Wednesday, July 24, 2024

ಪ್ರಾಯೋಗಿಕ ಆವೃತ್ತಿ

ಚಾಂಷುಗರ್ಸ್ ಕಾರ್ಮಿಕ ದಿನಾಚರಣೆ

ಮದ್ದೂರು ತಾಲ್ಲೂಕಿನ ಭಾರತೀನಗರದ ಚಾಮುಂಡೇಶ್ವರಿ ಷುಗರ್ಸ್ ಮಿಲ್ ಎಂಪ್ಲಾಯೀಸ್ ಅಸೋಸಿಯೇಷನ್ ವತಿಯಿಂದ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.

ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಮುಖ್ಯ ದ್ವಾರದಿಂದ ಹಲಗೂರು ರಸ್ತೆಯ ಸಂಘದ ಕಛೇರಿ ವರಗೆ ಕಾರ್ಮಿಕರು ಮೆರವಣಿಗೆಯಲ್ಲಿ ಸಾಗಿದರು.

ಸಂಘದ ಕಛೇರಿ ಅವರಣದಲ್ಲಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅರವಿ ಬಸವನಗೌಡ, ಕಾರ್ಮಿಕರ ದಿನಾಚಾರಣೆ ಆಚರಿಸುವುದು ಕಾರ್ಮಿಕರ ಒಗ್ಗಟ್ಟನ್ನು ಎತ್ತಿ ತೋರಿಸುವ ಸಲುವಾಗಿ ಕಾರ್ಮಿಕರನ್ನು ತಾತ್ಸಾರ ಮಾಡಿದರೆ ಕಾರ್ಖಾನೆ ವಿರುದ್ದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ಮಣಿ ಮಾತನಾಡಿ, ನಾವು ನಮ್ಮ ಕಾರ್ಮಿಕರು ಒಂದೇ ಕುಟುಂಬದ ತರಹ ಇದ್ದೇವೆ. ಕಾರ್ಮಿಕರು ತಮ್ಮ ಏನೇ ಸಮಸ್ಯೆ ಇದ್ದರೂ ನೇರವಾಗಿ ಬಂದು ನನ್ನನ್ನ ಭೇಟಿ ಮಾಡಿ ತಿಳಿಸಬೇಕು.

ನಮ್ಮ ಕಾರ್ಖಾನೆ ಯಾವಾಗಲೂ ಕಾರ್ಮಿಕರ ಪರವಾಗಿ ನಿಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಷುಗರ್ ಮಿಲ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಸಿದ್ದರಾಜು, ಪ್ರದಾನ ಕಾರ್ಯದರ್ಶಿ ಪಿ.ನಾಗರಾಜು,ಜನರಲ್ ಮ್ಯಾನೇಜರ್ ಎಸ್.ಸೆಂಥಿಲ್ ಕುಮಾರ್, ಸೀನಿಯರ್ ಡೆಪ್ಯುಟಿ ಮ್ಯಾನೇಜರ್ ಎಂ.ರವಿ, ಕಾರ್ಮಿಕ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!