Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಎಥೆನಾಲ್ ಘಟಕಕ್ಕೆ ವಿರೋಧವಿದೆ ಎಂದೇ ಸರ್ಕಾರಕ್ಕೆ ವರದಿ: ಡಾ.ಕುಮಾರ

ಕಾರ್ಖಾನೆಯ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು ರೈತಪರ ಹೋರಾಟಗಾರರು ಪರಿಸರ ಸ್ನೇಹಿಗಳು ಅಪಾಯಕಾರಿ ಘಟಕಗಳಾದ ಡಿಸ್ಟಿಲರಿ ಮತ್ತು ಎಥನಾಲ್ ಬೇಡವೇ ಬೇಡ ಎಂದ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಸಭೆಯಲ್ಲಿ ನಡೆದ ಅಭಿಪ್ರಾಯವನ್ನೇ ಸರ್ಕಾರಕ್ಕೆ ಪ್ರಾಮಾಣಿಕವಾಗಿ ವರದಿ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದ ಸಮೀಪವಿರುವ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಸ್ಟಿಲರಿ ಮತ್ತು ಎಥೆನಾಲ್ ಘಟಕ ನಿರ್ಮಾಣದ ಉದ್ದೇಶಕ್ಕಾಗಿ ಕರೆದಿದ್ದ ಸಾರ್ವಜನಿಕ ಸಭೆಯಗೆ ಜಿಲ್ಲಾಧಿಕಾರಿ ಕುಮಾರ್ ರವರು ಆಗಮಿಸುತ್ತಿದ್ದಂತೆ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಾದ ಮಾಕವಳ್ಳಿ, ಕರೋಟಿ, ಕಾರಿಗನಹಳ್ಳಿ, ಮಾಣಿಕನಹಳ್ಳಿ, ವಡ್ಡರಹಳ್ಳಿ, ಹೆಗ್ಗಡಹಳ್ಳಿ, ಲಿಂಗಾಪುರ, ಚೌಡೇನಹಳ್ಳಿ, ರಾಮನಹಳ್ಳಿ, ಬಿಚೇನಹಳ್ಳಿ, ಮಲ್ಲೇನಹಳ್ಳಿ, ಕುಂದನಹಳ್ಳಿ ಗ್ರಾಮೀಣ ಭಾಗದ ರೈತರು ಕಾರ್ಖಾನೆಯ ಮುಖ್ಯದ್ವಾರದಲ್ಲೇ ಕಂಬನಿ ಮಿಡಿಯುತ್ತಾ ವಿರೋಧಪಡಿಸಿ ಸ್ಥಳದಲ್ಲೇ ಕಾರ್ಖಾನೆಯ ವಿರುದ್ಧ ಘೋಷಣೆ ಕೂಗುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ ನೀಡಿ ನಿಮ್ಮ ಅಭಿಪ್ರಾಯ ಸಂಗ್ರಹಿಸಲೇ ಬಂದಿದ್ದೇವೆ ಎಂದರು.

ನೀವು ಏನು ಅಭಿಪ್ರಾಯ ವ್ಯಕ್ತಪಡಿಸುತ್ತೀರೋ ಆ ವರದಿಯನ್ನೇ ಯಾರ ಮುಲಾಜಿಗೂ ಬಗ್ಗದೆ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಸಲ್ಲಿಸುತ್ತೇನೆ ಎಂಬ ಭರವಸೆಯ ನೀಡಿದ ನಂತರ, ಸಾವಿರಾರು ಜನಸ್ತೋಮ ವೇದಿಕೆಯ ಮುಂಭಾಗಕ್ಕೆ ಆಗಮಿಸಿದರು. ಬಳಿಕ ನೂರಾರು ಮಹಿಳೆಯರು, ರೈತರು, ಪರಿಸರ ಪ್ರೇಮಿಗಳು ಒಂದೇ ಧ್ವನಿಯಲ್ಲಿ ಡಿಸ್ಟಿಲರಿ ಮತ್ತು ಎಥನಾಲ್ ಘಟಕದಂತಹ ಅಂತಹ ಅಪಾಯಕಾರಿ ಘಟಕ ಬೇಡವೇ ಬೇಡ ತಮ್ಮ ಅಭಿಪ್ರಾಯ ಹೊರಹಾಕಿ ಸಾಮೂಹಿಕವಾಗಿ ವಿರೋಧ ವ್ಯಕ್ತಪಡಿಸಿದರು.

ಈ ಕಾರ್ಖಾನೆ ರೈತರಿಗೆ ವಿಷಕಾರಿ ಹಾರುವ ಬೂದಿ ಮತ್ತು ಕಾರ್ಖಾನೆಯ ಕೊಳಚೆ ನೀರನ್ನು ಹೊರ ಬಿಟ್ಟು ಹಳ್ಳಕೊಳ್ಳದ ಮೂಲಕ ಹಾದು ಹೋಗಿ ರೈತರ ಜೀವನಾಡಿ ಹೇಮಾವತಿ ನದಿಯನ್ನು ಕಲುಷಿತಗೊಳಿಸಿ. ನದಿಯ ನೀರನ್ನು ಹಾಳು ಮಾಡುತ್ತಾ ಸಾರ್ವಜನಿಕರ ಬದುಕಿಗೆ ಮಾರಕವಾಗಿದೆ.ಪ್ರಸ್ತುತವಿರುವ ಸಕ್ಕರೆ ಕಾರ್ಖಾನೆಯನ್ನೇ ನಿಭಾಯಿಸಲು ಹಾಗದೇ ಕಾನೂನು ನಿಯಮಾವಳಿಯನ್ನ ಗಾಳಿಗೆ ತೂರಿ ದಿನನಿತ್ಯ ಈ ಭಾಗದ ರೈತರಿಗೆ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಸಾವಿರಾರು ಸಾರ್ವಜನಿಕರಲ್ಲಿ ಮಂದಹಾಸ

ಸಭೆಯಲ್ಲಿ ಅಭಿಪ್ರಾಯವನ್ನೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕುಮಾರ್ ಅವರ ಹೇಳಿಕೆ. ಬಳಿಕ ನೆರೆದಿದ್ದ ರೈತರು ತಾಲೂಕಿನ ರೈತ ಸಂಘ, ಪರಿಸರ ಪ್ರೇಮಿಗಳು, ಪ್ರಜ್ಞಾವಂತರ ಹೋರಾಟದ ಫಲವಾಗಿ ಕಾರ್ಖಾನೆಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ಮರುಜಲ್ಮವೇ ಪಡೆದಂತಾಗಿದೆ ಎಂಬ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜು, ತಹಲ್ದಾರ್ ನಿಸರ್ಗ ಪ್ರಿಯ , ತಾಲೂಕು ಕಾರ್ಯಾ ನಿರ್ವಹಣಾಧಿಕಾರಿ ಸತೀಶ್ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಅಶ್ವಿನಿ, ಪರಿಸರ ಮಾಲಿನ್ಯ ಅಭಿಯಂತರರಾದ ಗೀತಾ, ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ, ಸಾಮಾಜಿಕ ಹೋರಾಟಗಾರ ಮಾಕವಳ್ಳಿ ಯೋಗೇಶ್, ಕೋರಮಂಡಲ ಸಿಕ್ಕರೆ ಕಾರ್ಖಾನೆ ವ್ಯವಸ್ಥಾಪಕ ರವಿ ರೆಡ್ಡಿ, ರೈತ ಹಿರಿಯ ಮುಖಂಡ ಸಿಂದುಘಟ್ಟ ಮುದ್ದುಕುಮಾರ್, ರವಿ, ಶೆಟ್ಟಹಳ್ಳಿ ಕೃಷ್ಣೇಗೌಡ, ಕರೋಟಿ ಸುಬ್ರಹ್ಮಣ್ಯ, ಮಾಕವಳ್ಳಿ ದೇವರಸೇಗೌಡ, ದೊಡ್ಡೇಗೌಡ, ರಾಮೇಗೌಡ, ರಾಮನಹಳ್ಳಿ ಡೈರಿ ಕುಮಾರ ಆರ್ ಎಸ್ ಮಂಜೇಗೌಡ, ಕುಂದನಹಳ್ಳಿ ಶಿವಕುಮಾರ್, ವೆಂಕಟೇಶ್ ಮತ್ತಿತರರ ಭಾಗವಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ