Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಳೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಪದವಿ ಪ್ರದಾನ

ಮಂಡ್ಯ ಪಿಇಎಸ್ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭವು ನ.4ರಂದು ಕಾಲೇಜಿನ ಡಾ. ಹೆಚ್‌.ಡಿ. ಚೌಡಯ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 722 ಪದವಿ ವಿದ್ಯಾರ್ಥಿಗಳು ಹಾಗೂ 133 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. 8 ಪದವಿ ಮತ್ತು 5 ಸ್ನಾತಕೋತ್ತರ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಟೆಸ್ಟ್ ಯಂತ್ರ, ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಫೈರ್ ಫಿಂಕ್ ಮತ್ತು ಕ್ಯೂಸೈಡರ್ಸ್ ಮತ್ತು ಡೆಸ್ಟ್ರೇಡರ್ಸ್ ಸಹ ಸಂಸ್ಥಾಪಕ ಗಿರೀಶ್ ಶಿವಣ್ಣ ಭಾಗವಹಿಸುವರು.  ಜನತಾ ಶಿಕ್ಷಣ ಟ್ರಸ್ಟ್‌  ಅಧ್ಯಕ್ಷ ಕೆ. ಎಸ್.ವಿಜಯ್ ಆನಂದ್‌ ಅಧ್ಯಕ್ಷತೆ ವಹಿಸಿಮ ಪದಕ ಪ್ರದಾನ ಮಾಡುವರು, ಪಿಇಟಿ ಕಾರ್ಯದರ್ಶಿ ಎಸ್. ಎಲ್.ಶಿವಪ್ರಸಾದ್ ಪದವಿ ಪ್ರಮಾಣ ಪತ್ರ ಪ್ರದಾನ ಮಾಡುವರು ಎಂದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಎಂ.ನಂಜುಂಡಸ್ವಾಮಿ, ಶೈಕ್ಷಣಿಕ ಡೀನ್ ಡಾ. ಬಿ ದಿನೇಶ್ ಪ್ರಭು ರ್‍ಯಾಂಕ್ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಮುಖ್ಯ ಅತಿಥಿಗಳಿಗೆ ನೀಡುವರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ. ಮಹೇಂದ್ರ ಬಾಬು ಪದವಿ ಪಡೆಯುವವರ ಹೆಸರುಗಳನ್ನು ಓದುವರು. ಶೈಕ್ಷಣಿಕ ಉಪ ಡೀನ್ ಡಾ.ಉಮೇಶ್ ಡಿ ಆರ್ ಮತ್ತು ಉಪ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರ್ ಸಮಾರಂಭದ ಯಶಸ್ವಿಗೆ ನೆರವಾಗುವರು ಎಂದರು.

ವಿಶೇಷ ಪದಕ ಪಡೆದವರ ಪಟ್ಟಿ

ಗಿರೀಶ್ ಟಿ ಎಮ್ (ಟಾಪರ್ ಇನ್ ಆಟೋಮೊಬೈಲ್ ಇಂಜಿನಿಯರಿಂಗ್)

ರೋಜ ಸಿ ಎಸ್ (ಟಾಪರ್ ಇನ್ ಸಿವಿಲ್ ಇಂಜಿನಿಯರಿಂಗ್)

ನಿತಿನ್‌ ಜೈನ್ ಡಿ (ಟಾಪರ್ ಇನ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್)

ಗೌತಮಿ ಗೌಡ ಹೆಚ್‌ ಪಿ (ಟಾಪರ್ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್)

ಮೊನಿಷ್ಠ ಎಸ್  (ಟಾಪರ್ ಇನ್ ಎಲೆಕ್ನಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್)

ಸ್ವಾತಿ ಪಿ (ಟಾಪರ್ ಇನ್ ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ ಇಂಜಿನಿಯರಿಂಗ್)

ಡಿ ಶ್ರಿಯಾನ್ಸ್ ದ್ರುವ (ಟಾಪರ್ ಇನ್ ಇನ್‌ಫರ್ ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್)

ದೀರಜ್‌ ಎನ್‌ ಯು ( ಟಾಪರ್ ಇನ್ ಮೆಕಾನಿಕಲ್ ಇಂಜಿನಿಯರಿಂಗ್)

ಸುಜನ್ ಎಮ್ ( ಟಾಪರ್ ಇನ್ ಎಂ. ಟೆಕ್ (ಸಿವಿಲ್ ಕ್ಯಾಡ್ ಸ್ಪೆಕ್ಟರ್ )

ನಂದೀಶ್‌ ಜೆ   ಟಾಪರ್ ಇನ್ ಎಂ. ಟೆಕ್ (ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್)

ಯಶಸ್ವಿನಿ ಆರ್ (ಟಾಪರ್ ಇನ್ ಎಂ. ಟೆಕ್ (ವಿಎಲ್‌ಎಸ್‌ಐ ಎಂಬಡೆಡ್ ಸಿಸ್ಟಮ್)

ತೇಜಶ್ರೀ ಕೆ ಬಿ  (ಟಾಪರ್ ಇನ್ ಎಂಬಿಎ)

ರಶ್ಮಿತ ಆರ್  (ಟಾಪರ್ ಇನ್ ಎಂಸಿಎ)

ಗೌತಮಿ ಗೌಡ ಹೆಚ್ ಪಿ ( ಟಾಪರ್ ಇನ್ ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್)

ಗೌತಮಿ ಗೌಡ ಹೆಚ್ ಪಿ (ಗಣಿತದಲ್ಲಿ ಪ್ರಥಮ ಸ್ಥಾನ)

ಗಿರೀಶ್‌ ಟಿ ಎಮ್ (ಟಾಪರ್ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಸೈನ್ಸ್) ಅವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಉಪ ಪ್ರಾಂಶುಪಾಲ ಡಾ. ವಿನಯ್ ಎಸ್, ಶೈಕ್ಷಣಿಕ ಡೀನ್ ಡಾ.ಬಿ.ದಿನೇಶ್ ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೆ ಜೆ ಮಹೇಂದ್ರ ಬಾಬು, ಉಪ ಡೀನ್ ಡಾ.ಡಿ ಆರ್ ಉಮೇಶ್ ಹಾಗೂ ಉಪ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!