Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜು.29ಕ್ಕೆ ಸುಭಾಷ್ ಪಾಳೇಕಾರ್ ಕೃಷಿ ಕಾರ್ಯಾಗಾರ

ನಿರ್ಮಲ ಭೂಮಾತಾ ಟ್ರಸ್ಟ್ ವತಿಯಿಂದ ಡಾ.ಸುಭಾಷ್ ಪಾಳೇಕಾರ್ ಅವರ ೭೬ನೇ ಜನ್ಮ ದಿನದ ಅಂಗವಾಗಿ ಗುರುವಂದನಾ (ಸುಭಾಷ್ ಪಾಳೇಕಾರ್ ಕೃಷಿ ಕಾರ್ಯಾಗಾರ) ಎಸ್‌ಪಿಕೆಗೆ ರೈತರ ಸೇರ್ಪಡೆ ಹಾಗೂ ಒಂದು ದಿನದ ಮಂಡ್ಯ ಜಿಲ್ಲಾ ಮಟ್ಟದ ಕೃಷಿ ಕಾರ್ಯಾಗಾರವನ್ನು ಜುಲೈ ೨೯ರ ಬೆಳಿಗ್ಗೆ ೦೯ ರಿಂದ ಸಂಜೆ ೦೪ವರೆಗೆ ಮಂಡ್ಯ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಅನಂತರಾವ್ ತಿಳಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಭಾಷ್ ಪಾಳೇಕಾರ್ ಕೃಷಿಯನ್ನು ಹೊಸದಾಗಿ ಸ್ವಯಂ ಪ್ರೇರಿತವಾಗಿ ಪ್ರಾರಂಭಿಸಲು ಇಚ್ಛಿಸುವ ರೈತರ ಸೇರ್ಪಡೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಜಿ.ಪಂ ಸಿಇಓ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಜಂಟಿ ನಿರ್ದೇಶಕರು, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನುರಿತ ನೈಸರ್ಗಿಕ ಕೃಷಿಕರಿಂದ ತರಬೇತಿ ಕಾಯಾಗಾರ ಇರಲಿದ್ದು, ಜಿಲ್ಲೆಯ ಪ್ರತಿ ತಾಲೂಕಿನಿಂದ ೫೦ ಮಂದಿ ರೈತರು ಭಾಗವಹಿಸುವಂತೆ ಮನವಿ ಮಾಡಿದ್ದು, ಅದರಂತೆ ಜಿಲ್ಲೆಯಿಂದ ೩೦೦ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕಾರ್ಯಾಗಾರದಲ್ಲಿ ರಾಸಾಯನಿಕ ಬಳಸದೆ, ವಿಷಮುಕ್ತವಾಗಿ ಬೀಜಾಮೃತ, ಜೀವಾಮೃತ, ಹೊದಿಕೆ, ಆದ್ರತೆ ಬಳಸಿ ಭತ್ತ, ರಾಗಿ, ತರಕಾರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಇಸ್ತಾರ ತರಬೇತಿ ಇರಲಿದ್ದು, ಭಾಗವಹಿಸಲು ನೊಂದಾಯಿಸುವವರು ಮೊಬೈಲ್ ನಂ: 9739597590, 9663438700, 9972848201, 9986883799 ಸಂಪರ್ಕಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ಕಾರ್ಯದರ್ಶಿ ದಯಾನಂದ, ಸದಸ್ಯರಾದ ಚಂದ್ರಶೇಖರ್, ವೆಂಕಟೇಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ