Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಿ- ನರೇಂದ್ರಸ್ವಾಮಿ

ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅದರಲ್ಲಿರುವ ವಿಷಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಮತ್ತು ಸಂವಿಧಾನವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆದ ‘ಮೇರಿ ಮಾಟಿ ಮೇರಾ ದೇಶ್’ ತಾಲ್ಲೂಕು ಮಟ್ಟದ ಕಳಶಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿಆರ್ ಅಂಬೇಡ್ಕರ್‌ರವರು ವಿವಿಧ ದೇಶಗಳ ಸಂವಿಧಾನಗಳನ್ನು ಧೀರ್ಘವಾಗಿ ಅಧ್ಯಯನ ಮಾಡಿ ಭಾರತ ದೇಶಕ್ಕೆ ಬೇಕಾದ ಸಂವಿಧಾನವನ್ನು ಕೊಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ, ದೇಶದಲ್ಲಿ ವಾಕ್ ಸ್ವತಂತ್ರದ ಜೊತೆಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಇದೆ, ದೇಶದಲ್ಲಿ ವಿವಿಧ ಜಾತಿ, ಧರ್ಮದ ಜನರು ವಾಸಿಸುತ್ತಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ, ಪ್ರತಿಯೊಬ್ಬ ಪ್ರಜೆಯೂ ಸಮಾನತೆಯಿಂದ ಬದುಕುತ್ತಿದ್ದಾರೆಂದು ಹೇಳಿದರು.

ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅದರಲ್ಲಿರುವ ವಿಷಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ, ಐಕ್ಯತೆಯನ್ನು ಅರಿಯಲು ಸಂವಿಧಾನವನ್ನು ಓದಬೇಕು, ಸಂವಿಧಾನವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ, ಭಾರತ ದೇಶವನ್ನು ಹೆತ್ತ ತಾಯಿಗಿಂತ ನೂರು ಪಟ್ಟು ಪ್ರೀತಿಸಿ ಗೌರವಿಸಬೇಕು, ದೇಶಪ್ರೇಮ ಪ್ರತಿಯೊಂದು ಮನೆಯಲ್ಲಿಯೂ ಪ್ರಜ್ವಲಿಸಬೇಕೆಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಅಭಿವೃದ್ದಿಗೊಳ್ಳಲು ಮಾಜಿ ಪ್ರಧಾನಿ ರಾಜೀವ್ ಗಾಂಧಿಯೇ ಕಾರಣರಾಗಿದ್ದಾರೆ, ದೇಶದಲ್ಲಿ ನೀರಿನ ಡ್ಯಾಂ, ಅತ್ಯೂನ್ನತ ಕಾರ್ಖಾನೆಗಳು, ನದಿ ಪಾತ್ರ ಬದಲಾಯಿಸಿ ನೀರಾವರಿ ಯೋಜನೆ, ಐಐಟಿ , ವಿಜ್ಞಾನ ತಂತ್ರಜ್ಞಾನವನ್ನು ಅಭಿವೃದ್ದಿಗೊಳಿಸಿರುವುದು ಯಾರು ಎನ್ನುವುದು ಜನರಿಗೆ ತಿಳಿದಿರುವ ವಿಷಯವಾಗಿದೆ, ಭಾಷಣ ಮಾಡುವುದು ನಾಯಕತ್ವವಾಲ್ಲ, ಜನರಿಗೆ ಸತ್ಯವನ್ನು ಹೇಳಬೇಕು, ಮಾತೇ ಸಾಧನೆ ಎನ್ನುವುದು ದೇಶದಲ್ಲಿ ನಡೆಯುತ್ತಿದೆ, ಯಾವುದೇ ವಿಚಾರಗಳನ್ನು ವಿಮರ್ಶೆ ಮಾಡದೇ ಒಪ್ಪಿಕೊಳ್ಳಬಾರದು, ದೇಶದಲ್ಲಿ ವಂಚನೆಯ ಜಾಲ ಹರಡುತ್ತಿದೆ, ಎಲ್ಲಾವನ್ನು ಎಚ್ಚರಿಕೆಯಿಂದ ಎದುರಿಸಬೇಕಿದೆ ಎಂದರು.

”ನಮ್ಮ ಮಣ್ಣು ನಮ್ಮ ಭೂಮಿ” ಕಾರ್ಯಕ್ರಮದಡಿಯಲ್ಲಿ ದೇಶದ ಮಣ್ಣುಗಳನ್ನು ಸಂಗ್ರಹಿಸಿ ಯೋಧರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ನಿರ್ಮಿಸುತ್ತಿರುವ ಉದ್ಯಾನವನ ಯಶಸ್ವಿಯಾಗಿ ಅಭಿವೃದ್ದಿ ಹೊಂದಲಿ ಎಂದು ಆಶೀಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಲೊಕೇಶ್, ಇ.ಓ ಮಮತ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಸಿಡಿಪಿಓ ದೀಪ, ಪ್ರಾಂಶುಪಾಲ ಜಿ.ವೇದಮೂರ್ತಿ, ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಅಂಚೆಇಲಾಖೆಯ ಕೆಂಪರಾಜು, ನಾಗರಾಜು, ಜಗದೀಶ್ ಸಿದ್ದರಾಜು ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!