆ ಕೊತ್ತಲಗಳ ಮೃಷ್ಟಾನ್ನಭೋಜನಕೂ
ಗುಡಿಸಲು ಗುಡಾರಗಳ ಹಸಿವಿಗೂ
ಯಾರಿಗೂ ಬೇದವೆನೆಣಿಸದೇ ನೇಗಿಲ
ಯೋಗಿಯೇ ಲೋಕಕ್ಕೆ ಅನ್ನವನೀಯುವನು

ಉಳಿಕೆಯನು ಬಯಸದ ಗಳಿಕೆಯು
ಕೈಗೆಟುಕದೆ ಪರಿತಪಿಸುತಲಿ ದೇಶಕೆ
ಬೆನ್ನಲುಬಾದವನೇ ಈ ನೇಗಿಲ ಯೋಗಿಯೋ

ನೇಗಿಲ ಕುಲದೊಳಗಡಗಿದೆ ಕರ್ಮ
ಕರ್ಮ ಮೆರೆತ ಮನುಜನಿಗೆಲ್ಲಿದೆ ಧರ್ಮ
ನೇಗಿಲ ಮೇಲೆಯ ನಿಂತಿದೆ ಧರ್ಮ
ಧರ್ಮದೊಳುದಯಸಲಿ ಸಲಹುವ ಭರವಸೆಯೋ …

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!