ಮಂಡ್ಯ ನಗರದ ಬನ್ನೂರು ರಸ್ತೆಯ ಧನ್ವಂತರಿ ಮೆಡಿಕಲ್ ಹತ್ತಿರ (ಕಾಳೇಗೌಡ ಸ್ಕೂಲ್ ಎದುರು) ಫೆ.24 ರಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೀಲು ಮತ್ತು ಮೂಳೆ ರೋಗ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ಎಲ್.ಕೆ. ಸುನೀಲ್ ತಪಾಸಣೆ ಮಾಡಲಿದ್ದಾರೆ.
ಡಾ.ಸುನೀಲ್ ಅವರು ಜಾಯಿಂಟ್ ರಿಪ್ಲೇಸ್ ಮೆಂಟ್ ಸರ್ಜರಿ, ಕ್ರೀಡಾ ಸಂಬಂಧಿತ ಗಾಯಗಳು, ಮೂಳೆ ಆಘಾತ, ಅರ್ಥೋಸ್ಕೋಪಿ ಸರ್ಜರಿ, ಮೊಣಕಾಲು, ಭುಜ, ಲೆಗ್‌ಮೆಂಟ್ ಸರ್ಜರಿ ಭುಜದ ನೋವು, ರೋಟೇಟರ್ ಕಫ್ ಇಂಜುರೀಸ್, ಮೂಳೆ ಮರುಜೋಡಣೆ, ಕೀಲು ಬದಲಾವಣೆ ಚಿಕಿತ್ಸೆ, ಬೆನ್ನು ಮೂಳೆ ಚಿಕಿತ್ಸೆ ಬಗ್ಗೆ ತಪಾಸಣೆ ನಡೆಸುವರು.
ಹೆಚ್ಚಿನ ಮಾಹಿತಿಗೆ ಲಯನ್.ಕೆ.ಟಿ.ಹನುಮಂತು 9380759918, 9448101081 ಸಂಪರ್ಕಿಸಬಹುದು.




