Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿರ್ಮಲಾನಂದಶ್ರೀ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅಗೌರವ : ಅಮಿತ್ ಶಾ ಕ್ಷಮೆಯಾಚನೆಗೆ ಜೆಡಿಎಸ್ ಆಗ್ರಹ

ರಾಜ್ಯದ ಒಕ್ಕಲಿಗ ಸಮುದಾಯಕ್ಕೆ ಹಾಗೂ ಶ್ರೇಷ್ಠ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಕೇಂದ್ರ ಸಚಿವ ಕೇಂದ್ರ ಸಚಿವ ಅಮಿತಾ ಶಾ ಅಗೌರವ ತೋರಿದ್ದು, ಕೂಡಲೇ ಅಮಿತ್ ಶಾ ಅವರು ಒಕ್ಕಲಿಗ ಸಮುದಾಯ ಹಾಗೂ ಸ್ವಾಮೀಜಿಯವರ ಬಳಿ ಕ್ಷಮೆಯಾಚಿಸಬೇಕೆಂದು ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀಕಾಲ ಭೈರವನ ಪ್ರತಿರೂಪ ಎಂದೇ ನಂಬಿರುವ ಆಧರಣೀಯ ಸ್ವಾಮೀಜಿ ಅವರ ಪಕ್ಕ ಕುಳಿತಿದ್ದ ಅಮಿತ್ ಶಾ, ಕಾಲಮೇಲೆ ಕಾಲು ಹಾಕಿ ಕುಳಿತುಕೊಂಡು ಅಗೌರವ ತೋರಿಸಿದ್ದಾರೆ, ಇದು ಖಂಡನೀಯ ಎಂದರು.

ಇದು ಹಿಂದೂ ಧರ್ಮದ ಸಂಸ್ಕೃತಿಯೇ ? 

ಹಿಂದೂ ಧರ್ಮದ ರಕ್ಷಣೆ ಮಾಡುವವರು ನಾವು ಎಂದು ಕೇವಲ ಬೂಟಾಟಿಕೆಗೆ ಹೇಳಿಕೊಳ್ಳುವ ಬಿಜೆಪಿ ನಾಯಕರು ಯತಿಗಳ ಮುಂದೆ ತಮ್ಮ ನೈಜ ಸಂಸ್ಕೃತಿಯನ್ನು ತೋರಿಸಿದ್ದಾರೆಂದು ಖಂಡಿಸಿದ ಅವರು, ಅಮಿತ್ ಶಾ ಅವರೇ ಶೃಂಗೇರಿ ಮಠಕ್ಕೆ ಹೋದಾಗಲೂ ಇದೇ ರೀತಿಯಾಗಿ ಕುಳಿತುಕೊಳ್ಳುತ್ತೀರಾ? ಈ ಕ್ಷಣವೇ ನೀವು ಕ್ಷಮೆಯನ್ನು ಕೇಳಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪನವರು ಯಾವ ರಾಜಕಾರಣ ಮಾಡುತ್ತಿದ್ಧಾರೆ ? 

ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತಿದೆ ಅಮಿತ್ ಶಾ ಆರೋಪಿಸಿದ್ದಾರೆ, ಹಾಗಾದರೆ ಬಿಜೆಪಿಯಲ್ಲೇ ಇರುವ ಯಡಿಯೂರಪ್ಪನವರು ಯಾವ ರಾಜಕಾರಣ ಮಾಡುತ್ತಿದ್ದಾರೆ ? ನಮ್ಮ ರಾಜ್ಯದಲ್ಲಿ ಗುಜರಾತ್ ಮಾದರಿಯ ರಾಜಕಾರಣ ಮಾಡಬೇಡಿ, ಇದು ಕರ್ನಾಟಕ. ಮಂಡ್ಯದಲ್ಲಿ ಗುಜರಾತ್ ಮಾದರಿಯ ರಾಜಕಾರಣ ಇಲ್ಲಿ ನಡೆಯೋದಿಲ್ಲ ಎಂದು ತಿರುಗೇಟು ನೀಡಿದರು.

ಸರ್ಕಾರ ಕಿತ್ತಾಕಲು ಮಟ್ಕಾ ದಂಧೆ ಇಸ್ಪೀಟು ಕಾಸಿನೋ ದುಡ್ಡು

ಸಿ.ಟಿ. ರವಿ ಅವರೇ ನೀವು.. ಮೊಮ್ಮಗ ತಾತ ಅಮ್ಮ ಮಗನ ಬಗ್ಗೆ ಮಾತನಾಡುತ್ತೀರಿ, ನೀವು ನಿಮ್ಮ ಕ್ಷೇತ್ರವನ್ನು ಸಾಮಾನ್ಯ ಕಾರ್ಯಕರ್ತರಿಗೆ  ಬಿಟ್ಟು ಕೊಡುತ್ತೀರಾ ?

ಸಿ.ಪಿ ಯೋಗೇಶ್ವರ್‌ ಅವರೇ ನೀವೇ ಬ್ರೋಕರ್. ಜನರಪ ಪಕ್ಷದ ಸರ್ಕಾರ ಕಿತ್ತಾಕಲು ಮಟ್ಕಾ ದಂದೆ ಇಸ್ಪೀಟು ಕಾಸಿನೋ ದುಡ್ ತಂದು ಸುರಿದು, ಪ್ರಜಾಸತ್ತಾತ್ಮಕ ಸರ್ಕಾರ ತೆಗೆದ್ರಿ, ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ ? ಚನ್ನಪಟ್ಟಣದಲ್ಲಿ ಸೋಲುವ ಭೀತಿಯಿಂದ, ಮಂಡ್ಯಕ್ಕೆ ಬಂದು ಇಲ್ಲಸಲ್ಲದ ಆರೋಪ ಮಾಡ್ತಿದ್ದೀರಿ ಎಂದು ತಿರುಗೇಟು ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!