Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ತಮಿಳುನಾಡಿಗೆ ಕಾವೇರಿ ನೀರು ಹೋಗುತ್ತಿಲ್ಲ: ದೊಡ್ಡಯ್ಯ

ಕೆ.ಆರ್.ಎಸ್ ನಿಂದ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿಗಾಗಿ ಕೆ.ಆರ್.ಎಸ್‌ನಿಂದ ನೀರು ಬಿಡುಗಡೆ ಮಾಡಲಾಗಿದೆಯೇ ಹೊರತು ತಮಿಳುನಾಡಿಗೆ ಕಾವೇರಿ ನೀರು ಹೋಗುತ್ತಿಲ್ಲ ಎಂದು ಡಾ. ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಸ್ವಷ್ಟಪಡಿಸಿದರು.

ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿಯ ಸತ್ತೇಗಾಲ ಹೆಡ್ವಾರ್ಸ್ ಬಳಿ ಸ್ವಷ್ಟನೆ ನೀಡಿದ ಅವರು, ಕೆಆರ್‌ಎಸ್‌ನಿಂದ ತಮೀಳುನಾಡಿಗೆ ಮಳವಳ್ಳಿ ಮೂಲಕವೇ ಹರಿದುಹೋಗಬೇಕಿದ್ದು, ತಮಿಳುನಾಡಿಗೆ ನೀರು ಹೋಗುತ್ತಿಲ್ಲ ಎನ್ನುವುದಕ್ಕೆ ಸತ್ತೇಗಾಲದ ಹೆಡ್ವಾರ್ಸ್ ಸ್ಥಳವೇ ಸಾಕ್ಷಿಯಾಗಿದೆ, ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನೀರು ಬಿಡಲಾಗುತ್ತಿದೆ ಎನ್ನುವ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಹೇಳಿಕೆ ಸತ್ಯವಾಗಿದೆ, ಯಾರನ್ನೊ ಮೆಚ್ಚಿಸಿಕೊಳ್ಳಲು ತಮೀಳು ನಾಡಿಗೆ ನೀರು ಬಿಡುತ್ತಿಲ್ಲ ಎಂದು ಹೇಳಿದರು.

ಕುಡಿಯುವ ನೀರಿಗಾಗಿ ಕೆಆರ್‌ಎಸ್‌ನಿಂದ ಬಿಟ್ಟ ನೀರನ್ನು ಹೆಡ್ವಾರ್ಸ್ ಬಳಿ ಸಂಗ್ರಹಿಸಲಾಗುತ್ತಿದೆ, ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ, ರಾಜ್ಯಸರ್ಕಾರವೇ ಆಗಲಿ ಅಥವಾ ಶಾಸಕರೇ ಆಗಲಿ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಈ ಬಗ್ಗೆ ಸ್ಥಳಕ್ಕೆ ಬೇಟಿ ನೀಡಿ ಸ್ವಷ್ಟನೆ ನೀಡಲಾಗುತ್ತಿದ್ದು, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಮೇಲೆ ರೈತ ಸಂಘದ ನಾಯಕರು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಪುರಸಭೆ ಸದಸ್ಯ ಶಿವಸ್ವಾಮಿ ಮಾತನಾಡಿ, ರೈತ ಸಂಘದ ನಾಯಕರು ವಾಸ್ತವವನ್ನು ಅರಿತು ಆರೋಪ ಮಾಡಬೇಕು, ಚುನಾವಣೆ ಪ್ರಸ್ತುತ ಸಂದರ್ಭದಲ್ಲಿ ರೈತಸಂಘ ಆರೋಪ ಮಾಡುವ ವಿಷಯವನ್ನೇ ಪ್ರತಿ ಪಕ್ಷದವರು ಬಂಡವಾಳ ಮಾಡಿಕೊಂಡು ಸಾರ್ವಜನಿಕರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹಲವು ಕೊಡುಗೆಗಳನ್ನು ನೀಡಿದ್ದಾರೆ, ಮಂಡ್ಯದಿಂದ ಮಳವಳ್ಳಿಗೆ ಕೇವಲ 40 ಕಿ.ಮೀ ಇದ್ದು, ರೈತ ಸಂಘದ ಮುಖಂಡರು ಆಗಮಿಸಿ ತಮಿಳುನಾಡಿಗೆ ನೀರು ಹೋಗುತ್ತಿದ್ದಿಯೋ ಅಥವಾ ಇಲ್ಲವೋ ಎನ್ನುವುದನ್ನು ಖುದ್ದಾಗಿ ಆಗಮಿಸಿ ಪರಿಶೀಲನೆ ಮಾಡಿ ವಾಸ್ತವಾಂಶವನ್ನು ಮಾತನಾಡಲಿ, ಬರಗಾಲದ ಸಂದರ್ಭದಲ್ಲಿ ಮಳವಳ್ಳಿ ಮದ್ದೂರು ಬೆಂಗಳೂರಿಗೆ ಸಮರ್ಪಕವಾಗಿ ನೀರು ಬಿಡುವುದು ಅನಿವಾರ್ಯವಾಗಿದೆ, ಈ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಿಂದ ಕುಡಿಯುವ ನೀರಿಗಾಗಿ ನದಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದಿಯೋ ಹೊರತು ತಮಿಳುನಾಡಿಗಲ್ಲ ಎನ್ನುವುದನ್ನು ಖುದ್ದಾಗಿ ಪರಿಶೀಲನೆ ನಡೆಸಿ ಹೇಳಿಕೆ ನೀಡುತ್ತಿದ್ದೇವೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಜಗದೀಶ್, ಮಹೇಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!