Friday, September 20, 2024

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಯುವಜನರಿಗೆ ಉದ್ಯೋಗ ದೊರಕಿಸುವುದಕ್ಕೆ ಆದ್ಯತೆ : ದಡದಪುರ ಶಿವಣ್ಣ

ನಿರುದ್ಯೋಗಿ ಯುವಕ ಯುವತಿಯರು ಉದ್ಯೋಗಕ್ಕಾಗಿ ನಗರಗಳಿಗೆ ಹೋಗಿ ಪರದಾಡುವ ಬದಲು ಸ್ಥಳೀಯವಾಗಿ ಹಮ್ಮಿಕೊಂಡಿರುವ ಉದ್ಯೋಗಮೇಳದಲ್ಲಿ ಭಾಗವಹಿಸಿ ಉದ್ಯೋಗನ್ನು ಪಡೆದು ಉತ್ತಮ ಜೀವನಕ್ಕೆ ಮುನ್ನುಡಿ ಬರೆಯಬೇಕೆಂದು ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ತಿಳಿಸಿದರು.

ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನಲ್ಲಿ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಚೆನ್ನಾಗಿ ಓದಿಕೊಂಡಿದ್ದರೂ ಸೂಕ್ತ ಕಂಪನಿಗಳು ಸಿಗದೇ ನಿರುದ್ಯೋಗಿಗಳಾಗಿ ಬದುಕುತ್ತಿರುವುದನ್ನು ಅರಿತು ನೂರಾರು ಕಂಪನಿಗಳೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಿದರೇ ಪ್ರತಿಭೆಗೆ ತಕ್ಕಂತೆ ಉದ್ಯೋಗ ಸಿಗಲಿದೆ ಎನ್ನುವ ಆಕಾಂಕ್ಷೆಯೊಂದಿಗೆ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ, ಸೇವೆಗಾಗಿ ಹೊರತು ಯಾವುದೇ ಪ್ರಚಾರಕ್ಕೆ ಕಾರ್ಯಕ್ರಮ ರೂಪಿಸಿಲ್ಲ ಎಂದರು.

ಲೋಹಿಯಾ ವಿಚಾರ ವೇದಿಕೆಯನ್ನು ಹಿಂದಿನಿಂದಲೂ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ಉಚಿತ ಬಸ್ ಪಾಸ್, ಆರೋಗ್ಯ ಕಿಟ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ, ಮುಂದಿನ ದಿನಗಳಲ್ಲಿ ಹಲವಾರು ಕಡೆಗಳಲ್ಲಿ ನಿರಂತರವಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಚಿವ ಕೆ.ಎನ್ ನಾಗೇಗೌಡರು ಮಳವಳ್ಳಿಯಲ್ಲಿ ಮೆಡಿಕಲ್ ಕಾಲೇಜು ತರಬೇಕೆಂದು ಕನಸು ಕಂಡಿದ್ದರು. ಅವರು ನಮ್ಮೊಂದಿಗೆ ಇದಿದ್ದರೇ ಮುಖ್ಯಮಂತ್ರಿಯಾಗುತ್ತಿದ್ದರು, ಕೆ.ಎನ್ ನಾಗೇಗೌಡರ ಕನಸಿನಕೂಸು ಶಾಂತಿ ಕಾಲೇಜನ್ನು ಅಭಿವೃದ್ದಿಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಶಾಸಕಿ ನಾಗಮಣಿ ನಾಗೇಗೌಡ ಮಾತನಾಡಿ, ದೊಡ್ಡ ಕಂಪನಿಗಳಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಗಳನ್ನು ಕಂಪನಿ ಒಳಕ್ಕೂ ಬಿಡುವುದಿಲ್ಲ, ಲೋಹಿಯಾ ವಿಚಾರ ವೇದಿಕೆಯಿಂದ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬೇಕು, ಬಡವ ಶ್ರೀಮಂತ ಎಂಬ ಬೇಧವಿಲ್ಲದೇ ಸಮಾನರಾಗಿ  ಬದುಕಬೇಕೆಂದು ಕರೆ ನೀಡಿದರು.

ಉದ್ಯೋಗ ಮೇಳದಲ್ಲಿ ಸುಮಾರು 87ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು, ನೂರಾರು ನಿರುದ್ಯೋಗಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕುರುಬರ ಸಂಘದ ರಾಜ್ಯ ನಿರ್ದೇಶಕ ಪುಟ್ಟಬಸವಯ್ಯ, ಜಿಲ್ಲಾಧ್ಯಕ್ಷ ಸುರೇಶ್, ಕೌಶಲ್ಯ ಮತ್ತು ಅಭಿವೃದ್ದಿ ಅಧಿಕಾರಿ ನಾಗರಾಜ್, ಶಾಂತಿ ಕಾಲೇಜು ಕಾರ್ಯದರ್ಶಿ ಕೆಂಪಯ್ಯ, ಪ್ರಾಂಶುಪಾಲ ವೇದಮೂರ್ತಿ, ಶಿವಪ್ಪ, ಸಂಚಾಲಕರಾದ ತಳಗವಾದಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!