Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಿಎಫ್‌ಐ ನಿರ್ಮಿಸಿದ ಮೂವರು ಪ್ರಮುಖರನ್ನು ಗುರಿಯಾಗಿಸಿಕೊಂಡ ಎನ್‌ಐಎ


  • 5 ವರ್ಷಗಳ ಕಾಲ ಪಿಎಫ್‌ಐ ಸೇರಿ 8  ಅಂಗಸಂಸ್ಥೆಗಳ ಮೇಲೆ ನಿಷೇಧ
  • ಪಿಎಫ್‌ಐ ಮೇಲೆ ‘ಭಯೋತ್ಪಾದನೆ’ಯಲ್ಲಿ ತೊಡಗಿರುವ ಆರೋಪ 
  • PFI ನ್ಯಾಯಾಲಯದಲ್ಲಿ ನಿಷೇಧವನ್ನು ಪ್ರಶ್ನಿಸಬಹುದು 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಇಸ್ಲಾಮಿಕ್ ಗುಂಪು ಮತ್ತು ಅದರ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘಟನೆಗಳೆಂದು ಕೆಂದ್ರ ಸರ್ಕಾರ ಬುಧವಾರ ಘೋಷಿಸಿದೆ, ಈ ಸಂಘಟನೆಗಳು  ಭಯೋತ್ಪಾದನೆಯಲ್ಲಿ ಭಾಗಿಯಾಗಿವೆ ಎಂದು ಪರಿಗಣಿಸಿ, ಇವುಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದೆ.

ಎನ್ಐಎ ಅಧಿಕಾರಿಗಳು ಇತ್ತಿಚೇಗೆ 100 ಕ್ಕೂ ಹೆಚ್ಚು ಪಿಎಫ್‌ಐ ಸದಸ್ಯರನ್ನು ಬಂಧಿಸಿತ್ತು. ನಿಷೇಧಿತ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಸರ್ಕಾರದ ಈ ಕ್ರಮವನ್ನು ರಾಜಕೀಯ ಸೇಡು ಮತ್ತು ಪ್ರಚಾರ ಎಂದು ಕರೆದಿದೆ.

ನಾವು ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ವಿರುದ್ಧವಾಗಿದ್ದೇವೆ, ನಾವು ಫ್ಯಾಸಿಸಂನ ವಿರುದ್ಧವಾಗಿದ್ದೇವೆ, ಭಾರತದ ವಿರುದ್ಧವಲ್ಲ ಎಂದು ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಇಮ್ರಾನ್ ಪಿಜೆ ಹೇಳಿದ್ದಾರೆ.

“ನಾವು ಈ ಸವಾಲನ್ನು ಜಯಿಸುತ್ತೇವೆ. ಐದು ವರ್ಷಗಳ ನಂತರ ನಾವು ನಮ್ಮ ಸಿದ್ಧಾಂತವನ್ನು ಪುನರುಜ್ಜೀವನಗೊಳಿಸುತ್ತೇವೆ. ನಿಷೇಧದ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತವೆ ಎಂದಿದ್ಧಾರೆ.

ಪಿಎಫ್‌ಐ ತನ್ನ ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಮತ್ತು ವಿವಿಧ ರಾಜ್ಯಗಳಲ್ಲಿ ಅದರ ಡಜನ್ ಗಟ್ಟಲೆ ಸದಸ್ಯರನ್ನು ಬಂಧಿಸಿದಾಗ ಹಿಂಸಾಚಾರ ಮತ್ತು ದೇಶ ವಿರೋಧಿ ಚಟುವಟಿಕೆಗಳ ಆರೋಪಗಳನ್ನು ನಿರಾಕರಿಸಿತ್ತು.

ನಿಷೇಧವನ್ನು ಘೋಷಿಸುವ ಮೂಲಕ ಗೃಹ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ, PFI ಮತ್ತು ಅದರ ಅಂಗಸಂಸ್ಥೆಗಳು “ಭಯೋತ್ಪಾದನೆ ಮತ್ತು ಅದರ ಹಣಕಾಸು ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ, ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿ ಭೀಕರ ಹತ್ಯೆಗಳನ್ನು ನಡೆಸುವ ಗುರಿ ಹೊಂದಿತ್ತು ಎಂದು ಹೇಳಿದೆ. ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಆರೋಪವನ್ನು ಇಮ್ರಾನ್ ನಿರಾಕರಿಸಿದ್ದಾರೆ.

ಭಾರತದ 1.4 ಶತಕೋಟಿ ಜನರಲ್ಲಿ ಮುಸ್ಲಿಮರು ಶೇ.13 ರಷ್ಟಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿ ಮುಸ್ಲಿಂರನ್ನು ಗುರಿಯನ್ನಾಗಿಸಿ ಕೊಳ್ಳಲಾಗಿದೆ ಎಂದು ದೂರಿದ್ದಾರೆ.

ಎನ್‌ಐಎ ಬಂಧಿಸಿರುವ ಪಿಎಫ್ಐ ನಾಯಕರಾದ ಪಿ ಕೋಯಾ, ಇ ಅಬೂಬಕರ್ ಮತ್ತು ಇಎಂ ಅಬ್ದುಲ್ ರಹಿಮಾನ್ ಅವರನ್ನು ಪಿಎಫ್‌ಐನ ಹಿಂದಿನ ಶಕ್ತಿಗಳು ಎಂದು ಪರಿಗಣಿಸಲಾಗಿದೆ.

22 ಸೆಪ್ಟೆಂಬರ್ 2022 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ಮೊಟ್ಟ ಮೊದಲು ರಾಷ್ಟ್ರವ್ಯಾಪಿ ದಾಳಿ ನಡೆಸಿದ  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಬಂಧಿಸಿದವರಲ್ಲಿ ಒಬ್ಬ ಇಂಗ್ಲಿಷ್ ಪ್ರಾಧ್ಯಾಪಕ, ಅರೇಬಿಕ್ ಭಾಷಾ ಶಿಕ್ಷಕರು ಮತ್ತು ಗ್ರಂಥಪಾಲಕರು ಸೇರಿದ್ದಾರೆ.

70 ರ ವಯಸ್ಸಿನ ಈ ಮೂವರು  1992 ರಲ್ಲಿ ಪಿಎಫ್‌ಐ – ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ – ಅನ್ನು ಸ್ಥಾಪಿಸಿ ಮತ್ತು ನಡೆಸುತ್ತಿದ್ದ ನಾಯಕರಾಗಿದ್ದರು.

ಸೆ.28 ರಂದು ಕೇಂದ್ರವು PFI ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಿಹ್ಯಾಬ್ ಇಂಡಿಯಾ ಫೌಂಡೇಶನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ಸ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹಬ್ ಫೌಂಡೇಶನ್, ಕೇರಳ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದೆ. ಇವು ಐದು ವರ್ಷಗಳ ಅವಧಿಗೆ ತಮ್ಮ ಕಾರ್ಯಚಟುವಟಿಕೆ ನಡೆಸುವಂತಿಲ್ಲ.

ಸೆ.22 ರಂದು ಪಿಎಫ್‌ಐನ ಒಟ್ಟು 45 ನಾಯಕರು ಮತ್ತು ಸದಸ್ಯರನ್ನು ಬಂಧಿಸಲಾಗಿತ್ತು. ಸೆ.27 ರಂದು ಮಂಗಳವಾರ ಪಿಎಫ್‌ಐ ಕಾರ್ಯಕರ್ತರ ಎರಡನೇ ಸುತ್ತಿನ ದೇಶವ್ಯಾಪಿ ದಾಳಿಯಲ್ಲಿ ಹಲವರನ್ನು ಬಂಧನ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!