Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳಿಗೆ ಸೌಲಭ್ಯ ದೊರಕಿಸಿ ಕೊಡುವುದು ಸಮಾಜದ ಜವಾಬ್ದಾರಿ

ಇಂದಿನ ಮಕ್ಕಳಿಗೆ ಎಲ್ಲಾ ಹಕ್ಕುಗಳು ಮತ್ತು ಸೌಲಭ್ಯ-ಸವಲತ್ತುಗಳು ದೊರಕಿಸಿ ಕೊಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಧೀಶೆ ಎ.ಎಂ.ನಳಿನಕುಮಾರಿ ಹೇಳಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ಗುಡ್ ಷಫರ್ಡ್ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣ ಸ್ಪರ್ಧೆ ಹಾಗೂ ಪೋಷಕರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ಮನೆಯವರ ಆಸ್ತಿ ಅಲ್ಲದೆ, ಸಮಾಜದ ಆಸ್ತಿಯೂ ಆಗಿದ್ದಾರೆ, ಮಕ್ಕಳಾಗಿದ್ದವರು ಮುಂದಿನ ದಿನಗಳಲ್ಲಿ ಪ್ರಜೆಗಳಾಗಿ ಬಾಳಲು ಸಮಾಜದ ಜವಾಬ್ದಾರಿಯು ಬಹಳಷ್ಟಿದೆ, ಪೋಷಕರ ಕಾಳಜಿ ಮುಖ್ಯವಾಗಿರುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ವೇಷ ಭೂಷಣದಲ್ಲಿ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ವಿಜೇತ ಸ್ಪರ್ಧಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಸಾಡೇ ದೇವಾಲಯದ ಸಭಾಪಾಲ ಗ್ರೇಟ್‌ಘಲ್ ಜಯಶೇಖರ್, ಶಾಲೆಯ ಅಧ್ಯಕ್ಷ ಎ.ಜಾರ್ಜ್ ಮೋಹನ್‌ಕುಮಾರ್, ವಕೀಲ ನದೀಮ್ ಅಹಮ್ಮದ್, ಕೈಸ್ಥ ಪ್ರಗತಿಪರ ಸಂಘದ ಅಧ್ಯಕ್ಷ ರಾಮಯ್ಯ ಜೋಸೆಫ್, ಟ್ರಸ್ಟಿ ಎ.ರಿಚರ್ಡ್ ಕುಮಾರ್, ತೀರ್ಪುಗಾರರಾದ ಸ್ವಪ್ನಬೆಂಜಿ, ಪಿ.ದಿವ್ಯಾ, ಎ.ಮೋರಿಸ್ ಜಯಕುಮಾರಿ, ಸಂಸ್ಥಾಪಕ ವೈ.ಥಾಮಸ್‌ ಬೆಂಜಮಿನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!