Friday, June 21, 2024

ಪ್ರಾಯೋಗಿಕ ಆವೃತ್ತಿ

ಹಾಸನದಲ್ಲಿ ಪೆನ್ ಡ್ರೈವ್ ಸ್ಪೋಟ| ಯುವ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋಗಳು ವೈರಲ್ !

ಇಡೀ ರಾಜ್ಯವೇ ಕಂಡುಕೇಳರಿಯದ ಹಾಸನದ ಯುವ ರಾಜಕಾರಣಿಯೊಬ್ಬರ ಕಾಮಕೇಳಿಯ ವಿಡಿಯೋಗಳಿರುವ ಪೆನ್‌ ಡ್ರೈವ್‌ ಬಿಡುಗಡೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ.

ಯುವ ರಾಜಕೀಯ ನಾಯಕನೊಬ್ಬನು ಅನೇಕ ಮಹಿಳೆಯರೊಂದಿಗೆ ಪಾಲ್ಗೊಂಡಿರುವ ಕಾಮಕೇಳಿಯ ದೃಶ್ಯಗಳ ಪೆನ್‌ ಡ್ರೈವ್‌ ಗಳು ನಿನ್ನೆ ಸಂಜೆಯಿಂದ ಹೊರಬಿದ್ದಿದೆ, ಹಾಸನದಲ್ಲಿ ತಲ್ಲಣ ಹುಟ್ಟಿಸಿರುವ ಕುರಿತು ಕನ್ನಡ ಪ್ಲಾನೆಟ್‌ ಮೊದಲ ವರದಿ ಪ್ರಕಟಿಸಿತ್ತು. ಇದೀಗ ಅನೇಕ ಕುತೂಹಲಕಾರಿ ವಿದ್ಯಮಾನಗಳು ಘಟಿಸಿದ್ದು ಹಾಸನದ ಸಂಜೆ ದಿನಪತ್ರಿಕೆ ʻಸತ್ಯದ ಹೊನಲುʼ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಪ್ರಕಟಿಸಿದೆ.

ʻಅಸಹ್ಯಕರ ವಿಡಿಯೋ: ಪೆನ್‌ ಡ್ರೈವ್‌ ಭೂತʼ ಎಂಬ ಶೀರ್ಷಿಕೆಯಲ್ಲಿ ವರದಿಯೊಂದನ್ನು ಅಗ್ರಸುದ್ದಿಯನ್ನಾಗಿ ʻಸತ್ಯದ ಹೊನಲುʼ ಪತ್ರಿಕೆ ಪ್ರಕಟಿಸಿದ್ದು, ವಿಡಿಯೋಗಳು ಪ್ರಸಾರವಾದಲ್ಲಿ ಹಾಸನ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದು ತಲೆತಗ್ಗಿಸುವಂಥ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಬರೆಯಲಾಗಿದೆ. ಸುದೀರ್ಘ ರಾಜಕೀಯ ಜೀವನ ನಡೆಸಿದ ಕುಟುಂಬವೊಂದಕ್ಕೆ ಅದೇ ಕುಟುಂಬದ ಕುಡಿ ಮಸಿ ಬಳಿದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ ಎಂದು ವರದಿ ಹೇಳುತ್ತದೆ.

ಯುವ ನಾಯಕನ ರಾಜಕೀಯ ವಿರೋಧಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪೆನ್‌ ಡ್ರೈವ್‌ ಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಎಸೆಯುವ ಸಂಭವವಿದೆ ಎಂಬ ಮಾತುಗಳನ್ನೂ ಕೂಡ ಸತ್ಯದ ಹೊನಲು ವರದಿ ಮಾಡಿದೆ.

ಕಾಮಪಿಶಾಚಿಯ ಕ್ರೌರ್ಯ

ವಿಡಿಯೋದಲ್ಲಿ ಭಾಗಿಯಾಗಿರುವ ಯುವನಾಯಕ ಬೇರೆ ಬೇರೆ ಕಾರಣಗಳಿಗೆ ತನ್ನ ಬಳಿ ಬಂದ ಹೆಣ್ಣಮಕ್ಕಳನ್ನು ಮನವೊಲಿಸಿ, ಪುಸಲಾಯಿಸಿ, ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿರುವುದಲ್ಲದೆ, ಎಲ್ಲರ ಜೊತೆಗಿನ ಕಾಮದಾಟವನ್ನು ತಾನೇ ರೆಕಾರ್ಡ್‌ ಮಾಡಿ ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಇದು ಇಡೀ ಕರ್ನಾಟಕ ರಾಜ್ಯವೇ ಕಂಡುಕೇಳರಿಯದ ಲೈಂಗಿಕ ಹಗರಣ ಎಂಬ ಮಾತುಗಳು ಹಾಸನದಲ್ಲಿ ಕೇಳಿಬರುತ್ತಿವೆ.

ಯುವನಾಯಕನ ರಾಜಕೀಯ ಭವಿಷ್ಯ ಹಾಳಾಗಿ ಹೋಗಲಿ, ಇವನಿಂದಾಗಿ ಅನೇಕ ಹೆಣ್ಣುಮಕ್ಕಳು ತಮ್ಮ ಮಾನ, ಮರ್ಯಾದೆಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದ್ದು, ಅವರ ಗತಿ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಹಲವರು ಹೀಗಾಗಲೇ ಈ ಪೆನ್ ಡ್ರೈವ್ ಅನ್ನು ವೀಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಅಸಹ್ಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರಿಗೂ ಇದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೂಪಕ್ಕೆ ತಿರುಗುವುದೋ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!