Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಎಸ್ಪಿ ಸ್ಪರ್ಧೆ

ಬಹುಜನ ಸಮಾಜ ಪಕ್ಷವು ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೀಳಿಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ನಮ್ಮ ಪಕ್ಷವು ಸಂಪೂರ್ಣವಾಗಿ ಸಜ್ಜುಗೊಂಡಿದ್ದು, ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳನ್ನು ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದರು.

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು ಇಚ್ಚಿಸುವ ಮುಖಂಡರು ಡಿ.25ರೊಳಗೆ ಮಂಡ್ಯ ಜಿಲ್ಲಾ ಸಮಿತಿಯನ್ನು ಸಂಪರ್ಕಿಸಿ ಅರ್ಜಿಸಲ್ಲಿಸಬಹುದು, ರಾಜ್ಯ ಕಾರ್ಯದರ್ಶಿ ಎಂ.ಎಸ್‌.ವೆಂಕಟೇಶ್, ಮೊ.7760098980 ಮತ್ತು ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್ ಮೊ.9164048622 ಇವರನ್ನು ಸಂಪರ್ಕಿಸಿ ಅರ್ಜಿ ಶುಲ್ಕ 5,000 ರೂ.ಗಳನ್ನು ಪಾವತಿಸಿ, ನಿಗದಿತ ದಿನಾಂಕದ ಒಳಗೆ ಜಿಲ್ಲಾ ಸಮಿತಿಗೆ ಅರ್ಜಿಯನ್ನು ಸಲ್ಲಿಸಬೇಕೆಂದು ತಿಳಿಸಿದರು.

EWS ಮೀಸಲಾತಿಗೆ ವಿರೋಧ 

ಆರ್ಥಿಕವಾಗಿ ಹಿಂದುಳಿರುವ ಮೇಲ್ಜಾತಿಯ ಬಡವರಿಗೆ ಮಾತ್ರ ಶೇ.10 ಮೀಸಲಾತಿ ನೀಡಿರುವುದನ್ನು ಬಿಎಸ್ಪಿಯು ವಿರೋಧಿಸುತ್ತದೆ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, EWS ಮೀಸಲಾತಿಯ ವಿರುದ್ಧ ಬಿಎಸ್ಪಿಯು ಈಗಾಗಲೇ ರಾಜ್ಯಸಭೆಯಲ್ಲಿ ಹೋರಾಟ ನಡೆಸುತ್ತಿದೆ. ದೇಶದಲ್ಲಿ ಹಲವಾರು ಸಮುದಾಯಗಳು ಜನಸಂಖ್ಯಾಧಾರಿತವಾಗಿ ಮೀಸಲಾತಿ ನಡೆಸುತ್ತಿದ್ದರೂ, ಅವುಗಳನ್ನು ಪರಿಗಣಿಸದ ಕೇಂದ್ರ ಸರ್ಕಾರ, ರಾತ್ರೋರಾತ್ರಿ ದೇಶದಲ್ಲಿ ಕೇವಲ ಶೇ.3 ಜನಸಂಖ್ಯೆಯನ್ನು ಹೊಂದಿರುವ ಸಮುದಾಯ ಒಂದಕ್ಕೆ ಶೇ.10ರಷ್ಟು ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

ರಾಜ್ಯದಾದ್ಯಂತ ಪಕ್ಷ ಸಂಘಟನೆ 

ದಲಿತರು, ಹಿಂದುಳಿದವರು ಹಾಗೂ ಶೋಷಿತರರ ಪರವಾಗಿ ಕೆಲಸ ಮಾಡುತ್ತಿರುವ ಪಕ್ಷದ ನಾಯಕರು ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ, ದೇಶದಲ್ಲಿ ಮೂರನೇ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯು ಎಲ್ಲಾ ಕ್ಷೇತ್ರಗಳನ್ನು ತನ್ನ ಅಭ್ಯರ್ಥಿಗಳನ್ನು ಕಣಕ್ಕೀಳಿಸಲಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್,  ಜಿಲ್ಲಾ ಉಪಾಧ್ಯಕ್ಷ ರೋಹಿತ್ ಶಂಕರ್ ಹೆಚ್.ಎಂ., ಜಿಲ್ಲಾ ಕಾರ್ಯದರ್ಶಿರಾದ ಅನಿಲ್ ಕುಮಾರ್, ಸುರೇಶ್ ವಿ., ಎಸ್.ಪಿ.ಶಿವಕುಮಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!