Thursday, April 18, 2024

ಪ್ರಾಯೋಗಿಕ ಆವೃತ್ತಿ

ಮನುಷ್ಯರ ಜೀವ ಉಳಿಸಲು ರಕ್ತದಾನ ಮಾಡಿ

ರಕ್ತದಾನದಂತಹ ಪವಿತ್ರ ಕಾರ್ಯದಿಂದ ಮಾತ್ರ ಮನುಷ್ಯರ ಜೀವ ಉಳಿಸಲು ಸಾಧ್ಯ.ಹಾಗಾಗಿ ರಕ್ತದಾನ ಮಾಡಿ ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಅಧಿಕಾರಿಗಳಾದ ಡಾ. ಆಶಾಲತಾ ಸಲಹೆ ನೀಡಿದರು.

ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಓಂ ಶ್ರೀನಿಕೇತನ ಟ್ರಸ್ಟ್, ಪರಿವರ್ತನಾ ಕಾಲೇಜು, ಉದ್ಯೋಗದಾತ ಸಂಸ್ಥೆ, ಶೇಷಾದ್ರಿಪುರಂ ಪದವಿ ಕಾಲೇಜು,ಅಚೀವರ್ಸ್ ಅಕಾಡೆಮಿ, ಭಾವಸಾರ ವಿಜನ್ ಇಂಡಿಯಾ , ರಕ್ತನಿಧಿ ಕೇಂದ್ರ ಮಂಡ್ಯ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ “ವಿಶ್ವ ರಕ್ತದಾನಿಗಳ ದಿನಾಚರಣೆ” ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದಿನ ನಿತ್ಯ ಸಂಭವಿಸುತ್ತಿರುವ ಅಪಘಾತದ ಗಾಯಾಳುಗಳಿಗೆ, ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ, ರಕ್ತಹೀನತೆ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ತುರ್ತಾಗಿ ರಕ್ತದ ಅಗತ್ಯವಿರುತ್ತದೆ. 18 ರಿಂದ 65 ವರ್ಷದ ನಡುವಿನ 45 ಕೆ .ಜಿ .ಗಿಂತ ಹೆಚ್ಚು ತೂಕ ಇರುವ ಎಲ್ಲಾ ಆರೋಗ್ಯವಂತರು ರಕ್ತದಾನದಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು ಮತ್ತು ಬೇರೆಯವರಿಗೂ ರಕ್ತದಾನ ಮಾಡಲು ಪ್ರೇರೇಪಣೆ ನೀಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್. ಕೆ .ವೆಂಕಟೇಶ್ ರವರು ಮಾತನಾಡಿ “ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ. ಈ ಪ್ರಯತ್ನಕ್ಕೆ ಕೈಜೋಡಿಸಿ ಜೀವ ಉಳಿಸೋಣ” ಎಂಬ ಘೋಷಣೆಯಡಿ ಈ ವರ್ಷದ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸುತ್ತಿದ್ದೇವೆ, ಕೋವಿಡ್ ಬಂದನಂತರ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಾಡುತ್ತಿದೆ,ಪುರುಷರು ವರ್ಷದಲ್ಲಿ ನಾಲ್ಕು ಬಾರಿ,ಮಹಿಳೆಯರು ಮೂರು ಬಾರಿ ರಕ್ತದಾನ ಮಾಡಬಹುದು.ರಕ್ತದಾನ ಮಾಡುವುದರ ಮೂಲಕ ಅನಿಮೀಯಾ ಮುಕ್ತ ಭಾರತಕ್ಕೆ ಯುವ ಸಮೂಹ ಸಂಕಲ್ಪ ಮಾಡಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಮಾಡುವವರು ಧೂಮಪಾನ,ಮದ್ಯಪಾನ ಮಾಡಬಾರದು,ತಂಬಾಕು ಉತ್ಪನ್ನ ಸೇವನೆ ಮಾಡಬಾರದು,ಆರೋಗ್ಯಕರ ಜೀವನಶೈಲಿಯ ಮೂಲಕ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು ಎಂದರು.

ಓಂ ಶ್ರೀನಿಕೇತನ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಎಂ. ಪುಟ್ಟೇಗೌಡ ,ಪರಿವರ್ತನ ಕಾಲೇಜಿನ ಪ್ರಾಂಶುಪಾಲರಾದ ಚೇತನ್ ರಾಮ್ ,ಆರಕ್ಷಕ ನಿರೀಕ್ಷಕರಾದ ಪುನೀತ್, ವಾರ್ತಾ ಮತ್ತು ಪ್ರಚಾರ ಇಲಾಖೆಯ ಡಾ.ಟಿ. ಸಿ. ಪೂರ್ಣಿಮಾ ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್,ಮಾತನಾಡಿದರು.

ಡಾ. ರಾಘವೇಂದ್ರ, ಸುರೇಶ್,ಮಂಜುನಾಥ್, ನಾಗರಾಜು ,ಡಾ. ಪ್ರಶಾಂತ್,ನಳಿನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ್,ತಾಲ್ಲೂಕು ಮೇಲ್ವಿಚಾರಕರಾದ ಜಿ. ಮೋಹನ್,ಮಂಗಳ, ಪ್ರಯೋಗಶಾಲಾ ತಂತ್ರಜ್ಞಾಧಿಕಾರಿ ಹಾಗೂ ರಕ್ತ ನಿಧಿ ಕೇಂದ್ರದ ತಾಲ್ಲೂಕು ಮೇಲ್ವಿಚಾರಕರಾದ ಭಾನುಮತಿ,ರುಕ್ಮಾಂಗದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಲೀಂಪಾಷ, ಕೆಂಪೇಗೌಡ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!