Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರೈತರಿಗೆ ₹53.48 ಕೋಟಿ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ

ರೈತರು ಕಬ್ಬು ಸರಬರಾಜು ಮಾಡಿ 14 ದಿನಗಳು ಕಳೆದಿದ್ದರೂ ಸಹ ಎಫ್.ಆರ್.ಪಿ ದರದಂತೆ ಪೂರ್ಣವಾಗಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು 10 ದಿನದೊಳಗಾಗಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗದಿರುವ ಸಂಬಂಧ ದೂರುಗಳು ಕೇಳಿ ಬರುತ್ತಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಕಾರ್ಖಾನೆಗಳು ರೈತರಿಗೆ ಕಬ್ಬು ಹಣ ಪಾವತಿ ಮಾಡಲು ಬಾಕಿ ಉಳಿಸಿಕೊಂಡಿರುವ ಮೊತ್ತದ ಮಾಹಿತಿ ಮತ್ತು ವಿಳಂಬಕ್ಕೆ ಕಾರಣ ತಿಳಿಸುವಂತೆ ಸಭೆಗೆ ಹಾಜರಿದ್ದ ಎಲ್ಲಾ ಕಾರ್ಖಾನೆಗಳ ಅಧಿಕಾರಿಗಳಿಗೆ ತಿಳಿಸಿದರು.

ಕೆ.ಆರ್. ಪೇಟೆ ಐ.ಸಿ.ಎಲ್ ಷುಗರ್ಸ್ 5,01,365 ಮೆಟ್ರಿಕ್ ಟನ್ ಕಬ್ಬು ನುರಿಸಿದೆ, ಎಫ್ .ಆರ್.ಪಿ ಪ್ರತಿ ಮೆಟ್ರಿಕ್ ಟನ್ ಗೆ 2,944 ರೂ ನಿಗದಿಯಾಗಿದ್ದು, 14 ದಿನಗಳನ್ನು ಮೀರಿ ರೈತರಿಗೆ ಪಾವತಿಸಲು ರೂ 14.14 ಕೋಟಿ ಬಾಕಿ ಇರುತ್ತದೆ ಎಂದು ಸಭೆಗೆ ಕಾರ್ಖಾನೆಯ ಅಧಿಕಾರಿ ಮಾಹಿತಿ ನೀಡಿದರು.

ಕೊಪ್ಪ ಎನ್. ಎಸ್.ಎಲ್ ಷುಗರ್ಸ್ 7,43,200 ಮೆಟ್ರಿಕ್ ಟನ್ ಕಬ್ಬು ನುರಿಸಿದೆ, ಎಫ್ .ಆರ್.ಪಿ ಪ್ರತಿ ಮೆಟ್ರಿಕ್ ಟನ್ ಗೆ ರೂ. 2,920 ನಿಗದಿಯಾಗಿದ್ದು, 14 ದಿನಗಳನ್ನು ಮೀರಿ ರೈತರಿಗೆ ಪಾವತಿಸಲು ರೂ 19.21 ಕೋಟಿ ಬಾಕಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಷುಗರ್ಸ್ 8,00,725 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್ .ಆರ್.ಪಿ ಪ್ರತಿ ಮೆಟ್ರಿಕ್ ಟನ್ ಗೆ ರೂ 2,944 ನಿಗದಿಯಾಗಿದ್ದು, 14 ದಿನಗಳನ್ನು ಮೀರಿ ರೈತರಿಗೆ ಪಾವತಿಸಲು ರೂ 16.30 ಕೋಟಿ ಬಾಕಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ಪಾಂಡವಪುರ ಎಂ.ಆರ್.ಎನ್ ಕೇನ್, ಪಿ.ಎಸ್.ಎಸ್. ಕೆ ಶುಗರ್ಸ್ 5,39,575 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್ .ಆರ್.ಪಿ ಪ್ರತಿ ಮೆಟ್ರಿಕ್ ಟನ್ ಗೆ ರೂ 2,920 ನಿಗದಿಯಾಗಿದ್ದು, 14 ದಿನಗಳನ್ನು ಮೀರಿ ರೈತರಿಗೆ ಪಾವತಿಸಲು ರೂ 3.83 ಕೋಟಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಮೈಶುಗರ್ ಸಕ್ಕರೆ ಕಾರ್ಖಾನೆ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು,  ಎಫ್ .ಆರ್.ಪಿ ಪ್ರತಿ ಮೆಟ್ರಿಕ್ ಟನ್ ಗೆ ರೂ 2920 ನಿಗದಿಯಾಗಿದ್ದು, ರೈತರಿಗೆ ಹಣ ಪಾವತಿಯಲ್ಲಿ ಯಾವುದೇ ಬಾಕಿ ಉಳಿಸಿಕೊಂಡಿರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಒಟ್ಟಾರೆ ರೈತರಿಗೆ ರೂ.53.48 ಕೋಟಿ ಬಾಕಿ ಇದ್ದು, ಎನ್.ಎಸ್.ಎಲ್ ಮಗರ್ಸ್ ಕಾರ್ಖಾನೆ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಹಾಗೂ ಕೋರಮಂಡಲ್ ಸಕ್ಕರೆ ಕಾರ್ಖಾನೆಗಳು ಹೆಚ್ಚು ಬಾಕಿ ಉಳಿಸಿಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು 10 ದಿನಗಳೊಳಗಾಗಿ ಸಂಬಂಧಪಟ್ಟ ರೈತರಿಗೆ ಪೂರ್ಣವಾಗಿ ಪಾವತಿಸುವಂತೆ ಎಲ್ಲಾ ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ