ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಿರುವುದರಿಂದ ಕುಪಿತಗೊಂಡಿರುವ ರೈತರು ವಿನೂತನವಾಗಿ ಹೋರಾಟ ನಡೆಸುವ ಹಾದಿ ತುಳಿದಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಬೇಸಾಯಕ್ಕೆ ಬಿಸ್ಲೆರಿ ನೀರೇ ಗತಿ, ಕಾವೇರಿ ನೀರು ತಮಿಳುನಾಡಿನ ಪಾಲಾಗುಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಸ್ಲೆರಿ ನೀರು ಬಳಸಿ ನಾಟಿ ಮಾಡಿ ಆಕ್ರೋಶ ಹೊರ ಹಾಕಿದರಿ.
ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮದ ರಾಮಚಂದ್ರ ಅವರ ಜಮೀನಿನಲ್ಲಿ ಶಂಕರ್ ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಬಿಸ್ಲೆರಿ ಬಳಸಿ, ಭತ್ತ ನಾಟಿ ಮಾಡುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ಇಲ್ಲದೆ ಭತ್ತದ ನಾಟಿ ಮಾಡಲು ಆಗುತ್ತಿಲ್ಲ, ಬಿಸ್ಲೆರಿ ನೀರಿನಲ್ಲಿ ನಾಟಿ ಮಾಡುವ ಪರಿಸ್ಥಿತಿ ಬಂದಿದೆ
ಅಷ್ಟೇ ಅಲ್ಲದೆ ಬರಗಾಲದ ಸನ್ನಿವೇಶ ಸೃಷ್ಠಿಯಾಗಿದೆ. ಅಣೆಕಟ್ಟೆ ಯಲ್ಲಿನ ನೀರು ದಿನೇ ದಿನೆ ಖಾಲಿಯಾಗುತ್ತಿದೆ. ಸರ್ಕಾರ ರಾಜ್ಯದ ಹಿತವನ್ನು ಬಲಿಕೊಟ್ಟು ರೈತರಿಗೆ ವಿಷವುಣಿಸಲು ಹೊರಟಿದೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸದಿದ್ದರೆ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು.




