ಲೋಕಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪುತ್ತಿದೆ. ಅಬ್ ಕೊ ಬಾರ್ ‘ಚಾರ್ ಸೌ ಪಾರ್’ ಎನ್ನುತ್ತಿದ್ದ ಬಿಜೆಪಿ 244 ಸ್ಥಾನಕ್ಕೆ ಕುಸಿದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 295 ಸ್ಥಾನಗಳಲ್ಲಿ ನಿಂತಿದೆ. ಇಂಡಿಯಾ ಮೈತ್ರಿಕೂಟ 234 ಸ್ಥಾನಗಳ ಆಸು ಪಾಸಿನಲ್ಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳ ಆಡಳಿತದ ವಿರುದ್ಧ ದೇಶದ ಜನರು ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಡಿಸಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ರಾಮಮಂದಿರ ಕೂಡ ಬಿಜೆಪಿ ಕೈ ಹಿಡಿದಿಲ್ಲ.ದೇಶದ ಜ್ವಲಂತ ಸಮಸ್ಯೆಗಳಿಗಿಂತ ಮೋದಿ ದ್ವೇಷದ ರಾಜಕಾರಣಕ್ಕೆ ಹೆಚ್ಚು ಮಹತ್ವ ನೀಡಿದ್ದರಿಂದ ಉತ್ತರ ಪ್ರದೇಶದಲ್ಲಿ ಹಿನ್ನಡೆ ಆಗಿದೆ ಎನ್ನಲಾಗಿದೆ.
ಇಷ್ಟೆಲ್ಲಾ ಇದ್ದರೂ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ ಸರ್ಕಾರ ರಚನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಬಿಜೆಪಿ ಎನ್‌ಡಿಎ ಸರ್ಕಾರವನ್ನು ರಚಿಸಿದರೂ, ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ, ಮೋದಿಯನ್ನು ಪದಚ್ಯುತಿಗೊಳಿಸಿ, ನಿತಿನ್ ಗಡ್ಕರಿಯನ್ನು ಪ್ರಧಾನಿ ಮಾಡಲು ಆರ್‌ಎಸ್‌ಎಸ್ ಚಿಂತನೆ ನಡೆಸಿದೆ ಎಂದು ರಾಜಕೀಯ ವಿಶ್ಲೇಷಕರಿಂದ ತಿಳಿದುಬಂದಿದೆ.
ಬಿಜೆಪಿಯೊಳಗೆ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಲು ಬಿಜೆಪಿ ನೂತನ ಸಂಸದರ ಸಭೆಯಲ್ಲಿ ನಿರ್ಣಯ ಮಂಡಿಸಲು ಆರ್‌ಎಸ್‌ಎಸ್ ಯೋಜಿಸುತ್ತಿದೆ ಎನ್ನಲಾಗುತ್ತಿದೆ.
50%ಕ್ಕಿಂತ ಹೆಚ್ಚು ಬಿಜೆಪಿ ಸಂಸದರು ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುವುದಿಲ್ಲ. ಅವರೆಲ್ಲರೂ, ಆರ್ ಎಸ್ ಎಸ್ ಬೆಂಬಲಿತ ನಾಯಕನನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ.ಈ ಹಿನ್ನಲೆಯಲ್ಲಿ ಯಾರು ಮುಂದಿನ ಪ್ರಧಾನಿ ಎಂಬುದು ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.




