Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ನೆಲದಲ್ಲಿ ”ಗಿಡ ನೆಟ್ಟು ಮರ ಮಾಡು” ಚಾಲೆಂಜ್ ಸ್ವೀಕರಿಸಿದ ಸ್ವಿಜರ್ಲ್ಯಾಂಡ್ ಪ್ರಜೆಗಳು !

ಮಂಡ್ಯ ತಾಲೂಕು ಹನಿಯಂಬಾಡಿ ಗ್ರಾಮದಲ್ಲಿ ಇಂದು ಡಾನ್ ಬೋಸ್ಕೋ ಸಂಸ್ಥೆ ವತಿಯಿಂದ ಸಸಿ ವಿತರಣೆ ಮತ್ತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಅದೇ ರೀತಿ ”ಗಿಡ ನೆಟ್ಟು ಮರ ಮಾಡು” ಚಾಲೆಂಜ್ ಅನ್ನು ಇಡಲಾಗಿತ್ತು.

ಸ್ವಿಜರ್ಲೆಂಡ್ ದೇಶದಿಂದ ಭಾರತ ದೇಶಕ್ಕೆ ಪರಿಸರ ಅಧ್ಯಯನ ಮಾಡಲು ಬಂದಿರುವ ಮರ್ಲಿನ್ ಇರ್ಲಿನ್ ಹಾಗೂ ಹೆಲನ್ ಅವರು ‘ಗಿಡ ನೆಡು ಮರ ಮಾಡು ಚಾಲೆಂಜ್’ ಅನ್ನು ಸ್ವೀಕರಿಸಿದ್ದರು. ನಂತರ ಹನಿಯಂಬಾಡಿ ಗ್ರಾಮದಲ್ಲಿ ಸಸಿ ನೆಟ್ಟು ಅದರ ಮುಂದಿನ ಪೋಷಣೆ ಜವಾಬ್ದಾರಿಯನ್ನು ಡಾನ್ ಬೋಸ್ಕೋ ಸಂಸ್ಥೆಯ ಕಾರ್ಯಕರ್ತರಿಗೆ ವಹಿಸಿದರು.

ಇದೇ ಸಂದರ್ಭದಲ್ಲಿ ರೈತರಿಗೆ ಸಸಿಯನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮತ್ತು ನೆಲದಲ್ಲಿ ಬಳಗದ ಅಧ್ಯಕ್ಷರಾದ ಎಂ ಸಿ ಲಂಕೇಶ್ ಅವರು “ಜಾಗತಿಕ ತಾಪ ಕಡಿಮೆ ಮಾಡಲು ಗಿಡ ನೆಟ್ಟು ಮರ ಮಾಡುವುದು ತುಂಬಾ ಅವಶ್ಯಕ”ಎಂದು ತಿಳಿಸಿದರು.

ಡಾನ್ ಬಾಸ್ಕೋ ಸಂಸ್ಥೆಯವರು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಪರಿಸರ ಉಳಿಸಲು, ಅತಿ ಹೆಚ್ಚು ಆಕ್ಸಿಜನ್ ನೀಡುವ ಮಹಾಗನಿ ಸಸಿಯನ್ನು ವಿತರಿಸುತ್ತಿದ್ದಾರೆ, ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರೈತರಿಗೆ ಸಸಿಗಳನ್ನು ಕೊಟ್ಟು ಪೋಷಿಸುವ ಜವಾಬ್ದಾರಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ ಕಳೆದ ಆರು ವರ್ಷಗಳಿಂದ ಸಂಸ್ಥೆಯು ಇಲ್ಲಿಯವರೆಗೆ 27 ಸಾವಿರ ಸಸಿಗಳನ್ನು ವಿತರಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೊಳಲು, ಮಂಗಲ, ತಿಮ್ಮನ ಹೊಸೂರು, ಮಾರಸಿಂಗನಹಳ್ಳಿ, ಲೋಕಸರ ಹಾಗೂ ಹೊಸ ಬೂದನೂರು, ಸಂತೆ ಕಸಲಗೆರೆ, ಕಾರಸವಾಡಿ ಹೀಗೆ ಹಲವಾರು ಗ್ರಾಮಗಳಲ್ಲಿ ಸಸಿ ನೆಡುವ ಮತ್ತು ವಿತರಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ. ಮುಂದೆ ಇದೇ ರೀತಿ ರೈತರಿಗೆ ಉಚಿತವಾಗಿ ಸಸಿ ವಿತರಿಸುತ್ತಾರೆ ಇದರ ಸದುಪಯೋಗವನ್ನು ಮಂಡ್ಯ ಜಿಲ್ಲೆಯ ಜನತೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವಿಜರ್ಲ್ಯಾಂಡ್ ನ ಯಾನ, ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಮಾಜಿ ಸದಸ್ಯ ಸತೀಶ್, ಡಾನ್ ಬಾಸ್ಕೊ ಸಂಸ್ಥೆಯ ಫಾದರ್ ಪೀಟರ್, ನಾಗರಾಜು ರಾಧಿಕಾ ಹಾಗೂ ಹನಿಯಂಬಾಡಿ ಗ್ರಾಮದ ಆಶಾ ಕಾರ್ಯಕರ್ತೆ ಸರಸ್ವತಿ, ಮುಖಂಡರಾದ ನಾಗರಾಜು, ಶಾಲಾ ಮುಖ್ಯ ಶಿಕ್ಷಕರು, ಆರೋಗ್ಯ ಸಹಾಯಕರು, ರೈತರಾದ ತಮ್ಮಣ್ಣ, ಶ್ರೀನಿವಾಸ್ ಹಾಗೂ ಸೋಮಣ್ಣ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!