Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೇವಾಕಿರಣ ವೃದ್ಧಾಶ್ರಮದಲ್ಲಿರುವ ಪ್ರತಿಯೊಬ್ಬರಿಗೂ ಉಚಿತ ಸೌಲಭ್ಯ

ಸೇವಾಕಿರಣ ವೃದ್ಧಾಶ್ರಮದಲ್ಲಿರುವ ಪ್ರತಿಯೊಬ್ಬ ಫಲಾನುಭವಿಗಳಿಗೂ ಉಚಿತ ಸೌಲಭ್ಯ ಒದಗಿಸಲಾಗಿದೆ. ಅವರ ಆರೋಗ್ಯ ಕ್ಷೇಮವನ್ನು ಅತ್ಯಂತ ಕಾಳಜಿಯಿಂದ ಸಂಸ್ಥೆ ನೋಡಿಕೊಳ್ಳುತ್ತಿದೆ ಎಂದು ಸೇವಾಕಿರಣ ವೃದ್ಧಾಶ್ರಮದ ಕಾರ್ಯದರ್ಶಿ ನಾಗರಾಜ್ ರವರು ತಿಳಿಸಿದರು.

ಮಂಡ್ಯ ನಗರದ ಸೇವಾಕಿರಣ ಉಚಿತ ವೃದ್ಧಾಶ್ರಮದಲ್ಲಿ‌ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೇವಾಕಿರಣದ ಜೊತೆಗೆ ಅಪೊಲೊ ಫೌಂಡೇಶನ್ ನಿಂದ ಮಲ್ಟಿ ಹಾರ್ಟ್ ಫೌಂಡೇಶನನ್ನು ಮಾಡಿಕೊಂಡಿದ್ದಾರೆ. ಅದರ ಮುಖಾಂತರ ಫಲಾನುಭವಿಗಳಿಗೆ ಬೇಕಾದಂತಹ ಔಷಧಿ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದರು.

ಸೇವಾಕಿರಣ ಉಚಿತ ವೃದ್ಧಾಶ್ರಮದಲ್ಲಿ 30 ಜನರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. 20 ಜನರು ಮಹಿಳೆಯರು ಹಾಗೂ 10 ಜನರು ಪುರುಷರಿದ್ದು,ಇವರಿಗೆ ಉಚಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

8 ವರ್ಷಗಳ ಕಾಲ ಸಾಕಷ್ಟು ಸವಾಲುಗಳನ್ನು ಎದುರಿಸಿ ವೃದ್ಧಾಶ್ರಮನ್ನು ನಡೆಸಿಕೊಂಡು ಬಂದಿದ್ದೇವೆ. ಹಿಂದೆ ಕೇವಲ 10 ರೂಪಾಯಿ ಈ ಆಶ್ರಯವಾಸಿಗಳಿಗೆ ಒಂದು ಹೊತ್ತಿನ ಊಟಕ್ಕೆ ಕೊಡುತ್ತಿದ್ದರು. ಕೆಲಸ ಮಾಡುವವರಿಗೆ 300 ರೂಪಾಯಿ ನೀಡಲಾಗುತ್ತಿತ್ತು ಎಂದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿಯ ಡಾ. ನಾಗಲಕ್ಷ್ಮಿ ರವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸೇವಾಕಿರಣ ವೃದ್ಧಾಶ್ರಮ ಅಧ್ಯಕ್ಷರಾದ ಬಿ.ಸಿ‌ ಶಿವಾನಂದ, ಮುಡ ಮಾಜಿ ಅಧ್ಯಕ್ಷರಾದ ಪಿ.ಎಂ ಸೋಮಶೇಖರ್, ಜಿ. ಕುಮಾರ್, ವಿಜಯಕರ್ನಾಟಕ ವರದಿಗಾರ ನವೀನ್ ಚಿಕ್ಕ ಮಂಡ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!