Friday, November 20, 2026

ಪ್ರಾಯೋಗಿಕ ಆವೃತ್ತಿ

ಜನ-ಜಾನುವಾರದೊಂದಿಗೆ ರಸ್ತೆಗಿಳಿದ ರೈತರು: ಬಂಧಿಸಿದ ಪೋಲೀಸರು

ಪ್ರತಿ ಟನ್ ಕಬ್ಬಿಗೆ 4,500 ರೂ. ಧನ ನಿಗದಿ,ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆ ನಿಷೇಧ ಸೇರಿದಂತೆ 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯ ರೈತಸಂಘ ನೂರಾರು ಕಾರ್ಯಕರ್ತರು ಜಾನುವಾರುಗಳೊಂದಿಗೆ ದಸರಾ ದಿನವಾದ ಇಂದು ಮಂಡ್ಯದ ವಿ‌.ಸಿ.ಫಾರಂ ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ 9 ಗಂಟೆಗೆ ಕುರಿ,ಕೋಳಿ, ನಾಯಿ,ಹಸು,ಎತ್ತುಗಳೊಂದಿಗೆ ರಸ್ತೆಗಿಳಿದ ನೂರಾರು ರೈತಸಂಘದ ಕಾರ್ಯಕರ್ತರು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಫಲರಾಗಿದ್ದಾರೆ.ರೈತರು ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

ವಿದ್ಯುತ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು, ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಬಾರದು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು 18 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಬೆಂ-ಮೈ ಹೆದ್ದಾರಿ ಸಂಪೂರ್ಣ ಬಂದ್

ಮಂಡ್ಯದ ವಿಸಿ ಫಾರಂ ಗೇಟ್ ಬಳಿ ರೈತರು ಟ್ರ್ಯಾಕ್ಟರ್,ಎತ್ತಿನಗಾಡಿ,ಹಸು,ಕುರಿ,ಕೋಳಿ,ನಾಯಿಗಳೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರಿಂದ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಾವಿರಾರು ವಾಹನಗಳು ಗಂಟೆಗಟ್ಟಲೆ ಕಾಯುವಂತಾಯಿತು.ಅದರಲ್ಲೂ ಇಂದು ಮೈಸೂರು ದಸರಾ ಆಚರಣೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ವಾಹನಗಳಲ್ಲಿ ಜನರು ಬಂದಿದ್ದರಿಂದ ಕಿ.ಮೀ.ದೂರ ವಾಹನಗಳು ಸಾಲು ನಿಂತಿತ್ತು.
ಪ್ರತಿಭಟನಾ ಸ್ಥಳದಲ್ಲಿ ಬಾರಿ ಪೊಲೀಸ್ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ರೈತರ ಬಂಧನ

ಹೆದ್ದಾರಿ ತಡೆದು ರೈತರು ಪ್ರತಿಭಟನೆ ಮಂದುವರಿಸಿದ ಹಿನ್ನೆಲೆಯಲ್ಲಿ ನೂರಾರು ರೈತರನ್ನ ಪೋಲಿಸರು ವಶಕ್ಕೆ ಪಡೆಯಲು ಮುಂದಾದರು.ಈ ಸಂದರ್ಭದಲ್ಲಿ ರೈತನಾಯಕರು ಹಾಗೂ ಪೋಲೀಸರ‌ ನಡುವೆ ಮಾತಿನ ಚಕಮಕಿ ನಡೆಯಿತು.ರೈತರು ಸಹಕರಿಸುವಂತೆ ಪೋಲಿಸರಿಗೆ ಮನವರಿಕೆ‌ ಮಾಡಿದರೂ ಕೇಳದ ಪೋಲೀಸರು ರೈತರ
ಕೈ,ಕಾಲು ಹಿಡಿದು ವ್ಯಾನ್ ಗೆ ತುಂಬಿದರು.ಆಗ ರೈತರು ಸರ್ಕಾರ ಹಾಗೂ ಪೊಲೀಸರ ವಿರುದ್ದ ರೈತರ ಆಕ್ರೋಶ ವ್ಯಕ್ತಪಡಿಸಿದರು. ವಶಕ್ಕೆ ಪಡೆದ ರೈತರನ್ನು ಮಂಡ್ಯ ನಗರದ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಇರುವ ಡಿಎಆರ್ ಮೈದಾನದಲ್ಲಿ ಕೆಲಗಂಟೆಗಳ ಕಾಲ ಇರಿಸಿಕೊಂಡು ನಂತರ ಬಿಡುಗಡೆ ಗೊಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ