Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ರಕ್ತದಾನ: ಸಂವಿಧಾನ ಶಿಲ್ಪಿಗೆ ಗೌರವ ಸಮರ್ಪಣೆ

ಮಂಡ್ಯದಲ್ಲಿ ಮಹಾನ್ ಮಾನವತಾವಾದಿ ಅಂಬೇಡ್ಕರ್ ರವರ 131ನೇ ಜಯಂತಿ ಅಂಗವಾಗಿ 75 ಹೆಚ್ಚು ಜನರು ರಕ್ತದಾನ ಮಾಡುವ ಸಂವಿಧಾನ ಶಿಲ್ಪಿಗೆ ಗೌರವ ಸಮರ್ಪಿಸಿದ್ದಾರೆ.

ಮಿಮ್ಸ್ ನ ಎಸ್ಸಿ ಎಸ್ಟಿ ನೌಕರರು, ರಕ್ತನಿಧಿ ಕೇಂದ್ರ ಮೀಮ್ಸ್, ನೆಲದನಿ ಬಳಗ ಮಂಗಲ ಮಂಡ್ಯ ಇವುರುಗಳ ಸಂಯುಕ್ತಾಶ್ರಯದಲ್ಲಿ ಮಂಡ್ಯದ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಭಾಂಗಣದಲ್ಲಿ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು.

ಮಿಮ್ಸ್ ನಿರ್ದೇಶಕ ಡಾ. ಹರೀಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಶಿಕ್ಷಣದಿಂದ ಮಾತ್ರವೇ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದು ಇಂದು ಸತ್ಯವಾಗುತ್ತಿದೆ. ಹಾಗಾಗಿ ನಾವು ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಒತ್ತುಕೊಡಬೇಕು. ಆ ಮೂಲಕ ಸಂವಿಧಾನ ಶಿಲ್ಪಿಯ ಆಶಯ ನೆರವೇರಿಸಲು ಮುಂದಾಗಬೇಕು” ಎಂದು ಕರೆ ನೀಡಿದರು.

ಸುಶಿಕ್ಷಿತರಾದಾಗ ಅಸಮಾನತೆ, ಅಸ್ಪೃಷ್ಯತೆ ಆಚರಣೆ ವಿರುದ್ಧ ಹೋರಾಡಲು ಮತ್ತು ಸಮಸಮಾಜ ನಿರ್ಮಾಣದತ್ತ ಮುನ್ನಡೆಯಬಹುದು. ಶಿಕ್ಷಣದಿಂದ ಮಾತ್ರ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು

ಮಿಮ್ಸ್ ಸಿಇಓ ವೆಂಟಕಲಕ್ಷ್ಮಿಯವರು ಮಾತನಾಡಿ, “ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರ ಮೇಲೆ ಆ ಸಮಾಜದ ಪ್ರಗತಿಯನ್ನು ಅಳೆಯುತ್ತೇನೆ ಎಂದು ಅಂಬೇಡ್ಕರ್ ಹೇಳಿದ್ದರು. ಹಾಗಾಗಿ ಮಹಿಳೆರನ್ನು ಸಮಾನತೆಯಿಂದ ಕಾಣುವುದು ಮತ್ತು ಪ್ರಗತಿಯಲ್ಲಿ ಅವರಿಗೂ ಸಮಪಾಲು ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ಮತ್ತು ಕಾನೂನುಗಳ ಮೂಲಕ ಮಹಿಳೆಯರಿಗೆ ಸಮನಾಗಿ ಹಕ್ಕುಗಳನ್ನು ನೀಡಿದ್ದರ ಪ್ರತಿಫಲದಿಂದ ಉದ್ಯೋಗ, ಉದ್ಯಮಗಳಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗುತ್ತಿದೆ” ಎಂದರು.

ನೆಲದನಿ ಬಳಗದ ಅಧ್ಯಕ್ಷ ಮಂಗಲ ಲಂಕೇಶ್ ಮಾತನಾಡಿ “ನಮ್ಮ ಸಂವಿಧಾನ ಸತ್ತವರ ಬಗ್ಗೆ ಬರೆದಿರುವ ಜೀವನ ಚರಿತ್ರೆಯಲ್ಲ. ಅದು ಜನರ ಬದುಕು ಕಟ್ಟುವ ಮಹಾನ್ ಗ್ರಂಥವಾಗಿದೆ. ಇಂತಹ ಸಂವಿಧಾನ ರಚಿಸುವ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಅವರು ಜೀವನದುದ್ದಕ್ಕೂ ಜಾತೀಯತೆಯ ವಿರುದ್ಧ ಹೋರಾಡಿದವರು. ರಕ್ತಕ್ಕೆ ಯಾವುದೇ ಜಾತಿ ಧರ್ಮವಿಲ್ಲ, ಜೀವ ಉಳಿವಿಗಾಗಿ ರಕ್ತದಾನ ಅತ್ಯವಶ್ಯಕವಿದೆ ಎಂದರು.

ಇದೇ ಸಂದರ್ಭದಲ್ಲಿ ಮಿಮ್ಸ್ ಸ್ತಿçÃರೋಗ ಮತ್ತು ಪ್ರಸೂತಿ ತಜ್ಞ ಡಾ. ಯೋಗೇಂದ್ರಕುಮಾರ್ ಮತ್ತು ರಕ್ತದಾನಿಗಳಾದ ಪ್ರಕಾಶ್, ರಾಕೇಶ್, ನಂದೀಶ್, ಮನೋಜ್ಕುಮಾರ್, ಪದವಿ ಕಾಲೇಜು ವಿದ್ಯಾರ್ಥಿನಿಯರಾದ ದಿವ್ಯ, ಸಹನಾ, ರೇವತಿ, ಆರ್ ಸಹನಾ, ಪ್ರೀತಿ, ವಾಣಿಶ್ರೀ ಸೇರಿದಂತೆ 75ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ರವಿಕುಮಾರ್, ಮಿಮ್ಸ್ ಸ್ಥಾನಿಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಯೋಗೇಂದ್ರಕುಮಾರ್, ನೇತ್ರತಜ್ಞೆ ಡಾ.ಪೂರ್ಣಿಮಾ, ರೋಗ ಲಕ್ಷಣ ಶಾಸ್ತ್ರಾಜ್ಞ ಡಾ. ಸಿದ್ದೇಗೌಡ, ಡಾ.ಮುರಳಿಧರಭಟ್, ಪ್ರಗತಿಪರ ಚಿಂತಕ ಪ್ರೊ.ಹುಲ್ಕೆರೆ ಮಹದೇವು, ನೆಲದನಿ ಬಳಗದ ಗೌ. ಅಧ್ಯಕ್ಷೆ ರುಕ್ಮುಣಿ ಡಾ.ಶಂಕರೇಗೌಡ, ರಕ್ತನಿಧಿ ಕೇಂದ್ರ ಡಾ.ಸುಹಾಸಿನಿ, ಶುಶ್ರೂಷಕರಾದ ಪ್ರಸನ್ನ, ರವಿ, ಮೋಹನ್, ತುಳಸಿಯಮ್ಮ, ಶಿವಮ್ಮ, ನೆಲದನಿ ಬಳಗದ ಪದಾಧಿಕಾರಿಗಳಾದ ಕುಮಾರ್ಗೌಡ, ನಂಜುAಡ, ಯೋಗೇಶ್, ಉಮಾಪತಿ, ಪ್ರತಾಪ್, ವಿಜಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!