ರಾಜ್ಯ ಸರ್ಕಾರವು ಕೆ.ಆರ್.ಎಸ್ ನಲ್ಲಿ ಇಂದಿನಿಂದ ಸಾಂಕೇತಿಕವಾಗಿ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿಯನ್ನು ವಿರೋಧಿ ಮಂಡ್ಯ ಹಾಗೂ ಕೆ.ಆರ್.ಎಸ್ ನಲ್ಲಿ ರೈತರು ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಮಂಡ್ಯದಲ್ಲಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರರು ಬಸ್ಸಿನಲ್ಲಿ ಕೆ.ಆರ್.ಎಸ್ ಗೆ ತೆರಳಿ ಅಲ್ಲಿಯೂ ಪ್ರತಿಭಟನೆ ನಡೆಸಿದರು.
5 ದಿನಗಳ ಕಾಲ ಸಾಂಕೇತಿಕವಾಗಿ ಕಾವೇರಿ ಆರತಿ ನಡೆಸುವ ಮೂಲಕ ಸರ್ಕಾರ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯರ್ಥ ಮಾಡುವ ಜೊತೆಗೆ ಮೌಢ್ಯವನ್ನು ಭಿತ್ತುವ ಕೆಲಸ ಮಾಡುತ್ತಿದೆ ಎಂದು ಹೋರಾಟಗಾರರಾದ ಸುನಂದ ಜಯರಾಂ ಕಿಡಿಕಾರಿದರು.
ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಇದ್ದರು ಕಾವೇರಿ ಆರತಿಗೆ ಹಠ ಬಿದ್ದಿದೆ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಈ ಯೋಜನೆ ನಿಲ್ಲಿಸಬೇಕು. ಕನ್ನಂಬಾಡಿ ಅಣೆಕಟ್ಟು ಉಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಬೋರಯ್ಯ, ಸಿ.ಕುಮಾರಿ, ಶಿವಳ್ಳಿ ಚಂದ್ರು, ನಾಗಣ್ಣಗೌಡ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್,
ದುಡ್ಡು ಹೊಡೆಯುವ ಕಾರ್ಯಕ್ರಮ ; ಸಿ.ಎಸ್.ಪುಟ್ಟರಾಜು
ಇದು ದುಡ್ಡು ಹೊಡೆಯುವ ಕಾರ್ಯಕ್ರಮ ಜಿಲ್ಲೆಯ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾವೇರಿ ಆರತಿ ಬಗ್ಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮೂರನೇ ಬೀದಿ ಆಯ್ತು ನಾಲ್ಕನೇ ಬೀದಿ ಮೆರವಣಿಗೆ ಆಗಿದೆ. ಮಾನ ಮರ್ಯಾದೆ ಕಳೆದುಕೊಂಡು ಸರ್ಕಾರ ನಡೆಸ್ತಿದ್ದಾರೆ. ಪುಣ್ಯಾತ್ಮ ಮಹಾರಾಜರು ಅವರ ಪತ್ನಿ ಒಡವೆ ಇಟ್ಟು ಡ್ಯಾಂ ಕಟ್ಟಿದ್ದಾರೆ. ಡ್ಯಾಂ ಸಂರಕ್ಷಣೆ ಬಿಟ್ಡು ಇವರು ಏನು ಮಾಡ್ತಿದ್ದಾರೆ? ಡ್ಯಾಂ ಮುಂಬಾಗ ಕಾವೇರಿ ಆರತಿ ಮಾಡಬೇಕಾ? ತಾಯಿ ಕಾವೇರಿ ಹರಿಯವ ಜಾಗದಲ್ಲಿ ಮಾಡಿದ್ರೆ ಆಗಲ್ವಾ? ಎಂದು ಪ್ರಶ್ನಿಸಿದರು.
ಜಿಲ್ಲಾ ಮಂತ್ರಿ, ಶಾಸಕ, ಸಚಿವನಾಗಿ ಇಂತಹ ಸಾವಿರಾರು ಕಾರ್ಯಕ್ರಮ ಮಾಡಿದ್ದೇವೆ. ನಮ್ಮನೆ ದುಡ್ಡು ಹಾಕಿ ಕಾರ್ಯಕ್ರಮ ಮಾಡಿದ್ದೇವೆ. ಇವರು ದುಡ್ಡು ಹೊಡೆಯುವ ಕಾರ್ಯಕ್ರಮ ಮಾಡಿಕೊಳ್ಳುತ್ತಿದ್ದಾರೆ
ಇದಕ್ಕೆ ಉತ್ತರ ಹೇಳುವ ಟೈಮ್ ಬರುತ್ತೆ ಜಿಲ್ಲೆಯ ಜನ ತಕ್ಕ ಪಾಠ ಕಲಿಸುತ್ತಾರೆ. ಸದ್ಯದಲ್ಲೇ ಜನರೇ ಇವರ ತಿಥಿ ಹಾಲು-ತುಪ್ಪ ಮಾಡಿ ಕಳಿಸ್ತಾರೆ ಎಂದರು.




