Saturday, September 21, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ‘ವಿಕಸಿತ ಭಾರತ್ ಸಂಕಲ್ಪ ಯಾತ್ರೆ’ಯಲ್ಲಿ ಅಶ್ಲೀಲ ನೃತ್ಯ : ವಿಡಿಯೋ ವೈರಲ್ !

ಮುಂದಿನ ಲೋಕಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಬಿಜೆಪಿ, ದೇಶದಾದ್ಯಂತ ‘ವಿಕಸಿತ ಭಾರತ್ ಸಂಕಲ್ಪ ಯಾತ್ರೆ’ ಅಭಿಯಾನಕ್ಕೆ ಚಾಲನೆ ನೀಡಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆಯೋಜಿಸಿದ್ದ ಇದೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ‘ಅಶ್ಲೀಲ’ ನೃತ್ಯ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಮಹಿಳೆಯು ಹಿಂದಿಯ ಕರಣ್-ಅರ್ಜುನ್ ಚಿತ್ರದ ‘ಛತ್ ಪೆ ಸೋಯಾ ಥಾ ಬೆಹ್ನೋಯಿ’ ಎಂಬ ಹಾಡಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು.

ಭೋಜ್‌ಪುರ ಪ್ರದೇಶದ ಗಾಜಿಯಾಬಾದ್‌ನ ಮೋದಿನಗರ ಪ್ರದೇಶದಿಂದ ಈ ವಿಡಿಯೋ ವೈರಲ್ ಆಗಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೆಳೆಯಲು ಕಾರ್ಯಕ್ರಮದ ಸಂಘಟಕರು ನೃತ್ಯ ಪ್ರದರ್ಶನವನ್ನು ಏರ್ಪಡಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನೃತ್ಯ ಕಾರ್ಯಕ್ರಮವು ಶನಿವಾರ (ಡಿಸೆಂಬರ್ 30) ನಡೆದಿದ್ದು, ಗಾಜಿಯಾಬಾದ್‌ನ ಭೋಜ್ಪುರದ ಶಕುರ್ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯಸ್ಥ ಹಾಗೂ ಅವರ ಪತ್ನಿ, ಸ್ಥಳೀಯ ಶಾಸಕ, ಸಂಸದ ಸತ್ಯಪಾಲ್ ಸಿಂಗ್ ವೇದಿಕೆಯಲ್ಲಿದ್ದರು.

“>

ವೇದಿಕೆಯಲ್ಲಿ ವಿವಿಧ ಪದಾಧಿಕಾರಿಗಳ ಫೋಟೋಗಳಿರುವ ಬ್ಯಾನರ್ ಕೂಡ ಇತ್ತು. ಮಹಿಳೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೋಸ್ಟರ್ ಗೋಚರಿಸುತ್ತದೆ. ಆದರೆ, ಪದಾಧಿಕಾರಿಗಳು ವೇದಿಕೆಯಲ್ಲಿದ್ದಾಗ ನೃತ್ಯ ಪ್ರದರ್ಶನ ನಡೆಯಿತು ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಕಾರ್ಯಕ್ರಮವು ಪ್ರೋಟೋಕಾಲ್‌ಗಳೊಂದಿಗೆ ನಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಅತಿಥಿಗಳು ವೇದಿಕೆಯಿಂದ ತೆರಳಿದ ನಂತರವೇ ನೃತ್ಯ ಪ್ರದರ್ಶನ ನಡೆದಿರಬೇಕು ಎಂದು ಹೇಳಿದ್ದಾರೆ. ಆದರೂ, ವೈರಲ್ ಆದ ಬಿಜೆಪಿ ವೇದಿಕೆಯ ವೀಡಿಯೋದಲ್ಲಿ ಮಹಿಳೆಯು ಆಕ್ಷೇಪಾರ್ಹ ಮತ್ತು ಅಶ್ಲೀಲ ನೃತ್ಯ ಪ್ರದರ್ಶಿಸುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಏನಿದು ವಿಕಸಿತ ಭಾರತ್ ಸಂಕಲ್ಪ ಯಾತ್ರೆ?

ವಿಕಸಿತ ಭಾರತ್ ಸಂಕಲ್ಪ ಯಾತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15, 2023 ರಂದು ಜಾರ್ಖಂಡ್‌ನ ಖುಂಟಿಯಿಂದ ಪ್ರಾರಂಭಿಸಿದರು. ವಿಕಸಿತ ಭಾರತ್ ಸಂಕಲ್ಪ ಯಾತ್ರೆಯು ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಪ್ರಚಾರ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!