Thursday, September 19, 2024

ಪ್ರಾಯೋಗಿಕ ಆವೃತ್ತಿ

ಆಣೆ-ಪ್ರಮಾಣದ ರಾಜಕೀಯದಿಂದ ಜಿಲ್ಲೆ ಅಭಿವೃದ್ಧಿ ಆಗಲ್ಲ : ಮಧುಚಂದನ್ ಕಿಡಿ

ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ಆಣೆ-ಪ್ರಮಾಣದ ವಾಗ್ವಾದದಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿಯಾಗಲ್ಲ, ಸ್ಥಳೀಯ ಜನಪ್ರತಿನಿಧಿಗಳು ಮಾಡುವ ಕೆಲಸವನ್ನು ಬಿಟ್ಟು, ಆಣೆ-ಪ್ರಮಾಣ ಮಾಡುವಂತೆ ಪರಸ್ಪರವು ಹೇಳಿಕೆ ನೀಡುವ ಮೂಲಕ ಕಾಲಾಹರಣ ಮಾಡುತ್ತಿದ್ಧಾರೆಂದು ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ, ಮಂಡ್ಯನಗರದಲ್ಲಿ ಸುಮಾರು 20 ಸಾವಿರ ಮನೆಗಳಿಗೆ, ಈ ಪೈಕಿ ಸುಮಾರು 11 ಸಾವಿರ ಮನೆಗಳಿಗೆ ಹಕ್ಕುಪತ್ರಗಳ ಇಲ್ಲ, ಈ ಸಮಸ್ಯೆಗಳು ಅವರ ಕಣ್ಣಿಗೆ ಬೀಳುತ್ತಿಲ್ಲವೇ ? ರಸ್ತೆ ಗುಂಡಿಗಳನ್ನು ತಾತ್ಕಲಿಕವಾಗಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಶಾಶ್ವತ ಪರಿಹಾರ ಯಾವಾಗ ?

ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರಿಗೆ ತಾಕತ್ತಿದ್ದರೆ ಕಬ್ಬಿಗೆ 4,500 ರೂ. ದರ ನಿಗಧಿ ಮಾಡಿಸಲಿ ? ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಆಣೆ-ಪ್ರಮಾಣದ ನಾಟಕವಾಡಿಕೊಂಡು ತಿರುಗುವುದು ಬೇಡ. ರೈತ ಸಂಘದ ನಡೆಸುತ್ತಿರುವ ಅಹೋರಾತ್ರಿ ಧರಣಿ ಅನಿರ್ಷ್ಟಾವಧಿವರೆಗೆ ನಡೆಯಲಿದೆ, 4,500 ರೂ.ಬೆಲೆ ನಿಗಧಿ ಮಾಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.

ಮೈಸೂರು ರೈತರು ಭಾಗಿ

ಈ ಧರಣಿಯಲ್ಲಿ ಮಂಡ್ಯ ಜಿಲ್ಲೆಯ ರೈತರಷ್ಟೇ ಅಲ್ಲದೆ ಮೈಸೂರಿನ ರೈತರು ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡ ಪ್ರಸನ್ನ ತಿಳಿಸಿದರು. ಪ್ರತಿದಿನ ಒಂದೊಂದು ತಾಲ್ಲೂಕಿನ ರೈತರು ಸರತಿಯಂತೆ ಭಾಗವಹಿಸಲಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ  ನಿರಂತರವಾಗಿರಲಿದೆ ಎಂದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!